IND vs ENG 5th Test: ಧರ್ಮಶಾಲಾದಲ್ಲಿ ಅತಿದೊಡ್ಡ ದಾಖಲೆ ಮುರಿಯಲಿರುವ ರೋಹಿತ್‌ ಶರ್ಮಾ..!

IND vs ENG 5ನೇ ಟೆಸ್ಟ್:  ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಅತಿದೊಡ್ಡ ದಾಖಲೆಯನ್ನು ನಿರ್ಮಿಸಲಿದ್ದಾರೆ. ಈ ದಾಖಲೆಯ ಮೂಲಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ವಿವ್ ರಿಚರ್ಡ್ಸ್ ಅವರನ್ನೂ ಹಿಂದಿಕ್ಕಲಿದ್ದಾರೆ. 

Written by - Puttaraj K Alur | Last Updated : Mar 4, 2024, 10:26 AM IST
  • ಧರ್ಮಶಾಲಾದಲ್ಲಿ ಅತಿದೊಡ್ಡ ದಾಖಲೆ ಮುರಿಯಲಿರುವ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ
  • ವೆಸ್ಟ್ ಇಂಡೀಸ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ವಿವ್ ರಿಚರ್ಡ್ಸ್ ದಾಖಲೆ ಬ್ರೇಕ್‌ ಮಾಡಲಿರುವ ಹಿಟ್‌ಮ್ಯಾನ್‌
  • ಮಾರ್ಚ್ 7ರಿಂದ ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ ಟೆಸ್ಟ್‌ ಪಂದ್ಯ
IND vs ENG 5th Test: ಧರ್ಮಶಾಲಾದಲ್ಲಿ ಅತಿದೊಡ್ಡ ದಾಖಲೆ ಮುರಿಯಲಿರುವ ರೋಹಿತ್‌ ಶರ್ಮಾ..! title=
ದಾಖಲೆ ನಿರ್ಮಿಸಲಿರುವ ರೋಹಿತ್‌ ಶರ್ಮಾ!

ರೋಹಿತ್ ಶರ್ಮಾ ದಾಖಲೆಗಳು: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಮಾರ್ಚ್ 7ರಿಂದ ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 3-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಭಾರತ ಈಗಾಗಲೇ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದೊಡ್ಡ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ. ಈ ದಾಖಲೆ ಮಾಡುವ ಮೂಲಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್‌ನ ಶ್ರೇಷ್ಠ ಬ್ಯಾಟ್ಸ್ ಮನ್ ವಿವಿಯನ್ ರಿಚರ್ಡ್ಸ್ ಅವರನ್ನು ಹಿಂದಿಕ್ಕಲಿದ್ದಾರೆ. 

ವಿವ್ ರಿಚರ್ಡ್ಸ್ ದಾಖಲೆ ಮುರಿಯಲಿರುವ ರೋಹಿತ್!

ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ 4 ಸಿಕ್ಸರ್‌ಗಳನ್ನು ಬಾರಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿರುವ ಆಟಗಾರರ ಪೈಕಿ ವೆಸ್ಟ್ ಇಂಡೀಸ್ ಶ್ರೇಷ್ಠ ಬ್ಯಾಟ್ಸ್‌ಮನ್ ವಿವ್ ರಿಚರ್ಡ್ಸ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಸದ್ಯ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ 81 ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ. ಅದೇ ರೀತಿ ವಿವ್ ರಿಚರ್ಡ್ಸ್ 84 ಸಿಕ್ಸರ್‌ಗಳನ್ನು ಬಾರಿಸಿದ್ದರು. ರೋಹಿತ್ ಶರ್ಮಾ ಅವರು ಧರ್ಮಶಾಲಾದಲ್ಲಿ ಕೇವಲ 4 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ವೆಸ್ಟ್ ಇಂಡೀಸ್ ಶ್ರೇಷ್ಠ ಬ್ಯಾಟ್ಸ್‌ಮನ್ ವಿವ್ ರಿಚರ್ಡ್ಸ್ ಅವರ ಈ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. 

ಇದನ್ನೂ ಓದಿ: IND vs ENG 5th Test: ವಿರಾಟ್‌ ಕೊಹ್ಲಿ ಟೆಸ್ಟ್​ ಆಡದಿರುವುದು ನಾಚಿಕೆಗೇಡಿನ ಸಂಗತಿ- ಅ್ಯಂಡರ್ಸನ್

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿರುವ ಬೆನ್ ಸ್ಟೋಕ್ಸ್ !

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವ ದಾಖಲೆಯು ಇಂಗ್ಲೆಂಡ್‌ನ ಆಲ್‌ರೌಂಡರ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 128 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ರೋಹಿತ್ ಶರ್ಮಾ 594 ಅಂತಾರಾಷ್ಟ್ರೀಯ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 2ನೇ ಸ್ಥಾನದಲ್ಲಿದ್ದು, ಅವರು 553 ಅಂತಾರಾಷ್ಟ್ರೀಯ ಸಿಕ್ಸರ್ ಬಾರಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿರುವ ಬ್ಯಾಟ್ಸ್‌ಮನ್  

128 ಸಿಕ್ಸರ್‌ಗಳು - ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
107 ಸಿಕ್ಸರ್‌ಗಳು - ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್)
100 ಸಿಕ್ಸರ್‌ಗಳು - ಆಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ)
98 ಸಿಕ್ಸರ್‌ಗಳು - ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)
97 ಸಿಕ್ಸರ್‌ಗಳು - ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ)
91 ಸಿಕ್ಸರ್‌ಗಳು - ವೀರೇಂದ್ರ ಸೆಹ್ವಾಗ್ (ಭಾರತ)
88 ಸಿಕ್ಸರ್‌ಗಳು - ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
87 ಸಿಕ್ಸರ್‌ಗಳು - ಕ್ರಿಸ್ ಕ್ರೇನ್ಸ್ (ನ್ಯೂಜಿಲೆಂಡ್)
87 ಸಿಕ್ಸರ್‌ಗಳು - ಟಿಮ್ ಸೌಥಿ (ನ್ಯೂಜಿಲೆಂಡ್)
85 ಸಿಕ್ಸರ್‌ಗಳು - ಏಂಜೆಲೊ ಮ್ಯಾಥ್ಯೂಸ್ (ಶ್ರೀಲಂಕಾ)
84 ಸಿಕ್ಸರ್‌ಗಳು - ವಿವ್ ರಿಚರ್ಡ್ಸ್ (ವೆಸ್ಟ್ ಇಂಡೀಸ್)
82 ಸಿಕ್ಸರ್‌ಗಳು - ಆಂಡ್ರ್ಯೂ ಫ್ಲಿಂಟಾಫ್ (ಇಂಗ್ಲೆಂಡ್)
82 ಸಿಕ್ಸರ್‌ಗಳು - ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
81 ಸಿಕ್ಸರ್‌ಗಳು - ರೋಹಿತ್ ಶರ್ಮಾ (ಭಾರತ)

ರೋಹಿತ್‌ಗೆ 600 ಸಿಕ್ಸರ್‌ಗಳನ್ನು ಪೂರೈಸುವ ಅವಕಾಶ! 

ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನೂ 6 ಸಿಕ್ಸರ್‌ಗಳನ್ನು ಬಾರಿಸಿದರೆ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳನ್ನು ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಆಗಲಿದ್ದಾರೆ. ರೋಹಿತ್ ಶರ್ಮಾ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 594 ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ನಂತರ ಕ್ರಿಸ್ ಗೇಲ್ 553 ಅಂತಾರಾಷ್ಟ್ರೀಯ ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್     

594 ಸಿಕ್ಸರ್‌ಗಳು - ರೋಹಿತ್ ಶರ್ಮಾ (ಭಾರತ)
553 ಸಿಕ್ಸರ್‌ಗಳು - ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)
476 ಸಿಕ್ಸರ್‌ಗಳು - ಶಾಹಿದ್ ಅಫ್ರಿದಿ (ಪಾಕಿಸ್ತಾನ)
398 ಸಿಕ್ಸರ್‌ಗಳು - ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್)
383 ಸಿಕ್ಸರ್‌ಗಳು - ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)
359 ಸಿಕ್ಸರ್‌ಗಳು - ಮಹೇಂದ್ರ ಸಿಂಗ್ ಧೋನಿ (ಭಾರತ)

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್     

594 ಸಿಕ್ಸರ್‌ಗಳು - ರೋಹಿತ್ ಶರ್ಮಾ
359 ಸಿಕ್ಸರ್‌ಗಳು - ಮಹೇಂದ್ರ ಸಿಂಗ್ ಧೋನಿ
294 ಸಿಕ್ಸರ್‌ಗಳು - ವಿರಾಟ್ ಕೊಹ್ಲಿ
264 ಸಿಕ್ಸರ್‌ಗಳು - ಸಚಿನ್ ತೆಂಡೂಲ್ಕರ್
251 ಸಿಕ್ಸರ್‌ಗಳು - ಯುವರಾಜ್ ಸಿಂಗ್
247 ಸಿಕ್ಸರ್‌ಗಳು - ಸೌರವ್ ಗಂಗೂಲಿ
243 ಸಿಕ್ಸರ್‌ಗಳು - ವೀರೇಂದ್ರ ಸೆಹ್ವಾಗ್

ಇದನ್ನೂ ಓದಿ: Celebrity Cricket League 2024: ಚೆನ್ನೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News