ನವದೆಹಲಿ: ಟೆಸ್ಟ್ ಕ್ರಿಕೆಟಿನಲ್ಲಿ ಆರಂಭಿಕ ಆಟಗಾರನಾಗಿ ತಮ್ಮ ಮೊದಲ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತದ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಸೋಮವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ವೃತ್ತಿಜೀವನದ ಅತ್ಯುತ್ತಮ 17ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ರೋಹಿತ್ 36 ಟೆಸ್ಟ್ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ 176 ಮತ್ತು 127 ರನ್ ಗಳಿಸುವ ಮೂಲಕ ಭಾರತದ ಗೆಲುವಿಗೆ ಕಾರಣರಾಗಿದ್ದರು. ಇನ್ನೊಂದೆಡೆಗೆ ಮಾಯಾಂಕ್ ಅಗರ್ವಾಲ್ ಅವರ ಮೊದಲ ಇನ್ನಿಂಗ್ಸ್ ನಲ್ಲಿ ಡಬಲ್ ಸೆಂಚುರಿ ಗಳಿಸುವ ಮೂಲಕ 38 ಸ್ಥಾನಗಳ ಜಿಗಿತ ಕಂಡು ವೃತ್ತಿಜೀವನದ ಅತ್ಯುತ್ತಮ 25 ನೇ ಸ್ಥಾನವನ್ನು ಗಳಿಸಿದ್ದಾರೆ.
ಎರಡನೇ ಸ್ಥಾನವನ್ನು ಉಳಿಸಿಕೊಂಡ ಕ್ಯಾಪ್ಟನ್ ವಿರಾಟ್ ಕೊಹ್ಲಿ, 2018 ರ ಜನವರಿಯ ನಂತರ ಮೊದಲ ಬಾರಿಗೆ 900 ಅಂಕಗಳಿಗಿಂತ ಕೆಳಗಿಳಿದಿದ್ದಾರೆ. ಈಗ ಅವರು 899 ಪಾಯಿಂಟ್ಗಳಲ್ಲಿದ್ದಾರೆ, ಆಸ್ಟ್ರೇಲಿಯಾದ ಅಗ್ರ ಶ್ರೇಯಾಂಕದ ಸ್ಟೀವ್ ಸ್ಮಿತ್ಗಿಂತ 38 ಅಧಿಕ ಅಂಕಗಳನ್ನು ಹೊಂದಿದ್ದಾರೆ.
ಬೌಲರ್ಗಳಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಎಂಟು ವಿಕೆಟ್ಗಳನ್ನು ಗಳಿಸಿದ ನಂತರ ಅಗ್ರ 10 ಸ್ಥಾನಗಳಿಗೆ ಮರಳಿದ್ದಾರೆ. ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ವೃತ್ತಿಜೀವನದ ಅತ್ಯುತ್ತಮ 710 ಅಂಕಗಳನ್ನು ಗಳಿಸುವ ಮೂಲಕ 18 ರಿಂದ 16 ನೇ ಸ್ಥಾನಕ್ಕೆ ಜಿಗಿದಿದ್ದಾರೆ.