ಲಂಕಾ ವಿರುದ್ಧದ 2ನೇ ಏಕದಿನದಲ್ಲಿ ಪ್ರಮುಖ ಬದಲಾವಣೆ... ಟೀಂ ಇಂಡಿಯಾದಿಂದ ಆ ಆಟಗಾರ ಔಟ್! ಬದಲಿ ಅವಕಾಶ ಈತನ ಪಾಲು

India vs Sri Lanka: ಟೀಂ ಇಂಡಿಯಾ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿರುವ ರೀತಿ ನೋಡಿದರೆ ಎರಡನೇ ಪಂದ್ಯದಲ್ಲಿ ಕೆಲ ಆಟಗಾರರ ಅವಕಾಶ ಕೈ ತಪ್ಪುವುದು ಖಚಿತ ಎನಿಸುತ್ತಿದೆ. ಇದರ ಜೊತೆಗೆ ಎರಡನೇ ಏಕದಿನ ಪಂದ್ಯಕ್ಕೆ ವಿಶೇಷ ಆಟಗಾರನನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ.  

Written by - Bhavishya Shetty | Last Updated : Aug 3, 2024, 05:01 PM IST
    • ಭಾರತ ಮತ್ತು ಶ್ರೀಲಂಕಾ ನಡುವಿನ 2ನೇ ಏಕದಿನದಲ್ಲಿ ಪ್ರಮುಖ ಬದಲಾವಣೆ
    • ಭಾರತ ತಂಡದಲ್ಲಿ ರಿಯಾನ್ ಪರಾಗ್‌ʼಗೆ ಅವಕಾಶ ಸಿಗುವ ಸಾಧ್ಯತೆ
    • ಮುಂದಿನ 2 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕಾದ ಪರಿಸ್ಥಿತಿ ಎದುರಾಗಿದೆ
ಲಂಕಾ ವಿರುದ್ಧದ 2ನೇ ಏಕದಿನದಲ್ಲಿ ಪ್ರಮುಖ ಬದಲಾವಣೆ... ಟೀಂ ಇಂಡಿಯಾದಿಂದ ಆ ಆಟಗಾರ ಔಟ್! ಬದಲಿ ಅವಕಾಶ ಈತನ ಪಾಲು title=
File Photo

India vs Sri Lanka: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕವಾಗಿ ನಡೆದಿದ್ದು, ಡ್ರಾಗೊಂಡಿತ್ತು. ಶ್ರೀಲಂಕಾ ಭಾರತಕ್ಕೆ 231 ರನ್ ಗುರಿ ನೀಡಿತ್ತು. ಆದರೆ ಭಾರತದ ಬ್ಯಾಟ್ಸ್‌ಮನ್‌ʼಗಳ ಕಳಪೆ ಬ್ಯಾಟಿಂಗ್‌ನಿಂದ ಪಂದ್ಯ ಟೈ ಆಗಿತ್ತು. ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಸತತ ಎಸೆತಗಳಲ್ಲಿ ಕೊನೆಯ ಎರಡು ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾವನ್ನು  230 ರನ್ʼಗಳಿಗೆ ಸೀಮಿತಗೊಳಿಸಿದರು.

ಇದನ್ನೂ ಓದಿ: ಅಂದು "ನೀನ್ಯಾವ ಸೀಮೆ ನಟ" ಅಂದ್ರು... 1000 ರೂ.ಗೆ ನಿರ್ಮಾಪಕನಿಂದ ಹೊರದಬ್ಬಿಸಿಕೊಂಡ ಆತ ಇಂದು 100 ಕೋಟಿ ಸಂಭಾವನೆ ಪಡೆಯುವ ಖ್ಯಾತ ನಟ!

ಈ ಪಂದ್ಯದಲ್ಲಿ ಟೀಂ ಇಂಡಿಯಾ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿರುವ ರೀತಿ ನೋಡಿದರೆ ಎರಡನೇ ಪಂದ್ಯದಲ್ಲಿ ಕೆಲ ಆಟಗಾರರ ಅವಕಾಶ ಕೈ ತಪ್ಪುವುದು ಖಚಿತ ಎನಿಸುತ್ತಿದೆ. ಇದರ ಜೊತೆಗೆ ಎರಡನೇ ಏಕದಿನ ಪಂದ್ಯಕ್ಕೆ ವಿಶೇಷ ಆಟಗಾರನನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ.

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ರಿಯಾನ್ ಪರಾಗ್‌ʼಗೆ ಅವಕಾಶ ಸಿಗುವ ಸಾಧ್ಯತೆ ಇದೆ. ವಾಷಿಂಗ್ಟನ್ ಸುಂದರ್ ಅವರನ್ನು ಕೈಬಿಡುವ ಮೂಲಕ ರಿಯಾನ್ ಪರಾಗ್ ಪ್ಲೇಯಿಂಗ್ ಹನ್ನೊಂದರಲ್ಲಿ ಸ್ಥಾನ ಪಡೆಯಬಹುದು. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಕೇವಲ 1 ವಿಕೆಟ್ ಪಡೆದಿದ್ದರು. ಬಳಿಕ ಬ್ಯಾಟಿಂಗ್‌ʼನಲ್ಲಿ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಇದನ್ನೂ ಓದಿ: ಇವರೇ ಟೀಂ ಇಂಡಿಯಾ ಕೋಚ್‌ ಗೌತಮ್‌ ಗಂಭೀರ್‌ ಪತ್ನಿ: ಅಂದು ವಿಶ್ವಕಪ್‌ ಮುಗಿದಿದ್ದೇ ತಡ... ರಾಜಮನೆತನದ ಯುವತಿಯನ್ನ ಪ್ರೀತಿಸಿ ಮದ್ವೆಯಾಗಿದ್ರು ಗಂಭೀರ್

ಮೊದಲ ಏಕದಿನ ಪಂದ್ಯ ಟೈ ಆಗಿದ್ದರಿಂದ ಮುಂದಿನ 2 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕಾದ ಪರಿಸ್ಥಿತಿ ಎದುರಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News