Anchor sowmya rao: ಜಬರ್ದಸ್ತ್ ಅತ್ಯಂತ ಜನಪ್ರಿಯ ಹಾಸ್ಯ ಕಾರ್ಯಕ್ರಮವಾಗಿದೆ. ಈ ಶೋ ಮೂಲಕ ಅನೇಕ ಜನ ಸಾಮಾನ್ಯರು ಸ್ಟಾರ್ ಆಗಿದ್ದಾರೆ. ಅದರಲ್ಲೂ ಅನಸೂಯಾ ಮತ್ತು ರಶ್ಮಿ ಗೌತಮ್ ಅವರ ಭವಿಷ್ಯವನ್ನೇ ಬದಲಿಸಿದ ಶೋ ಇದು. ವರ್ಷಗಳ ಕಾಲ ಇಬ್ಬರೂ ಜಬರ್ದಸ್ತ್ ಶೋನಲ್ಲಿ ತಮ್ಮ ಗ್ಲಾಮರ್ ಮೂಲಕ ರಂಜಿಸಿದರು. ಅನಸೂಯಾ 2022 ರಲ್ಲಿ ಜಬರ್ದಸ್ತ್ ತ್ಯಜಿಸಿದರು.
ಅನಸೂಯಾ ನಿರ್ಗಮಿಸಿದ ನಂತರ, ರಶ್ಮಿ ಜಬರ್ದಸ್ತ್ ಮತ್ತು ಎಕ್ಸ್ಟ್ರಾ ಜಬರ್ದಸ್ತ್ ಶೋಗಳಿಗೆ ಆಂಕರ್ ಆಗಿ ಕಾರ್ಯನಿರ್ವಹಿಸಿದರು. ಕೆಲವು ಸಂಚಿಕೆಗಳ ನಂತರ ಕನ್ನಡದ ಹುಡುಗಿ ಸೌಮ್ಯಾ ರಾವ್ ಅವರನ್ನು ಕರೆತರಲಾಯಿತು. ಸೌಮ್ಯಾ ರಾವ್ ಒಂದು ವರ್ಷಕ್ಕೂ ಹೆಚ್ಚು ಕಾಲ ಜಬರ್ದಸ್ತ್ ಶೋ ಮಾಡಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಸೌಮ್ಯಾ ರಾವ್ ಸಹ ಜಬರ್ದಸ್ತ್ ಶೋ ಬಿಟ್ಟರು..
ಬಳಿಕ ಅವರ ಸ್ಥಾನಕ್ಕೆ ಬಿಗ್ ಬಾಸ್ ಖ್ಯಾತಿಯ ಸಿರಿ ಹನ್ಮಂತ್ ಬಂದರು. ಆದರೆ ಈ ಹಿಂದೆ ಸೌಮ್ಯಾ ರಾವ್ ಜಬರ್ದಸ್ತ್ ತೊರೆಯಲು ಕಾರಣಗಳನ್ನು ಬಹಿರಂಗಪಡಿಸಿದ್ದರು. ಕೆಲವರಿಗೆ ಆಕೆಯ ಆ್ಯಂಕರಿಂಗ್ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ. ಅಲ್ಲದೇ ತನಗೆ ತೆಲುಗು ಬರುವುದಿಲ್ಲ. ತೆಲುಗಿನಲ್ಲಿ ಸುಂದರ ಹುಡುಗಿಯರಿರುವಾಗ ಈ ಕನ್ನಡದ ಹುಡುಗಿಯನ್ನು ಏಕೆ ತೆಗೆದುಕೊಂಡರು ಎಂದು ಟೀಕಿಸಿದ್ದಾರೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ..
ಇದನ್ನೂ ಓದಿ-ಹೊಸವರ್ಷದ ಆರಂಭದ ದಿನ ಪೋಸ್ಟರ್ ಬಿಡುಗಡೆ ಮಾಡಿ ನಾಯಕಿಯನ್ನು ಸ್ವಾಗತಿಸಿದ 'ಬಲರಾಮನ ದಿನಗಳು’ ಚಿತ್ರತಂಡ ..!
ಈ ಬಗ್ಗೆ ಮಾತನಾಡಿದ ಅವರು "ನನಗೂ ಆ್ಯಂಕರ್ ಆಗಿ ಅನುಭವ ಇಲ್ಲ. ಸ್ಕಿಟ್‌ಗಳಲ್ಲಿನ ಜೋಕ್‌ಗಳು ಸಹ ಅರ್ಥವಾಗುವುದಿಲ್ಲ. ನನ್ನ ತೆಲುಗು ಸ್ವಲ್ಪ ವೀಕ್.. ಅಲ್ಲದೆ ನನಗೆ ಡಾನ್ಸ್ ಮಾಡಲು ಬರುವುದಿಲ್ಲ. ಅದಕ್ಕಾಗಿ ನಾಣು ಡಾನ್ಸ್ ಕ್ಲಾಸ್‌ಗೂ ಹೋಗಿದ್ದೆ. ನಾನು ಮೊದಲೇ ತೆಳ್ಳಗಿದ್ದೇ.. ದಿನ ಡಾನ್ಸ್ ಮಾಡುವುದರಿಂದ ಮತ್ತಷ್ಟು ತೆಳ್ಳಗಾದೇ ಹೀಗಾಗಿ ಜಬರ್ದಸ್ತ್ ನಿರ್ದೇಶಕ ಡಾನ್ಸ್ ಪ್ರಾಕ್ಟೀಸ್ ಮಾಡುಂತಿಲ್ಲ.. ನೀವೂ ಇನ್ನೂ ತೆಳ್ಳಗಾದರೇ ಒಳ್ಳೆಯದಲ್ಲ. ಸ್ವಲ್ಪ ತಿಂದು ಚೆನ್ನಾಗಿರಿ ಎಂದು ಹೇಳಿದರು.. ಆದರೆ ನಾನು ಹಳೆ ಆ್ಯಂಕರ್‌ಗಳಂತೆ ನಾನು ಮನರಂಜನೆ ನೀಡಲು ಸಾಕಷ್ಟು ಪ್ರಯತ್ನಿಸಿದೆ" ಸೌಮ್ಯಾ ರಾವ್ ಹೇಳಿದ್ದಾರೆ.
ಇದನ್ನೂ ಓದಿ-ಹೊಸವರ್ಷದ ಆರಂಭದ ದಿನ ಪೋಸ್ಟರ್ ಬಿಡುಗಡೆ ಮಾಡಿ ನಾಯಕಿಯನ್ನು ಸ್ವಾಗತಿಸಿದ 'ಬಲರಾಮನ ದಿನಗಳು’ ಚಿತ್ರತಂಡ ..!
ಸೌಮ್ಯಾ ರಾವ್ ಅವರ ಇತ್ತೀಚಿನ ಸಂದರ್ಶನದಲ್ಲಿ, ಕಾಸ್ಟಿಂಗ್ ಕೌಚ್ ಆರೋಪಗಳು ಸಂಚಲನವನ್ನು ಉಂಟುಮಾಡುತ್ತಿವೆ. "ಪ್ರತಿಯೊಂದು ಉದ್ಯಮದಲ್ಲೂ ಕಾಸ್ಟಿಂಗ್ ಕೌಚ್ ಇರುತ್ತದೆ. ಆ ಸಮಸ್ಯೆಯನ್ನು ನಾನು ಎದುರಿಸಿದ್ದೇನೆ" ಎಂದು ಸೌಮ್ಯಾರಾವ್ ಅಸಹನೆ ವ್ಯಕ್ತಪಡಿಸಿದರು. ವಿಶೇಷವಾಗಿ ಕನ್ನಡ ಇಂಡಸ್ಟ್ರಿಯ ಬಗ್ಗೆ ಸೌಮ್ಯಾ ರಾವ್ ತೀವ್ರ ಅಸಹಿಷ್ಣುತೆ ವ್ಯಕ್ತಪಡಿಸಿದ್ದು, "ನನಗೆ ಕನ್ನಡ ಇಂಡಸ್ಟ್ರಿ ಬಗ್ಗೆ ಒಲವಿಲ್ಲ. ಅವರು ಪ್ರತಿಭಾವಂತರನ್ನು ಆಂಕರ್ ಮಾಡುವುದಿಲ್ಲ. ಹಾಗಾಗಿಯೇ ಕನ್ನಡ ಇಂಡಸ್ಟ್ರಿ ಹಿಂದೆ ಬಿದ್ದಿದೆ. ಭವಿಷ್ಯದಲ್ಲಿ ಇನ್ನೂ ಹಿಂದೆ ಉಳಿಯಲಿದೆ" ಎಂದು ಸೌಮ್ಯಾರಾವ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ..
ಟಾಲಿವುಡ್ ನಲ್ಲೂ ಕಾಸ್ಟಿಂಗ್ ಕೌಚ್ ಇದೆ. ಆದರೆ ನಾನು ಇಲ್ಲಿ ಅಂತಹ ಸಮಸ್ಯೆಯನ್ನು ಎದುರಿಸಲಿಲ್ಲ. ಆದರೆ ಕನ್ನಡದಲ್ಲಿ ಕೆಲವರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು. ನಟರು ಮಾತ್ರವಲ್ಲ.. ನಿರ್ದೇಶಕರು ಮತ್ತು ನಿರ್ಮಾಪಕರು ಸಹ ಕಮಿಟ್‌ಮೆಂಟ್ ಕೇಳುತ್ತಾರೆ ಎಂದು ಸೌಮ್ಯಾ ರಾವ್ ಮುಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದ್ದರೂ ನನಗೆ ಯಾವುದೇ ಅನುಭವವಾಗಿಲ್ಲ ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್