ನವದೆಹಲಿ: ಬರೋಬ್ಬರಿ ನವಂಬರ್ 15 ಕ್ಕೆ ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆಗೊಂಡು ಒಟ್ಟು 29 ವರ್ಷವಾಯಿತು.
ಹೌದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈಗ ಸ್ವತಃ ತಮ್ಮ ಟ್ವಿಟ್ಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.ಟ್ವೀಟ್ ನಲ್ಲಿ ಸಚಿನ ಅವರು ಪ್ರತಿಕ್ರಿಯಿಸುತ್ತಾ" ಪ್ರತಿವರ್ಷ ಈ ಹಲವಾರು ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಈ ದಿನ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿದ್ದು, ಭಾರತವನ್ನು ೨೪ ವರ್ಷಗಳ ಕಾಲ ಪ್ರತಿನಿಧಿಸಿದ್ದು ಗೌರವದ ಸಂಗತಿ" ಎಂದು ಅವರು ಟ್ವೀಟ್ ಮಾಡಿದ್ದಾರೆ.
This day, every year, brings back so many memories of the day I 1st represented India. It was an honour to play for the country and be able to represent India for 24 years. #TBT #ThrowbackThursday pic.twitter.com/k6cT1aT5XE
— Sachin Tendulkar (@sachin_rt) November 15, 2018
ಪಾಕಿಸ್ತಾನದ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ನವಂಬರ್ 15 1989 ರಂದು ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ ಅವರು 15 ರನ್ ಗಳನ್ನು ಗಳಿಸಿದ್ದರು.ವಿಶೇಷವೆಂದರೆ ಈ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ವಾಖರ್ ಯೂನಿಸ್ ಕೂಡ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದರು.
ಈಗ ಬಿಸಿಸಿಐ ಕೂಡ ಸಚಿನ್ ಅವರು ಟೆಸ್ಟ್ ಗೆ ಪಾದಾರ್ಪಣೆ ಮಾಡಿರುವ ದಿನವನ್ನು ಸ್ಮರಿಸಿ" ಈ ದಿನದಂದು ಗಡಿಯಾರ ಮತ್ತೆ ತಿರುಗಿದಂತೆ 1989 ರಲ್ಲಿ ಸಚಿನ್ ಅವರು ಟೆಸ್ಟ್ ನಲ್ಲಿ ಪಾದಾರ್ಪಣೆ ಮಾಡಿದರು.2013 ರಲ್ಲಿ ಲೆಜೆಂಡ್ ಆಟಗಾರನಾಗಿ ಹೊರಬಂದರು ಎಂದು ಟ್ವೀಟ್ ಮಾಡಿದೆ.