ಸೆಂಚೂರಿಯನ್: ಇಲ್ಲಿನ ಸೂಪರ್ಸ್ಪೋರ್ಟ್ ಪಾರ್ಕ್ ನ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಇನಿಂಗ್ಸ್ ಸಹಿತ 32 ರನ್ ಗಳ ಹೀನಾಯ ಸೋಲನ್ನು ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡವು ಅದಕ್ಕೆ ತಕ್ಕನಾಗಿಯೇ ಬೌಲಿಂಗ್ ಮಾಡಿತು,ರಬಾಡಾ ಹಾಗೂ ಬರ್ಗರ್ ಕ್ರಮವಾಗಿ ಐದು ಹಾಗೂ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಟೀಮ್ ಇಂಡಿಯಾವನ್ನು 245 ರನ್ ಗಳಿಗೆ ಅಲೌಟ್ ಮಾಡುವಲ್ಲಿ ಯಶಸ್ವಿಯಾದರು.
ಈ ನಡುವೆ ಏಕಾಂಗಿ ಹೋರಾಟ ನಡೆಸಿದ ಕೆ.ಎಲ್ ರಾಹುಲ್ ಕೇವಲ 137 ಎಸೆತಗಳಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಹಾಗೂ 14 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿದರು.ಇವರನ್ನು ಹೊರತು ಪಡಿಸಿದರೆ ಉಳಿದ ಯಾವ ಆಟಗಾರನು ಸಹಿತ 40 ರ ಗಡಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ.
A statement victory from South Africa to kick off their #WTC25 campaign in style 💪
How the first #SAvIND Test played out 👇https://t.co/ErgbetWUiu
— ICC (@ICC) December 28, 2023
ಇನ್ನೊಂದೆಡೆಗೆ ಪ್ರಥಮ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ಎಲ್ಗರ್ 185 ಹಾಗೂ ಮಾರ್ಕೋ ಜಾನ್ಸನ್ 84, ಬೇಡಿಂಗ್ ಹ್ಯಾಮ್ ಅವರ 56 ರನ್ ಗಳ ನೆರವಿನಿಂದ 408 ರನ್ ಗಳಿಗೆ ಆಲೌಟ್ ಆಯಿತು.ಟೀಮ್ ಇಂಡಿಯಾದ ಪರವಾಗಿ ಬುಮ್ರಾ ನಾಲ್ಕು ವಿಕೆಟ್ ಗಳನ್ನು ಪಡೆಯುವ ಮೂಲಕ ಗಮನ ಸೆಳೆದರು.
ಇದಕ್ಕೆ ಉತ್ತರವಾಗಿ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ತಂಡವು 131 ರನ್ ಗಳಿಗೆ ಆಲೌಟ್ ಆಯಿತು, ಟೀಮ್ ಇಂಡಿಯಾದ ಪರವಾಗಿ ವಿರಾಟ್ ಕೊಹ್ಲಿ 76, ಶುಬ್ಮನ್ ಗಿಲ್ 26 , ರನ್ ಗಳಿಸಿದ್ದು ಬಿಟ್ಟರೆ ನಾಲ್ಕು ಆಟಗಾರರು ಶೂನ್ಯ ರನ್ ಗಳಿಸಿದರು. ಇದರಿಂದಾಗಿ ಅಂತಿಮವಾಗಿ ಟೀಮ್ ಇಂಡಿಯಾ ಇನಿಂಗ್ಸ್ ಸಹಿತ 32 ರನ್ ಗಳ ಸೋಲನ್ನು ಅನುಭವಿಸಿತು.ದಕ್ಷಿಣ ಆಫ್ರಿಕಾದ ಪರವಾಗಿ ಬರ್ಗರ್ ನಾಲ್ಕು,ಮಾರ್ಕೋ ಜಾನ್ಸನ್ ಮೂರು ವಿಕೆಟ್ ಗಳನ್ನು ಪಡೆಯುವ ಮೂಲಕ ಟೀಮ್ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.