T20 World Cup 2022: ಟಿ-20 ವಿಶ್ವಕಪ್ ನಂತರ ನಾಯಕತ್ವ ತೊರೆಯಲಿದ್ದಾನೆ ಈ ಕ್ಯಾಪ್ಟನ್!

T20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ನಾಯಕತ್ವಕ್ಕೆ ಗುಡ್ ಬೈ ಹೇಳಬಹುದು ಎಂದು ವರದಿಯಾಗಿದೆ.

Written by - Puttaraj K Alur | Last Updated : Nov 7, 2022, 05:29 PM IST
  • ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸಂಪೂರ್ಣ ವಿಫಲರಾಗಿರುವ ಬಾಬರ್ ಆಜಂ
  • ಪಾಕಿಸ್ತಾನ ಸೂಪರ್ ಲೀಗ್‌ನ ಮುಂದಿನ ಋತುವಿಗೂ ಮೊದಲೇ ಕರಾಚಿ ಕಿಂಗ್ಸ್ ನಾಯಕತ್ವಕ್ಕೆ ಗುಡ್ ಬೈ
  • ಪಾಕಿಸ್ತಾನ ತಂಡದ ನಾಯಕತ್ವದಿಂದಲೂ ಕೆಳಗಿಳಿಯುವಂತೆ ಬಾಬರ್ ಆಜಂಗೆ ಹಿರಿಯ ಆಟಗಾರರ ಒತ್ತಡ
T20 World Cup 2022: ಟಿ-20 ವಿಶ್ವಕಪ್ ನಂತರ ನಾಯಕತ್ವ ತೊರೆಯಲಿದ್ದಾನೆ ಈ ಕ್ಯಾಪ್ಟನ್! title=
ನಾಯಕತ್ವಕ್ಕೆ ಗುಡ್ ಬೈ ಹೇಳ್ತಾರಾ ಬಾಬರ್?

ನವದೆಹಲಿ: T20 ವಿಶ್ವಕಪ್ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಕೆಟ್ಟ ಸುದ್ದಿ ಹೊರಬೀಳುತ್ತಿದೆ. ಈ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿರುವ ತಂಡದ ನಾಯಕ ಶೀಘ್ರದಲ್ಲೇ ನಾಯಕತ್ವ ತೊರೆಯಬಹುದು. ಇದನ್ನು ಮಾಜಿ ಅನುಭವಿ ಆಟಗಾರರೊಬ್ಬರು ಬಹಿರಂಗಪಡಿಸಿದ್ದಾರೆ. ಈ ಆಟಗಾರ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್ ಆಗಿ ಸಂಪೂರ್ಣ ವಿಫಲರಾಗಿದ್ದಾರೆ.

ಈ ಕ್ಯಾಪ್ಟನ್ ನಾಯಕತ್ವ ತೊರೆಯಬಹುದು

T20 ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ನವೆಂಬರ್ 9ರಂದು ಸಿಡ್ನಿಯಲ್ಲಿ ಮುಖಾಮುಖಿಯಾಗಲಿವೆ. ಅದೇ ರೀತಿ 2ನೇ ಸೆಮಿಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನ.10ರಂದು ನಡೆಯಲಿದೆ. ಈ ದೊಡ್ಡ ಪಂದ್ಯಗಳಿಗೂ ಮುನ್ನವೇ ಪಾಕಿಸ್ತಾನದ ನಾಯಕ ಬಾಬರ್ ಆಜಂ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಪಾಕಿಸ್ತಾನ ಸೂಪರ್ ಲೀಗ್‌ನ ಮುಂದಿನ ಋತುವಿಗೂ ಮೊದಲು ಅವರು ಕರಾಚಿ ಕಿಂಗ್ಸ್‌ನ ನಾಯಕತ್ವದಿಂದ ಕೆಳಗಿಳಿಯಬಹುದು.

ಇದನ್ನೂ ಓದಿ: ‘ICC Men's Player of the Month’ ಎನಿಸಿಕೊಂಡ ಕಿಂಗ್ ಕೊಹ್ಲಿ: ಮೊದಲ ಬಾರಿಗೆ ಈ ಪ್ರಶಸ್ತಿ ಪಡೆದ ವಿರಾಟ್

ವರದಿಗಳ ಪ್ರಕಾರ, ಕರಾಚಿ ಕಿಂಗ್ಸ್ ತಂಡದ ನಿರ್ದೇಶಕ ವಾಸಿಂ ಅಕ್ರಮ್ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಬಾಬರ್ ಆಜಂ ಇನ್ನು ಮುಂದೆ ತಂಡದ ಜೊತೆಗಿರಲು ಬಯಸುವುದಿಲ್ಲ. ಫ್ರಾಂಚೈಸಿ ಶೀಘ್ರದಲ್ಲೇ ಹೊಸ ನಾಯಕನನ್ನು ಘೋಷಿಸಬಹುದು. ಕಳೆದ ಋತುವಿನಲ್ಲಿ ಬಾಬರ್ ನಾಯಕತ್ವದಲ್ಲಿ ಈ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಬಾಬರ್ 2ನೇ ಸೀಸನ್‌ನಿಂದ ಈ ತಂಡದೊಂದಿಗಿದ್ದಾರೆ.   

T20 ವಿಶ್ವಕಪ್‍ನಲ್ಲಿ ಬಾಬರ್ ಸಂಪೂರ್ಣ ವಿಫಲ

2022ರ ಟಿ-20 ವಿಶ್ವಕಪ್‌ನಲ್ಲಿ ಬಾಬರ್ ಆಜಂ ಸಂಪೂರ್ಣ ವಿಫಲರಾಗಿದ್ದಾರೆ. ಈ ಟೂರ್ನಿಯಲ್ಲಿ ಬಾಬರ್ ಇದುವರೆಗೆ 5 ಪಂದ್ಯಗಳಲ್ಲಿ 7.80 ಸರಾಸರಿಯಲ್ಲಿ 39 ರನ್ ಗಳಿಸಿದ್ದಾರೆ. ಈ 5 ಇನ್ನಿಂಗ್ಸ್‌ಗಳಲ್ಲಿ ಬಾಬರ್ ಒಂದೇ ಬಾರಿ 20 ರನ್ ಗಡಿ ದಾಟಿದ್ದಾರೆ. ಹೀಗಾಗಿ ತಂಡದ ನಾಯಕತ್ವದಿಂದ ಬಾಬರ್ ಕೆಳಗಿಳಿಯುವುದು ಸೂಕ್ತವೆಂದು ಈಗಾಗಲೇ ಪಾಕ್ ತಂಡದ ಹಿರಿಯ ಆಟಗಾರರು ಟೀಕಿಸಿದ್ದಾರೆ. ಹೀಗಾಗಿ ಕಳಪೆ ಪ್ರದರ್ಶನ ಹಿನ್ನೆಲೆ ಮುಂದಿನ ದಿನಗಳಲ್ಲಿ ಪಾಕ್ ತಂಡದ ನಾಯಕತ್ವದಿಂದಲೂ ಬಾಬರ್ ಕೆಳಗಿಳಿದರೂ ಆಶ್ಚರ್ಯವಿಲ್ಲವೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅತ್ಯಾಚಾರ ಆರೋಪ: ಖ್ಯಾತ ಕ್ರಿಕೆಟರ್ ಅಮಾನತು ಮಾಡಿದ‌ ಕ್ರಿಕೆಟ್ ಮಂಡಳಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News