ಟೀಂ ಇಂಡಿಯಾ ಬೌಲರ್‌ಗಳ ದಾಳಿ ತತ್ತರಿಸಿದ ಐರ್ಲೆಂಡ್‌..! ಕೇವಲ 16 ಓವರ್‌ಗಳಲ್ಲಿ ವಿಜಯ ಧ್ವಜ ಹಾರಿಸಿದ ರೋಹಿತ್‌ ಪಡೆ

IND vs IRE score : ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು 13ನೇ ಓವರ್‌ನಲ್ಲಿ 97 ರನ್‌ ಕಲೆಹಾಕಿ ಗುರಿ ಮುಟ್ಟಿದರು. ರೋಹಿತ್ ಶರ್ಮಾ ಅರ್ಧಶತಕದೊಂದಿಗೆ ಮಿಂಚಿದರು. ಭಾರತ ವೇಗಿಗಳ ಪರಾಕ್ರಮಕ್ಕೆ ಐರ್ಲೆಂಡ್ ತಂಡಕ್ಕೆ 20 ಓವರ್​ಗಳನ್ನು ಸಹ ಆಡಲು ಸಾಧ್ಯವಾಗಲಿಲ್ಲ. 

Written by - Krishna N K | Last Updated : Jun 5, 2024, 11:48 PM IST
    • ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯ
    • ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲುವು
    • 13ನೇ ಓವರ್‌ನಲ್ಲಿ 97 ರನ್‌ ಕಲೆಹಾಕಿ ಗುರಿ ಮುಟ್ಟಿದ ಟೀಂ ಇಂಡಿಯಾ
ಟೀಂ ಇಂಡಿಯಾ ಬೌಲರ್‌ಗಳ ದಾಳಿ ತತ್ತರಿಸಿದ ಐರ್ಲೆಂಡ್‌..! ಕೇವಲ 16 ಓವರ್‌ಗಳಲ್ಲಿ ವಿಜಯ ಧ್ವಜ ಹಾರಿಸಿದ ರೋಹಿತ್‌ ಪಡೆ title=

T20 World Cup 2024 : ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ನ್ಯೂಯಾರ್ಕ್ ನ ನಸ್ಸೌ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಭಾರತದ ಬೌಲರ್‌ಗಳು ಐರ್ಲೆಂಡ್ ಅನ್ನು 96 ರನ್‌ಗಳಿಗೆ ಆಲೌಟ್ ಮಾಡಿದರು.

ಇದಾದ ಬಳಿಕ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು 13ನೇ ಓವರ್‌ನಲ್ಲಿ 97 ರನ್‌ ಕಲೆಹಾಕಿ ಗುರಿ ಮುಟ್ಟಿದರು. ರೋಹಿತ್ ಶರ್ಮಾ ಅರ್ಧಶತಕದೊಂದಿಗೆ ಮಿಂಚಿದರು. ಭಾರತ ವೇಗಿಗಳ ಪರಾಕ್ರಮಕ್ಕೆ ಐರ್ಲೆಂಡ್ ತಂಡಕ್ಕೆ 20 ಓವರ್​ಗಳನ್ನು ಸಹ ಆಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಐರ್ಲೆಂಡ್‌ 16 ಓವರ್‌ಗಳಿಗೆ ವಿಕೆಟ್ ಕಳೆದುಕೊಂಡು ಕೇವಲ 96 ರನ್‌ ಕಲೆಹಾಕಿತು. ಗರೆಥ್ ಡಾಲ್ನಿ 25 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದರು. ಇದರೊಂದಿಗೆ ಭಾರತಕ್ಕೆ 97 ರನ್‌ಗಳ ಗುರಿ ನೀಡಿದರು.

ಇದನ್ನೂ ಓದಿ:ಧೋನಿ ಗರಡಿಯಲ್ಲಿ ಪಳಗಿದ ಈ ಆಟಗಾರ 2 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಎಂಟ್ರಿ! ಟಿ20 ವಿಶ್ವಕಪ್’ನಲ್ಲಿ ಸ್ಥಾನ ಸಿಕ್ಕಿದ್ದೇ ರೋಚಕ

ಈ ಸರಣಿಯಲ್ಲಿ ರೋಹಿತ್ ಶರ್ಮಾ ಮೂರು ದಾಖಲೆಗಳನ್ನು ನಿರ್ಮಿಸಿದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು 600 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ, ಕಡಿಮೆ ಎಸೆತಗಳಲ್ಲಿ 4000 ರನ್ ಮತ್ತು T-20 ವಿಶ್ವಕಪ್‌ನಲ್ಲಿ 1000 ರನ್ ಪೂರೈಸುವ ಮೂಲಕ ಹಿಟ್‌ ಮ್ಯಾನ್‌ ಇತಿಹಾಸ ಸೃಷ್ಟಿಸಿದ್ದಾರೆ. ರೋಹಿತ್ ಶರ್ಮಾ ಅವರ ಕ್ಯಾಚ್ ಅನ್ನು ಸ್ಲಿಪ್‌ನಲ್ಲಿ ಬಲ್ಬಿರ್ನಿ ಕೈಬಿಟ್ಟಿದ್ದರಿಂದ ಮೊದಲ ಓವರ್‌ನಲ್ಲಿ ಐರ್ಲೆಂಡ್‌ಗೆ ಭಾರಿ ಹೊಡೆತ ಬಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News