IND vs England, 4th Test: ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್’ಗಳ ರೋಚಕ ಗೆಲುವು ಕಂಡಿದೆ. ಈ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 3-1 ಮುನ್ನಡೆ ಸಾಧಿಸಿದ್ದು, ಸರಣಿ ಕೈವಶ ಮಾಡಿಕೊಂಡಿದೆ. ಇದರ ಜೊತೆಗೆ ಸುಮಾರು 17 ವರ್ಷಗಳಿಂದ ಕಾಯ್ದುಕೊಂಡಿರುವ ಪರಂಪರೆಯನ್ನು ಭಾರತ ಮುಂದುವರೆಸಿಕೊಂಡಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಭರ್ಜರಿ ದಾಖಲೆ ಬರೆದಿದೆ. ಅಷ್ಟೇ ಅಲ್ಲದೆ, ಈ ವಿಶೇಷ ದಾಖಲೆ ಬರೆದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯನವರೇ, ನಿಮ್ಮನ್ನೂ ರಾಹುಲ್ ಗಾಂಧಿಯಂತೆ ತಿಳಿದುಕೊಳ್ಳಬೇಕಾಗುತ್ತದೆ: ಪ್ರಹ್ಲಾದ್ ಜೋಶಿ
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಈ ಮಹಾದಾಖಲೆಯನ್ನು ಮಾಡಿದೆ. ತವರಿನಲ್ಲಿ ಸತತ 17ನೇ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡ ಭಾರತ ವಿಶ್ವದಾಖಲೆ ನಿರ್ಮಿಸಿದೆ.
ಹೈದರಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್’ನಲ್ಲಿ ಭಾರತ 28 ರನ್’ಗಳಿಂದ ಸೋತಿತ್ತು. ಇದಾದ ಬಳಿಕ ಭಾರತ ತಂಡ ಅದ್ಭುತ ಪುನರಾಗಮನ ಮಾಡಿ, ವಿಶಾಖಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 106 ರನ್‌ಗಳಿಂದ ಗೆದ್ದುಕೊಂಡಿತು. ಹೀಗಾದ ಬಳಿಕ ರಾಜ್‌ಕೋಟ್’ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 434 ರನ್’ಗಳಿಂದ ಗೆದ್ದುಕೊಂಡಿದೆ. ಇದೀಗ ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು 5 ವಿಕೆಟ್’ಗಳಿಂದ ಗೆದ್ದು ಸರಣಿಯನ್ನು ವಶಪಡಿಸಿಕೊಂಡ ಭಾರತ 3-1 ಅಂತರದ ಮುನ್ನಡೆ ಸಾಧಿಸಿದೆ.
ತವರಿನಲ್ಲಿ ಸತತವಾಗಿ ಅತಿ ಹೆಚ್ಚು ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿರುವುದೇ ಭಾರತ. ಆ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದೆ. ತವರಿನಲ್ಲಿ ಕಳೆದ 50 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕೇವಲ 4 ಪಂದ್ಯಗಳಲ್ಲಿ ಮಾತ್ರ ಸೋತಿದೆ. ಭಾರತ ಟೆಸ್ಟ್ ತಂಡಕ್ಕೆ ಇಡೀ ಭಾರತವೇ ಕೋಟೆ. ತವರಿನಲ್ಲಿ ಸತತವಾಗಿ ಅತಿ ಹೆಚ್ಚು ಟೆಸ್ಟ್ ಸರಣಿ ಗೆಲ್ಲುವ ವಿಚಾರದಲ್ಲಿ ಭಾರತ ತಂಡಕ್ಕೆ ಹತ್ತಿರ ಇನ್ಯಾವುದೇ ತಂಡವಿಲ್ಲ.
ಸತತ 17 ಟೆಸ್ಟ್ ಸರಣಿ ಗೆದ್ದ ವಿಶ್ವ ದಾಖಲೆ
1. ಆಸ್ಟ್ರೇಲಿಯಾ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 4-0 (4) (2013) ರಿಂದ ಗೆದ್ದುಕೊಂಡಿದೆ
2. ವೆಸ್ಟ್ ಇಂಡೀಸ್ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 2-0 (2) (2013) ರಲ್ಲಿ ಗೆದ್ದುಕೊಂಡಿದೆ
3. ದಕ್ಷಿಣ ಆಫ್ರಿಕಾ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 3-0 (4) (2015) ರಲ್ಲಿ ಗೆದ್ದುಕೊಂಡಿದೆ
4. ನ್ಯೂಜಿಲೆಂಡ್ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 3-0 (3) (2016) ರಿಂದ ಗೆದ್ದುಕೊಂಡಿದೆ
5. ಇಂಗ್ಲೆಂಡ್ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 4-0 (5) (2016) ರಿಂದ ಗೆದ್ದುಕೊಂಡಿದೆ
6. ಬಾಂಗ್ಲಾದೇಶ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 1-0 (1) (2017) ರಲ್ಲಿ ಗೆದ್ದುಕೊಂಡಿದೆ
7. ಆಸ್ಟ್ರೇಲಿಯಾ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 2-1 (4) (2017) ರಿಂದ ಗೆದ್ದುಕೊಂಡಿದೆ
8. ಶ್ರೀಲಂಕಾ vs ಭಾರತ – ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು 1-0 (3) (2017) ಗೆದ್ದುಕೊಂಡಿತು
9. ಅಫ್ಘಾನಿಸ್ತಾನ vs ಭಾರತ – ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು 1-0 (1) (2018) ಗೆದ್ದುಕೊಂಡಿದೆ
10. ವೆಸ್ಟ್ ಇಂಡೀಸ್ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 2-0 (2) (2018) ರಲ್ಲಿ ಗೆದ್ದುಕೊಂಡಿದೆ
11. ದಕ್ಷಿಣ ಆಫ್ರಿಕಾ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 3-0 (3) (2019) ರಿಂದ ಗೆದ್ದುಕೊಂಡಿದೆ
12. ಬಾಂಗ್ಲಾದೇಶ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 2-0 (2) (2019) ಗೆದ್ದುಕೊಂಡಿತು
13. ಇಂಗ್ಲೆಂಡ್ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 3-1 (4) (2021) ರಿಂದ ಗೆದ್ದುಕೊಂಡಿತು
14. ನ್ಯೂಜಿಲೆಂಡ್ vs ಭಾರತ - ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು 1-0 (2) (2021) ಗೆದ್ದುಕೊಂಡಿತು
15. ಶ್ರೀಲಂಕಾ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 2-0 (2) (2022) ಗೆದ್ದುಕೊಂಡಿದೆ
16. ಆಸ್ಟ್ರೇಲಿಯಾ vs ಭಾರತ – ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 2-1 (4) (2023) ರಿಂದ ಗೆದ್ದುಕೊಂಡಿದೆ
17. ಇಂಗ್ಲೆಂಡ್ vs ಭಾರತ - ಟೀಂ ಇಂಡಿಯಾ 3-1 (5) ಮುನ್ನಡೆ (1 ಪಂದ್ಯ ಉಳಿದಿದೆ - 2024)
2013 ರಿಂದ ತವರಿನಲ್ಲಿ (ಟೆಸ್ಟ್ ಕ್ರಿಕೆಟ್‌ನಲ್ಲಿ) ಭಾರತದ ದಾಖಲೆ
- ಪಂದ್ಯ - 50
- ಗೆಲುವು - 39
- ಸೋಲು - 4
- ಡ್ರಾ - 7
ಇದನ್ನೂ ಓದಿ: ಧ್ರುವ್-ಶುಭ್ಮನ್ ಆಟಕ್ಕೆ ಮಂಡಿಯೂರಿದ ಇಂಗ್ಲೆಂಡ್: 4ನೇ ಟೆಸ್ಟ್’ನಲ್ಲೂ ಟೀಂ ಇಂಡಿಯಾಗೆ ಭರ್ಜರಿ ಜಯ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ