Indian Cricket Team 2023 Schedules: 2022 ರ ICC T20 ವಿಶ್ವಕಪ್ 2022ರಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಯಿತು. 2022 ರ ಆರಂಭದಲ್ಲಿ, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕಳೆದುಕೊಳ್ಳಬೇಕಾಯಿತು. ಆದರೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ 2022 ರ ವರ್ಷವನ್ನು ಕೊನೆಗೊಳಿಸಿತು. ಈಗ 2023 ರಲ್ಲಿ, ಟೀಮ್ ಇಂಡಿಯಾ 2 ದೊಡ್ಡ ICC ಟೂರ್ನಮೆಂಟ್‌ಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಇನ್ನು ತಂಡದ ಕ್ರಿಕೆಟ್ ವೇಳಾಪಟ್ಟಿ ಹೇಗಿದೆ ಎಂದು ವಿವರವಾಗಿ ನೋಡೋಣ:
ಇದನ್ನೂ ಓದಿ: Rishabh Pant: ಆಸೀಸ್ ಸರಣಿಯಲ್ಲಿ ಪಂತ್ ಬದಲಿಗೆ ಈ ಮೂವರಲ್ಲಿ ಒಬ್ಬರಿಗೆ ಸಿಗಲಿದೆ ಸ್ಥಾನ!
9 ವರ್ಷಗಳಿಂದ ಐಸಿಸಿ ಟೂರ್ನಿ ಗೆದ್ದಿಲ್ಲ:
ಕಳೆದ 9 ವರ್ಷಗಳಿಂದ ಭಾರತ ತಂಡ ಯಾವುದೇ ಐಸಿಸಿ ಟೂರ್ನಿಯನ್ನು ಗೆದ್ದಿಲ್ಲ. ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ಗಳ ಸರಣಿಯನ್ನು ಟೀಂ ಇಂಡಿಯಾ ಗೆದ್ದರೆ, ಅದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪುತ್ತದೆ. ಡಬ್ಲ್ಯುಟಿಸಿಯ ಅಂತಿಮ ಪಂದ್ಯ ಜೂನ್‌ನಲ್ಲಿ ನಡೆಯಲಿದೆ.
ಟೀಂ ಇಂಡಿಯಾ ಇದುವರೆಗೆ ಎರಡು ಬಾರಿ ಮಾತ್ರ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಅದು 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಮತ್ತು 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ. ಅಂದಿನಿಂದ ಭಾರತ ತಂಡ ಈ ಟ್ರೋಫಿಯಿಂದ ವಂಚಿತವಾಗಿದೆ. ಆದರೆ ಈ ವರ್ಷ ಭಾರತ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದ್ದು, ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿದೆ.
ಜನವರಿ 2023: ಭಾರತ v ಶ್ರೀಲಂಕಾ (ತವರು ನೆಲದಲ್ಲಿ ಪಂದ್ಯ)
1ನೇ ಟಿ20 (ಜನವರಿ 3) - ಮುಂಬೈ
2ನೇ ಟಿ20 (ಜನವರಿ 5) - ಪುಣೆ
3ನೇ ಟಿ20 (ಜನವರಿ 7) - ರಾಜ್‌ಕೋಟ್
1 ನೇ ODI (ಜನವರಿ 10) - ಗುವಾಹಟಿ
2ನೇ ODI (ಜನವರಿ 12) - ಕೋಲ್ಕತ್ತಾ
3ನೇ ODI (ಜನವರಿ 15) - ತಿರುವನಂತಪುರ
ಜನವರಿ/ಫೆಬ್ರವರಿ 2023: ಭಾರತ ವಿರುದ್ಧ ನ್ಯೂಜಿಲೆಂಡ್ (ತವರು ನೆಲದಲ್ಲಿ ಪಂದ್ಯ)
1 ನೇ ODI (ಹೈದರಾಬಾದ್) - 18 ಜನವರಿ
2ನೇ ODI (ರಾಯಪುರ) - 21 ಜನವರಿ
3ನೇ ODI (ಇಂಧೋರ್) - 24 ಜನವರಿ
1ನೇ ಟಿ20 (ರಾಂಚಿ) - 27 ಜನವರಿ
2 ನೇ ಟಿ20 (ಲಕ್ನೋ) - 29 ಜನವರಿ
3ನೇ ಟಿ20 ಅಂತಾರಾಷ್ಟ್ರೀಯ (ಅಹಮದಾಬಾದ್) - 1 ಫೆಬ್ರವರಿ
ಫೆಬ್ರವರಿ/ಮಾರ್ಚ್ 2023: ಭಾರತ v ಆಸ್ಟ್ರೇಲಿಯಾ (ತವರು ನೆಲದಲ್ಲಿ ಪಂದ್ಯ)
1 ನೇ ಟೆಸ್ಟ್ (ನಾಗ್ಪುರ) - 9-13 ಫೆಬ್ರವರಿ
2 ನೇ ಟೆಸ್ಟ್ (ದೆಹಲಿ) - 17-21 ಫೆಬ್ರವರಿ
ಮೂರನೇ ಟೆಸ್ಟ್ (ಧರ್ಮಶಾಲಾ) - ಮಾರ್ಚ್ 1-5
ನಾಲ್ಕನೇ ಟೆಸ್ಟ್ (ಅಹಮದಾಬಾದ್) - ಮಾರ್ಚ್ 9-13
1 ನೇ ODI (ಮುಂಬೈ) - 17 ಮಾರ್ಚ್
2 ನೇ ODI (ವಿಶಾಖಪಟ್ಟಣಂ) - 19 ಮಾರ್ಚ್
3ನೇ ODI (ಚೆನ್ನೈ) - 22 ಮಾರ್ಚ್
ಮಾರ್ಚ್-ಮೇ 2023: ಇಂಡಿಯನ್ ಪ್ರೀಮಿಯರ್ ಲೀಗ್
ಜೂನ್ 2023: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್
ಜುಲೈ/ಆಗಸ್ಟ್ 2023: ವೆಸ್ಟ್ ಇಂಡೀಸ್ ವಿರುದ್ಧ ಭಾರತ (ಪ್ರವಾಸ)
ಸರಣಿಯಲ್ಲಿ ಎರಡು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳು ನಡೆಯಲಿವೆ. ವೇಳಾಪಟ್ಟಿ ಇನ್ನೂ ಪ್ರಕಟವಾಗಬೇಕಿದೆ.
ಸೆಪ್ಟೆಂಬರ್ 2023: ಏಷ್ಯಾ ಕಪ್ 2023
ಏಷ್ಯಾ ಕಪ್ ಪಂದ್ಯಾವಳಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಆದರೆ ಬಿಸಿಸಿಐ ಮತ್ತು ಪಿಸಿಬಿ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಆತಿಥೇಯರ ಬದಲಾವಣೆ ಇರಬಹುದು.
ಅಕ್ಟೋಬರ್ 2023: ಭಾರತ v ಆಸ್ಟ್ರೇಲಿಯಾ (ತವರು ನೆಲದಲ್ಲಿ ಪಂದ್ಯ)
ವಿಶ್ವಕಪ್‌ಗೆ ಸಿದ್ಧವಾಗಲು ಆಸ್ಟ್ರೇಲಿಯಾ ಭಾರತದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ.
ಅಕ್ಟೋಬರ್/ನವೆಂಬರ್ 2023: ICC ಪುರುಷರ ಕ್ರಿಕೆಟ್ ವಿಶ್ವಕಪ್
ಮೊದಲ ಬಾರಿಗೆ, ಭಾರತವು 2023 ರಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನ ಏಕೈಕ ಆತಿಥ್ಯ ವಹಿಸಲಿದೆ.
ನವೆಂಬರ್/ಡಿಸೆಂಬರ್ 2023: ಆಸ್ಟ್ರೇಲಿಯಾ ವಿರುದ್ಧ ಭಾರತ
ಐದು ಟಿ20 ಪಂದ್ಯಗಳನ್ನು ಆಡಲು ಆಸ್ಟ್ರೇಲಿಯಾ ಒಂದು ವರ್ಷದಲ್ಲಿ ಮೂರನೇ ಬಾರಿಗೆ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ.
ಡಿಸೆಂಬರ್ 2023: ಭಾರತ v ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ ಪ್ರವಾಸದೊಂದಿಗೆ ಟೀಂ ಇಂಡಿಯಾ ವರ್ಷವನ್ನು ಕೊನೆಗೊಳಿಸಲಿದೆ.
ಇದನ್ನೂ ಓದಿ: ವಿಸ್ಡನ್ 2022 ಅತ್ಯುತ್ತಮ ODI ತಂಡ ಪ್ರಕಟ: ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಸ್ಥಾನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.