ನತಾಶಾ ಅಲ್ಲ.. ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದ‌ ಸ್ಟಾರ್ ಕ್ರಿಕೆಟಿಗನ ಪತ್ನಿ ಹಾಗೂ ಬಾಲಿವುಡ್‌ ನಟಿ ಈಕೆ!!

Star Cricketer Wife: ಸದ್ಯ ಕ್ರಿಕೆಟ್‌ ಅಭಿಮಾನಿಗಳಿಳು ಐಪಿಎಲ್ ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ.. ಆದರೆ ಇದೇ ವೇಳೆ ಸ್ಟಾರ್ ಕ್ರಿಕೆಟಿಗರ ವೈಯಕ್ತಿಕ ವಿಚಾರಗಳು ಸಹ ಬೆಳಕಿಗೆ ಬರುತ್ತಿವೆ.. ಅದೇ ರೀತಿ ಇದೀಗ ಆಟಗಾರನೊಬ್ಬನ ಪತ್ನಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. 

Written by - Savita M B | Last Updated : Mar 29, 2024, 10:43 AM IST
  • ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು ಎನಿಸಲ್ಪಟ್ಟಿರುವ ಅಂಗದ್
  • ಅಂಗದ್ ಅಂಡರ್ 19 ಕ್ರಿಕೆಟ್ ಮತ್ತು ರಣಜಿ ಆಡಿದ್ದಾರೆ
  • ಇನ್ನು ಅಂಗದ್ ಬೇಡಿ ಅವರ ಪ್ರೇಮ ಜೀವನವು ಸಾಕಷ್ಟು ಜನಪ್ರಿಯವಾಗಿತ್ತು
ನತಾಶಾ ಅಲ್ಲ.. ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದ‌ ಸ್ಟಾರ್ ಕ್ರಿಕೆಟಿಗನ ಪತ್ನಿ ಹಾಗೂ ಬಾಲಿವುಡ್‌ ನಟಿ ಈಕೆ!! title=

Bollywood Actress Neha Dhupia: ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು ಎನಿಸಲ್ಪಟ್ಟಿರುವ ಅಂಗದ್ ಅಂಡರ್ 19 ಕ್ರಿಕೆಟ್ ಮತ್ತು ರಣಜಿ ಆಡಿದ್ದಾರೆ ಆದರೆ ನಂತರ ಅವರು ನಟನೆ ಮತ್ತು ಮಾಡೆಲಿಂಗ್ ವೃತ್ತಿಯನ್ನು ಆರಿಸಿಕೊಂಡರು, ಅವರು ಪಂಜಾಬಿ ಚಿತ್ರರಂಗದ ಪ್ರಸಿದ್ಧ ಮುಖವೂ ಹೌದು. ಅಮಿತಾಬ್ ಬಚ್ಚನ್ ಅವರ ಹಿಟ್ ಚಿತ್ರ 'ಪಿಂಕ್' ನಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುವ ಮೂಲಕ ಅವರು ಸಾಕಷ್ಟು ಪ್ರಶಂಸೆಯನ್ನು ಪಡೆದರು.

ಇನ್ನು ಅಂಗದ್ ಬೇಡಿ ಅವರ ಪ್ರೇಮ ಜೀವನವು ಸಾಕಷ್ಟು ಜನಪ್ರಿಯವಾಗಿತ್ತು.. ಅಂಗದ್ ನಟಿ ನೇಹಾ ಧೂಪಿಯಾ ಅವರನ್ನು 2018 ರಲ್ಲಿ ಮದುವೆಯಾದರು.. ಇದಕ್ಕೂ ಮುನ್ನ ಇವರಿಬ್ಬರೂ ತುಂಬಾ ಒಳ್ಳೆ ಫ್ರೆಂಡ್ಸ್ ಅಂತ ಜನಕ್ಕೆ ಗೊತ್ತಿತ್ತು ಆದರೆ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ನೇಹಾ ಗರ್ಭಿಣಿ ಎಂಬ ಸುದ್ದಿ ಹೊರಬಿತ್ತು.. ಆಗ ಈ ಧಿಡೀರ್‌ ಮದುವೆಗೆ ಕಾರಣವೇ ನೇಹಾ ಗರ್ಭಿಣಿಯಾಗಿದ್ದು ಎನ್ನುವುದು ಬಹಿರಂಗವಾಯಿತು.. 

ಇದನ್ನೂ ಓದಿ-Watch: 4,4,6,4,6 - ಅಬ್ಬರಿಸಿದ ರಿಯಾನ್ ಪರಾಗ್, ರಾಜಸ್ಥಾನ ರಾಯಲ್ಸ್ ಗೆ 12 ರನ್ ಗಳ ರೋಚಕ ಜಯ 

ಮೊದಲ ಮಗು ಜನಿಸಿದ ಹಲವು ದಿನಗಳ ನಂತರ ಮದುವೆಯ ಸಮಯದಲ್ಲಿ ನೇಹಾ ಗರ್ಭಿಣಿಯಾಗಿದ್ದಳು ಎಂದು ಅಂಗದ್ ಸ್ವತಃ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದರು, ಈ ವಿಷಯ ಇಬ್ಬರಿಗೂ ತಿಳಿದ ತಕ್ಷಣ, ಅವರು ಈ ವಿಷಯವನ್ನು ಮನೆಯವರಿಗೆ ತಿಳಿಸಿದರು, ನಂತರ ಅಲ್ಲಿ ಅವರ ಮನೆಯಲ್ಲಿ ಸ್ವಲ್ಪ ಗಲಾಟೆಯಾಗಿತ್ತು ಆದರೆ ಅಂಗದ್ ಅವರ ಕುಟುಂಬ ಸದಸ್ಯರಿಗೆ ನೇಹಾ ಬಗ್ಗೆ ಮೊದಲೇ ತಿಳಿದಿತ್ತು, ಆದ್ದರಿಂದ ಈ ಮದುವೆಗೆ ಯಾರಿಗೂ ಯಾವುದೇ ವಿರೋಧವಿರಲಿಲ್ಲ.. ಆದ್ದರಿಂದ ಕುಟುಂಬ ಸದಸ್ಯರು ತಕ್ಷಣ ಮದುವೆಯನ್ನು ಮಾಡಿದರು. ಸದ್ಯ ಈ ಸುಂದರ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ..  

ಇನ್ನು ನಟಿ ನೇಹಾ 2003 ರಲ್ಲಿ ಮಿಸ್ ಇಂಡಿಯಾ ಪಟ್ಟವನ್ನು ಗೆದ್ದರು.. ಇವರನ್ನು ಬಾಲಿವುಡ್ ಕೂಲ್ ಗರ್ಲ್ ಎಂದು ಕರೆಯಲಾಗುತ್ತದೆ. ನೇಹಾ ಹಿಂದಿ ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂ ಭಾಷೆಗಳ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ‘ಜೂಲಿ’ ಚಿತ್ರದ ಬೋಲ್ಡ್ ಪಾತ್ರ ಇಂದಿಗೂ ಜನಮನದಲ್ಲಿ ಜೀವಂತವಾಗಿದೆ. ಇದಲ್ಲದೇ ಅವರು ಹೆಚ್ಚಾಗಿ ಫ್ಯಾಷನ್ ಈವೆಂಟ್‌ಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ.

ಇದನ್ನೂ ಓದಿ-ಗೆಳತಿಯ ಆತ್ಮಹತ್ಯೆ, ಪೊಲೀಸ್‌ ತನಿಖೆ.. ದುಃಖದಲ್ಲೂ IPL ನಲ್ಲಿ ಅಬ್ಬರಿಸುತ್ತಿದ್ದಾನೆ ಈ ಸ್ಟಾರ್‌ ಬ್ಯಾಟರ್‌..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News