ಗೆಳತಿಯ ಆತ್ಮಹತ್ಯೆ, ಪೊಲೀಸ್‌ ತನಿಖೆ.. ದುಃಖದಲ್ಲೂ IPL ನಲ್ಲಿ ಅಬ್ಬರಿಸುತ್ತಿದ್ದಾನೆ ಈ ಸ್ಟಾರ್‌ ಬ್ಯಾಟರ್‌..!

Abhishek Sharm Tania singh : ಗೆಳತಿಯ ಆತ್ನಹತ್ಯೆಯ ನೋವಿನಲ್ಲೂ ಸನ್‌ ರೈಸರ್ಸ್‌ ಹೈದ್ರಾಬಾದ್‌ ತಂಡದ ಈ ಆಟಗಾರ ಅಬ್ಬರ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಯಾರು ಆ ಆಟಗಾರ.. ಆತನ ಗೆಳತಿಯಾರು, ಏನಾಗಿತ್ತು..? ಇಲ್ಲಿದೆ ಕಂಪ್ಲೀಟ್‌ ಡಿಟೈಲ್ಸ್‌...

Written by - Krishna N K | Last Updated : Mar 28, 2024, 08:16 PM IST
    • ಗೆಳತಿಯ ಆತ್ನಹತ್ಯೆಯ ನೋವಿನಲ್ಲೂ ಅಬ್ಬರಿಸಿದ ಆಟಗಾರ
    • ಗೆಳತಿಯ ಸಾವಿನ ನಡುವೆಯೂ ಆಟವಾಡಿ ಕ್ರೀಡಾ ಧರ್ಮ ಮೆರೆದ ಕ್ರಿಕೆಟರ್‌
    • ಸನ್‌ ರೈಸರ್ಸ್‌ ಹೈದ್ರಾಬಾದ್‌ ತಂಡದ ಈ ಆಟಗಾರ
ಗೆಳತಿಯ ಆತ್ಮಹತ್ಯೆ, ಪೊಲೀಸ್‌ ತನಿಖೆ.. ದುಃಖದಲ್ಲೂ IPL ನಲ್ಲಿ ಅಬ್ಬರಿಸುತ್ತಿದ್ದಾನೆ ಈ ಸ್ಟಾರ್‌ ಬ್ಯಾಟರ್‌..! title=

Abhishek Sharma : ನೋವು, ನಲಿವಿದ್ದರೂ ಸಹ ತಂಡದ ಗೆಲುವಿಗೆ ಪ್ರತಿಯೊಬ್ಬ ಆಟಗಾರರು ಶ್ರಮವಹಿಸುತ್ತಾರೆ. ತಂದೆ -ತಾಯಿಯ ಸಾವಿನ ನೋವಿನಲ್ಲೂ ಕ್ರಿಕೆಟಿಗರು ಆಟವಾಡಿದ ಇತಿಹಾಸ ಕ್ರಿಕೆಟ್‌ನಲ್ಲಿದೆ.. ಈ ಪೈಕಿ ಇಲ್ಲೊಬ್ಬ ಆಟಗಾರ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳತಿಯ ಸಾವಿನ ನಡುವೆಯೂ ಆಟವಾಡಿ ಕ್ರೀಡಾ ಧರ್ಮ ಮೆರೆದಿದ್ದಾನೆ.

ಹೌದು.. ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ (SRH vs MI ) ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೌಲರ್‌ಗಳ ಬೆವರಿಳಿಸಿದ ಎಸ್‌ಆರ್‌ಹೆಚ್‌ ಆಟಗಾರರದು, 20 ಓವರ್‌ಗಳಲ್ಲಿ 277 ರನ್ ಕಲೆಹಾಕುವ ಮೂಲಕ ಆರ್‌ಸಿಬಿಯ 263 ರನ್‌ಗಳ (RCB runs record) ದಾಖಲೆಯನ್ನು ಮುರಿದರು.

ಇದನ್ನೂ ಓದಿ:ಪಂದ್ಯ ಮುಕ್ತಾಯದ ಬಳಿಕ ಸಂಪೂರ್ಣ ಹತಾಶ ಸ್ಥಿತಿಯಲ್ಲಿ ಕಂಡ Hardik Pandya, ಕಣ್ಣೀರು ತಡೆದಿದ್ದು ಹೀಗೆ Watch Video

ಈ ಪೈಕಿ ಸ್ಟಾರ್‌ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. 7 ಸಿಕ್ಸರ್ ಮತ್ತು 3 ಬೌಂಡರಿ ಜೊತೆಗೆ 23 ಎಸೆತಗಳಲ್ಲಿ 63 ರನ್ ಕಲೆಹಾಕಿ, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆದರೆ ಅಭಿಷೇಕ್‌ ಅಬ್ಬರದ ಆಟದ ಹಿಂದೆ ಸಲಿಸಲಾರದಷ್ಟು ನೋವಿತ್ತು ಎನ್ನುವುದು ಕೆಲವರಿಗೆ ತಿಳಿದಿಲ್ಲ.

ಯಸ್‌.. ಐಪಿಎಲ್‌ ಆರಂಭಕ್ಕೂ ಮುನ್ನ ಅಭಿಷೇಕ್ ಶರ್ಮಾ ಗೆಳತಿ 28 ವರ್ಷದ ತಾನ್ಯಾ ಸಿಂಗ್ (Tania Singh's death case) (ಫೆಬ್ರವರಿ) ಸೂರತ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾನ್ಯಾ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಪೊಲೀಸರು ಆಕೆಯ ಮೊಬೈಲ್ ಫೋನ್ ಪರಿಶೀಲಿಸಿದ್ದರು, ಆಕೆಯ ಕಾಲ್ ಲಿಸ್ಟ್‌ನಲ್ಲಿ ಅಭಿಷೇಕ್ ಶರ್ಮಾ ಅವರ ಹೆಸರೂ ಇತ್ತು ಎನ್ನಲಾಗಿತ್ತು.

ಇದನ್ನೂ ಓದಿ:ಆರ್‌ಸಿಬಿಯ 11 ವರ್ಷಗಳ ದಾಖಲೆ ಮುರಿದ ಎಸ್‌ಆರ್‌ಎಚ್..!

ತಾನ್ಯ ಮತ್ತು ಅಭಿಷೇಕ್‌ ಉತ್ತಮ ಗೆಳೆಯರಾಗಿದ್ದರು ಎನ್ನಲಾಗಿದೆ. ಗೆಳತಿಯ ನೋವಿನಲ್ಲಿದ್ದರೂ ಅಭಿಷೇಕ್ ಮೈದಾನಕ್ಕಿಳಿದು,​ ಕೇವಲ 16 ಎಸೆತಗಳಲ್ಲೇ 63 ರನ್‌ ಕಲೆಹಾಕುವ ಮೂಲಕ ಮಿಂಚಿನ ಪ್ರದರ್ಶನ ನೀಡಿದರು. ಅಲ್ಲದೆ, SRH RCB ದಾಖಲೆಯನ್ನು ಮುರಿದು, IPL ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ತಂಡವಾಗಿ ಹೊರಹೊಮ್ಮಿತು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News