ನವದೆಹಲಿ: ಭಾರತೀಯ ಕ್ರಿಕೆಟ್‌ನ 'ಸೂಪರ್‌ಫ್ಯಾನ್' ಚಾರುಲತಾ ಪಟೇಲ್ ಈಗ ನಮ್ಮ ನಡುವೆ ಇಲ್ಲ. ಕ್ರಿಕೆಟ್‌ನ ಜನಪ್ರಿಯ 'ಅಜ್ಜಿ' ಜನವರಿ 13 ರಂದು ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕಳೆದ ವರ್ಷ ನಡೆದ ಐಸಿಸಿ ವಿಶ್ವಕಪ್ 2019 ರ ಸಂದರ್ಭದಲ್ಲಿ ಚಾರುಲತಾ ಪಟೇಲ್ ಅವರ ಉತ್ಸಾಹವನ್ನು ಕಂಡು ಅವರನ್ನು ಭಾರತೀಯ ಕ್ರಿಕೆಟ್‌ನ 'ಸೂಪರ್‌ಫ್ಯಾನ್' ಎಂದು ಕರೆಯಲಾಯಿತು. ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರೋತ್ಸಾಹಿಸಲು ಕ್ರೀಡಾಂಗಣವನ್ನು ತಲುಪಿದರು. ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಕೂಡ ಅವರನ್ನು ಭೇಟಿಯಾದರು.
ಟೀಮ್ ಇಂಡಿಯಾದ ಸೂಪರ್ ಫ್ಯಾನ್ ಚಾರುಲತಾ ಪಟೇಲ್ ಅವರ ನಿಧನಕ್ಕೆ ಕ್ರಿಕೆಟ್ ಮಂಡಳಿ (ಬಿಸಿಸಿಐ) ಸಂತಾಪ ಸೂಚಿಸಿದೆ. 'ಟೀಮ್ ಇಂಡಿಯಾದ ಸೂಪರ್ ಫ್ಯಾನ್ ಚಾರುಲತಾ ಪಟೇಲ್ ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ. ಅವರ ಉತ್ಸಾಹ ಯಾವಾಗಲೂ ಮುಂದುವರಿಯಲು ನಮಗೆ ಪ್ರೇರಣೆ ನೀಡುತ್ತದೆ ಎಂದು ಬಿಸಿಸಿಐ ಗುರುವಾರ ಟ್ವೀಟ್ ಮಾಡಿದೆ.'
#TeamIndia's Superfan Charulata Patel ji will always remain in our hearts and her passion for the game will keep motivating us.
May her soul rest in peace pic.twitter.com/WUTQPWCpJR
— BCCI (@BCCI) January 16, 2020
'ದಾದಿ(ಅಜ್ಜಿ) ಆಫ್ ಕ್ರಿಕೆಟ್' ಎಂದು ಜನಪ್ರಿಯವಾಗಿರುವ ಚಾರುಲತಾ ಪಟೇಲ್ 2019 ರ ವಿಶ್ವಕಪ್ ಸಮಯದಲ್ಲಿ ಕ್ರೀಡಾಂಗಣವನ್ನು ತಲುಪುವ ಮೂಲಕ ಟೀಮ್ ಇಂಡಿಯಾವನ್ನು ಪ್ರೋತ್ಸಾಹಿಸಿದರು. ವಿಶ್ವಕಪ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ನಂತರ ಚಾರುಲತಾ ಪಟೇಲ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Cricket really is for all ages!
Meet the #TeamIndia fan whose support is simply sensational 👏👏 #BANvIND | #CWC19 pic.twitter.com/4TaXCvSgzr
— Cricket World Cup (@cricketworldcup) July 2, 2019
ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಕ್ರಿಕೆಟ್ ಬಗ್ಗೆ ಅವರ ಉತ್ಸಾಹವನ್ನು ನೋಡಿ ಆಶ್ಚರ್ಯಚಕಿತರಾದರು. ಭಾರತ ವಿರುದ್ಧ ಬಾಂಗ್ಲಾದೇಶ ಪಂದ್ಯ ಮುಗಿದ ನಂತರ ವಿರಾಟ್ ಮತ್ತು ರೋಹಿತ್ ಚಾರುಲತಾ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.
ವಿರಾಟ್ ಕೊಹ್ಲಿ ಕೂಡ ಅಜ್ಜಿಗೆ ಕ್ರಿಕೆಟ್ ಬಗ್ಗೆ ಇದ್ದ ಒಲವು ಕಂಡು ಅವರ ಅಭಿಮಾನಿಯಾದ್ದರು. ಕೊಹ್ಲಿ ಅವರಿಗೆ ವಿಶ್ವಕಪ್ ಪಂದ್ಯಕ್ಕೆ ಟಿಕೆಟ್ ನೀಡಿದರು. ಜೊತೆ ಒಂದು ಪತ್ರವನ್ನು ಬರೆದಿದ್ದರು. ಅದರಲ್ಲಿ, ''ಪ್ರಿಯ ಚಾರುಲತಾ ಜಿ, ನಮ್ಮ ತಂಡದ ಬಗ್ಗೆ ನಿಮ್ಮ ಪ್ರೀತಿ ಮತ್ತು ಉತ್ಸಾಹ ಬಹಳ ಸ್ಪೂರ್ತಿದಾಯಕವಾಗಿದೆ. ನಿಮ್ಮ ಕುಟುಂಬದೊಂದಿಗೆ ನೀವು ಆಟವನ್ನು ಆನಂದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಸಾಕಷ್ಟು ಪ್ರೀತಿ. ಅಭಿನಂದನೆಗಳು - ವಿರಾಟ್" ಎಂದು ಅವರು ಬರೆದಿದ್ದರು.
ಚಾರುಲತಾ ಸಂದರ್ಶನವೊಂದರಲ್ಲಿ ತಾನು ಹುಟ್ಟಿದ್ದು ಭಾರತದಲ್ಲಲ್ಲ, ಟಾಂಜಾನಿಯಾದಲ್ಲಿ ಎಂದು ಹೇಳಿದ್ದರು. ಅವರ ಮಕ್ಕಳು ಕೌಂಟಿ ಕ್ರಿಕೆಟ್ ಆಡುತ್ತಿದ್ದರು ಎಂದು ತಿಳಿಸಿದ್ದ ಅಜ್ಜಿ, ಮಕ್ಕಳು ಕ್ರಿಕೆಟ್ ಆಡುತ್ತಿರುವುದನ್ನು ನೋಡಿ, ನನಗೂ ಈ ಆಟದಲ್ಲಿ ಕುತೂಹಲ ಹೆಚ್ಚಾಯಿತು. ಈ ಮೊದಲು ನಾನು ನನ್ನ ಮಕ್ಕಳೊಂದಿಗೆ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುತ್ತಿದ್ದೆ ಎಂದು ತಿಳಿಸಿದ್ದರು.
ಚರುಲತಾ ಪಟೇಲ್ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ನಿಧನದ ಬಗ್ಗೆ ಮಾಹಿತಿ ನೀಡಲಾಗಿದೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿನ ಪೋಸ್ಟ್, 'ನಮ್ಮ ಅಜ್ಜಿ ತೀರಿಕೊಂಡಿದ್ದನ್ನು ನಿಮಗೆಲ್ಲರಿಗೂ ಬಹಳ ದುಃಖದಿಂದ ಹೇಳಬೇಕಾಗಿದೆ. ಜನವರಿ 13 ರಂದು ಸಂಜೆ 5: 30 ಕ್ಕೆ ಅವರು ಕೊನೆಯುಸಿರೆಳೆದರು' ಎಂದು ಬರೆಯಲಾಗಿದೆ.