IND vs AUS Women Cricket: ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಕ್ರಿಕೆಟ್ ಟೀಂ ಸೋಲು ಕಾಣಲು ಕಾರಣ ಇದುವೇ! ನಾಯಕಿ ಹೇಳಿದ್ದೇನು?

India vs Australia Women Team: ಪಂದ್ಯದ ನಂತರ ಹರ್ಮನ್‌ಪ್ರೀತ್ ಕೌರ್ ಮಾತನಾಡಿದ್ದು, “ನಾವು ಈ ಪಂದ್ಯದ ಮೊದಲ 10-12 ಓವರ್‌ಗಳ ಆಟದಲ್ಲಿದ್ದೆವು. ಆದರೆ ಆ ನಂತರ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೂ ಈ ಸರಣಿಯಿಂದ ನಾವು ಸಾಕಷ್ಟು ಕಲಿತಿದ್ದೇವೆ. ಈಗ ನಮ್ಮ ತಂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿರುವ ರೀತಿ ತುಂಬಾ ಚೆನ್ನಾಗಿದೆ.

Written by - Bhavishya Shetty | Last Updated : Dec 21, 2022, 03:51 PM IST
    • ಆಸ್ಟ್ರೇಲಿಯಾ ವಿರುದ್ಧದ 5 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ ಸೋಲು
    • ಇಡೀ ಸರಣಿಯಲ್ಲಿ ಭಾರತ ತಂಡ ಒಗ್ಗಟ್ಟಿನಿಂದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ
    • ಹರ್ಮನ್‌ಪ್ರೀತ್ ಕೌರ್ ಸೋಲಿಗೆ ಪ್ರಮುಖ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ
IND vs AUS Women Cricket: ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಕ್ರಿಕೆಟ್ ಟೀಂ ಸೋಲು ಕಾಣಲು ಕಾರಣ ಇದುವೇ! ನಾಯಕಿ ಹೇಳಿದ್ದೇನು?  title=
India Women Cricket

India vs Australia Women Team: ಆಸ್ಟ್ರೇಲಿಯಾ ವಿರುದ್ಧದ 5 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಮಹಿಳಾ ತಂಡ 4-1 ಅಂತರದ ಸೋಲನ್ನು ಎದುರಿಸಬೇಕಾಯಿತು. ಇಡೀ ಸರಣಿಯಲ್ಲಿ ಭಾರತ ತಂಡ ಒಗ್ಗಟ್ಟಿನಿಂದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಟೀಂ ಇಂಡಿಯಾ ಸೋಲನ್ನು ಎದುರಿಸುವ ಪ್ರಮೇಯ ಬಂದೊದಗಿದೆ. ಅಷ್ಟೇ ಅಲ್ಲದೆ, ಇದೀಗ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸೋಲಿಗೆ ಪ್ರಮುಖ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ. ತಮ್ಮ ತಂಡವು ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಆದರೆ ಅವುಗಳನ್ನು ಸರಣಿಯಲ್ಲಿ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Rohit Sharma: ರೋಹಿತ್ ನಾಯಕತ್ವ ಸ್ಥಾನ ಉರುಳಿದ್ರೆ ಈ ಮೂವರಲ್ಲಿ ಒಬ್ಬರಾಗ್ತಾರೆ ಟಿ20 ತಂಡದ ‘ಕಪ್ತಾನ’

ಹರ್ಮನ್‌ಪ್ರೀತ್ ಕೌರ್ ಹೇಳಿಕೆ:

ಪಂದ್ಯದ ನಂತರ ಹರ್ಮನ್‌ಪ್ರೀತ್ ಕೌರ್ ಮಾತನಾಡಿದ್ದು, “ನಾವು ಈ ಪಂದ್ಯದ ಮೊದಲ 10-12 ಓವರ್‌ಗಳ ಆಟದಲ್ಲಿದ್ದೆವು. ಆದರೆ ಆ ನಂತರ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೂ ಈ ಸರಣಿಯಿಂದ ನಾವು ಸಾಕಷ್ಟು ಕಲಿತಿದ್ದೇವೆ. ಈಗ ನಮ್ಮ ತಂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿರುವ ರೀತಿ ತುಂಬಾ ಚೆನ್ನಾಗಿದೆ. ಡ್ರೆಸ್ಸಿಂಗ್ ರೂಮಿನಲ್ಲಿ ಎಲ್ಲರ ಮೇಲೂ ನಂಬಿಕೆ ಇಟ್ಟು ಮೈದಾನದಲ್ಲಿ ಆಟ ಪ್ರದರ್ಶಿಸಲು ಮುಂದಾಗಿದ್ದೆವು” ಎಂದು ಹೇಳಿದ್ದಾರೆ.

“ವಿಶ್ವಕಪ್‌ಗೂ ಮುನ್ನ ನಾವು ತ್ರಿಕೋನ ಸರಣಿಯನ್ನು ಆಡಲಿದ್ದೇವೆ ಮತ್ತು ಅಲ್ಲಿ ಸಂಪೂರ್ಣ ಸಿದ್ಧರಾಗಲು ಬಯಸುತ್ತೇವೆ” ಎಂದು ನಾಯಕಿ ಹೇಳಿದರು. ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಎರಡನೇ ಪಂದ್ಯವನ್ನಷ್ಟೇ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ: BCCI Apex Council Meeting: ಇಂದು ಬಿಸಿಸಿಐನಿಂದ ರೋಹಿತ್-ದ್ರಾವಿಡ್ ಭವಿಷ್ಯ ನಿರ್ಧಾರ: ಮಹತ್ವದ ತೀರ್ಮಾನಕ್ಕೆ ಕ್ಷಣಗಣನೆ!

ಭಾರತಕ್ಕೆ ಸೋಲು:

ಟಿ20 ಸರಣಿಯನ್ನು ಆಸ್ಟ್ರೇಲಿಯಾ 4-1 ಅಂತರದಲ್ಲಿ ಗೆದ್ದುಕೊಂಡಿದೆ. ಐದನೇ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಆಸ್ಟ್ರೇಲಿಯಾ ಒಂದು ಹಂತದಲ್ಲಿ 67 ರನ್ ಗಳಿಸುವ ಮೂಲಕ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆದರೆ ಅಲ್ಲಿಂದ ಗಾರ್ಡನರ್ ಮತ್ತು ಹ್ಯಾರಿಸ್ ಅದ್ಭುತ ಇನ್ನಿಂಗ್ಸ್ ಆಡಿದರು. ಕೊನೆಯ ಎಂಟು ಓವರ್‌ಗಳಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು 112 ರನ್ ಬಾರಿಸಿದರು. ಅಂದಿನಿಂದ ಈ ಪಂದ್ಯದಲ್ಲಿ ಭಾರತಕ್ಕೆ ಮರಳಲು ಸಾಧ್ಯವಾಗಲಿಲ್ಲ. ದೀಪ್ತಿ ಅರ್ಧಶತಕ ಬಾರಿಸುವ ಪ್ರಯತ್ನ ಮಾಡಿದರೂ ವ್ಯರ್ಥವಾಯಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡವನ್ನು 142 ರನ್‌ಗಳಿಗೆ ಕಟ್ಟಿಹಾಕಲಾಯಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News