IPL 2023 Mini Auction: ವಿಶ್ವಕಪ್ ಟ್ರೋಫಿ ಗೆಲ್ಲಲು ಕಾರಣವಾದ ಈ ಆಟಗಾರನ ಮೇಲೆ ಕಣ್ಣಿಟ್ಟ CSK!!

IPL 2023 Mini Auction: ಐಪಿಎಲ್ 2023 ರ ಮಿನಿ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಸ್ಯಾಮ್ ಕರ್ರಾನ್ ಅವರನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಸ್ಯಾಮ್ ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್‌ನಲ್ಲಿ ನುರಿತ ಆಟಗಾರ. ಈ ಮೊದಲು CSK ತಂಡದಲ್ಲಿ ಆಡಿದ್ದಾರೆ. ಸ್ಯಾಮ್ ಇತ್ತೀಚಿನ ದಿನಗಳಲ್ಲಿ ಅಸಾಧಾರಣವಾದ ಸಾಧನೆ ಮಾಡಿದ್ದಾರೆ. CSK ತಂಡವು 2020 ರಲ್ಲಿ 5.5 ಕೋಟಿ ರೂಪಾಯಿಗೆ ಖರೀದಿಸಿತ್ತು.

Written by - Bhavishya Shetty | Last Updated : Dec 20, 2022, 09:54 AM IST
    • ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ
    • ತಂಡದ ಸ್ಟಾರ್ ಆಲ್ ರೌಂಡರ್ ಡ್ವೇನ್ ಬ್ರಾವೋ ಕೂಡ ನಿವೃತ್ತಿ
    • ಐಪಿಎಲ್ 2023 ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ
IPL 2023 Mini Auction: ವಿಶ್ವಕಪ್ ಟ್ರೋಫಿ ಗೆಲ್ಲಲು ಕಾರಣವಾದ ಈ ಆಟಗಾರನ ಮೇಲೆ ಕಣ್ಣಿಟ್ಟ CSK!!  title=
Sam Curran

IPL 2023 Mini Auction: ಐಪಿಎಲ್ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲೀಗ್ ಆಗಿದೆ. ಜಗತ್ತಿನ ಪ್ರತಿಯೊಬ್ಬ ಕ್ರಿಕೆಟಿಗನೂ ಐಪಿಎಲ್‌ನಲ್ಲಿ ಆಡಲು ಬಯಸುತ್ತಾನೆ. ಅನೇಕ ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡುವ ಮೂಲಕ ವೃತ್ತಿಜೀವನವನ್ನು ಕಂಡುಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಆದರೆ ಕಳೆದ ಋತುವಿನಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದೇ ವೇಳೆ ತಂಡದ ಸ್ಟಾರ್ ಆಲ್ ರೌಂಡರ್ ಡ್ವೇನ್ ಬ್ರಾವೋ ಕೂಡ ನಿವೃತ್ತಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಅಪಾಯಕಾರಿ ಆಲ್‌ರೌಂಡರ್ ಮೇಲೆ ಬಾಜಿ ಕಟ್ಟಲು ಸಿಎಸ್‌ಕೆ ತಂಡ ಬಯಸುತ್ತಿದೆ. ಐಪಿಎಲ್ 2023 ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: Rishabh Pant house: ರಿಷಬ್ ಪಂತ್ ಮನೆ ಮುಂದೆ ಹೂತು ಹಾಕಿದೆ ಹತ್ತಾರು ರೈಲ್ವೆ ಕಂಬಗಳು: ಇದರ ಹಿಂದಿದೆ ಆಘಾತಕಾರಿ ಕಾರಣ

ಐಪಿಎಲ್ 2023 ರ ಮಿನಿ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಸ್ಯಾಮ್ ಕರ್ರಾನ್ ಅವರನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಸ್ಯಾಮ್ ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್‌ನಲ್ಲಿ ನುರಿತ ಆಟಗಾರ. ಈ ಮೊದಲು CSK ತಂಡದಲ್ಲಿ ಆಡಿದ್ದಾರೆ. ಸ್ಯಾಮ್ ಇತ್ತೀಚಿನ ದಿನಗಳಲ್ಲಿ ಅಸಾಧಾರಣವಾದ ಸಾಧನೆ ಮಾಡಿದ್ದಾರೆ. CSK ತಂಡವು 2020 ರಲ್ಲಿ 5.5 ಕೋಟಿ ರೂಪಾಯಿಗೆ ಖರೀದಿಸಿತ್ತು.

CSK ತಂಡವು ಯಾವಾಗಲೂ ತನ್ನ ಹಳೆಯ ಆಟಗಾರರನ್ನು ತಂಡಕ್ಕೆ ಕರೆತರುವಲ್ಲಿ ಹೆಸರುವಾಸಿಯಾಗಿದೆ. ಡ್ವೇನ್ ಬ್ರಾವೋ ನಿವೃತ್ತಿಯಾದಾಗಿದ್ದಾರೆ. ಆ ಬಳಿಕ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದರು. ಟಿ20 ಕ್ರಿಕೆಟ್‌ನಲ್ಲಿ ಸ್ಯಾಮ್ ಕರ್ರಾನ್ ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುತ್ತಾರೆ. ಸ್ಯಾಮ್ ಕರ್ರಾನ್ ಮೂಲ ಬೆಲೆ 2 ಕೋಟಿ ರೂ. ಅವರು ಐಪಿಎಲ್‌ನ 32 ಪಂದ್ಯಗಳಲ್ಲಿ 337 ರನ್ ಗಳಿಸಿದ್ದಾರೆ.

ಇದನ್ನೂ ಓದಿ: Team India: ಈ ದಿನಾಂಕದಂದು ನಿರ್ಧಾರವಾಗುತ್ತೆ ರೋಹಿತ್-ದ್ರಾವಿಡ್ ಭವಿಷ್ಯ: ಟಿ20 ತಂಡದಲ್ಲಿ ಉಳಿಯುತ್ತಾರಾ?

ಸ್ಯಾಮ್ ಕರ್ರನ್ 2022 ರ ಟಿ20 ವಿಶ್ವಕಪ್‌ನಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ. ಪಾಕಿಸ್ತಾನ ವಿರುದ್ಧದ ಅಂತಿಮ ಪಂದ್ಯದಲ್ಲಿ ಅವರು 4 ಓವರ್‌ಗಳಲ್ಲಿ 12 ರನ್‌ಗಳಿಗೆ 3 ಪ್ರಮುಖ ವಿಕೆಟ್‌ಗಳನ್ನು ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದರು. ಅವರು ಏಕಾಂಗಿಯಾಗಿ ಇಂಗ್ಲೆಂಡ್ ತಂಡಕ್ಕೆ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದರು. ಸ್ಯಾಮ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ಅವರು ಈ ಹಿಂದೆ ಧೋನಿ ನಾಯಕತ್ವದಲ್ಲಿ ಆಡಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News