ತಂಡಕ್ಕೆ ರೋಹಿತ್ ಶರ್ಮಾ ಆಗಮನದಿಂದ ಮುಗಿದೇ ಹೋಯಿತು ಕೊಹ್ಲಿಯ ನೆಚ್ಚಿನ ಆಟಗಾರನ ಭವಿಷ್ಯ

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ರೋಹಿತ್ ಶರ್ಮಾ, ಈಗ ಟೆಸ್ಟ್ ನಲ್ಲೂ ಬೆಸ್ಟ್ ಆಗಿ ಹೊರ ಹೊಮ್ಮಿದ್ದಾರೆ.  

Written by - Ranjitha R K | Last Updated : Nov 21, 2021, 10:30 AM IST
  • ಮುಗಿದೇ ಹೋಯಿತು ಈ ಆಟಗಾರನ ಭವಿಷ್ಯ
  • ಒಂದು ಕಾಲದಲ್ಲಿ ಕೊಹ್ಲಿಯ ನೆಚ್ಚಿನ ಆಟಗಾರನಾಗಿದ್ದರು
  • ತನ್ನ ಸ್ಥಾನ ಭದ್ರಪಡಿಸಿಕೊಂಡ ರೋಹಿತ್ ಶರ್ಮಾ
ತಂಡಕ್ಕೆ ರೋಹಿತ್ ಶರ್ಮಾ ಆಗಮನದಿಂದ ಮುಗಿದೇ ಹೋಯಿತು ಕೊಹ್ಲಿಯ ನೆಚ್ಚಿನ ಆಟಗಾರನ ಭವಿಷ್ಯ  title=
rohit sharma (file photo)

ನವದೆಹಲಿ : ರೋಹಿತ್ ಶರ್ಮಾ (Rohit Sharma) ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಬ್ಯಾಟ್ಸ್ ಮ್ಯಾನ್ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ಕೆಲವು ವರ್ಷಗಳಲ್ಲಿ, ರೋಹಿತ್ ಓಪನಿಂಗ್ ವ್ಯಾಖ್ಯಾನವನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಈ ಇವರು, ಈಗ ಟೆಸ್ಟ್ ನಲ್ಲೂ ಬೆಸ್ಟ್ ಆಗಿ ಹೊರ ಹೊಮ್ಮಿದ್ದಾರೆ. ಆದರೆ ರೋಹಿತ್ ಎಲ್ಲಾ ಕಡೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಂತೆಯೇ ಮತ್ತೊಬ್ಬ ಆಟಗಾರನ  ವೃತ್ತಿಜೀವನವು ಬಹುತೇಕ ಮುಕ್ತಾಯವಾದಂತಾಗಿದೆ.

ಯಾರು ಆ ಆಟಗಾರ ?
ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್ ಮ್ಯಾನ್ ಮುರಳಿ ವಿಜಯ್ (Murali Vijay) ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಅತ್ಯಂತ ವಿಶ್ವಾಸಾರ್ಹ ಆರಂಭಿಕ ಆಟಗಾರರಾಗಿದ್ದರು. ಆದರೆ, ಕಳೆದ ಕೆಲ ವರ್ಷಗಳಿಂದ ವಿಜಯ್ ಗೆ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಮುರಳಿ ವಿಜಯ್ ಡಿಸೆಂಬರ್ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ನಂತರ ಮಯಾಂಕ್ ಅಗರ್ವಾಲ್ ಮತ್ತು ನಂತರ ರೋಹಿತ್ ಶರ್ಮಾ (Rohit Sharma) ಬಂದ ನಂತರ ಮುರಳಿ ವಿಜಯ್ ಗೆ ಅವಕಾಶ ಸಿಗಲೇ ಇಲ್ಲ. ಈಗ ಮತ್ತೆ ವಿಜಯ್ ಗೆ ತಂಡದಲ್ಲಿ ಸ್ಥಾನ ಸಿಗುವ ಲಕ್ಷಣ ಕಾಣುತ್ತಿಲ್ಲ.  

ಇದನ್ನೂ ಓದಿ : ಇಮ್ರಾನ್ ಖಾನ್ ರನ್ನು 'ಬಡಾ ಭಾಯ್' ಎಂದು ಕರೆದಿದ್ದಕ್ಕಾಗಿ ಸಿಧು ವಿರುದ್ಧ ಗಂಭೀರ ಕಿಡಿ

ಮುರಳಿ ವಿಜಯ್ ಅವರ ವೃತ್ತಿಜೀವನ ಹೀಗಿದೆ :
ಮುರಳಿ ವಿಜಯ್ ಟೆಸ್ಟ್ ಕ್ರಿಕೆಟ್‌ನಲ್ಲಿ (Mural vijay in Test cricket) ಒಟ್ಟು 61 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 3982 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳು ಕೂಡ ಸೇರಿವೆ. ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ ಹಾಗಾಗಿ ವಿಶೇಷವಾದ ಪ್ರದರ್ಶನ ನೀಡುವುದು ಕೂಡಾ ಸಾಧ್ಯವಾಗಲಿಲ್ಲ. ಕಳೆದ 3 ವರ್ಷಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ (KL Rahul) ಫಾರ್ಮ್ ನೋಡಿದರೆ ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಕೂಡ ಸಿಗುವುದು ಕೂಡಾ ಕಷ್ಟ ಎನಿಸುತ್ತಿದೆ.

 ರೋಹಿತ್ ಅತ್ಯುತ್ತಮ ಓಪನರ್ :
ರೋಹಿತ್ ಶರ್ಮಾ ಪ್ರಸ್ತುತ ಟೀಂ ಇಂಡಿಯಾ (Team India) ಮಾತ್ರವಲ್ಲದೆ ವಿಶ್ವದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್ ಮ್ಯಾನ್. ODI ಮತ್ತು T20 ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ರೋಹಿತ್ ಶರ್ಮಾ, ODI ಕ್ರಿಕೆಟ್‌ನಲ್ಲಿ 3 ದ್ವಿಶತಕಗಳನ್ನುಬಾರಿಸಿದ್ದಾರೆ.  ಪ್ರಸ್ತುತ ಯಾವುದೇ ಬ್ಯಾಟ್ಸ್ ಮ್ಯಾನ್ ರೋಹಿತ್ ಅವರ ಈ ದಾಖಲೆಯ ಹತ್ತಿರವೂ ಇಲ್ಲ.

ಇದನ್ನೂ ಓದಿ : IPL 2022 ಭಾರತದಲ್ಲಿ ನಡೆಯಲಿದೆ- ಬಿಸಿಸಿಐ ಕಾರ್ಯದರ್ಶಿ ಜೇ ಶಾ ಘೋಷಣೆ

ಟಿ20 ತಂಡದ ನಾಯಕ :
ಇತ್ತೀಚೆಗಷ್ಟೇ ಟಿ20 ವಿಶ್ವಕಪ್‌ನಲ್ಲಿ (T20 world cup) ಭಾರತದ ಸೋಲಿನೊಂದಿಗೆ ವಿರಾಟ್ ಕೊಹ್ಲಿ (Virat Kohli) ಟಿ20 ತಂಡದ ನಾಯಕತ್ವ ತೊರೆದಿದ್ದರು. ಇದಾದ ನಂತರ,  ಮಂಡಳಿಯು ರೋಹಿತ್ ಶರ್ಮಾ ಅವರನ್ನು ಟಿ20 ತಂಡದ ನೂತನ ನಾಯಕನನ್ನಾಗಿ ಘೋಷಿಸಿತು. ರೋಹಿತ್ ನಾಯಕತ್ವದಲ್ಲಿ ಯುವ ತಂಡ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಗೆದ್ದುಕೊಂಡಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News