ಇಮ್ರಾನ್ ಖಾನ್ ರನ್ನು 'ಬಡಾ ಭಾಯ್' ಎಂದು ಕರೆದಿದ್ದಕ್ಕಾಗಿ ಸಿಧು ವಿರುದ್ಧ ಗಂಭೀರ ಕಿಡಿ

ಕ್ರಿಕೆಟಿಗ-ರಾಜಕಾರಣಿ ಗೌತಮ್ ಗಂಭೀರ್ ಶನಿವಾರ (ನವೆಂಬರ್ 20, 2021) ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 'ಬಡಾ ಭಾಯ್' ಎಂದು ಕರೆದಿದ್ದಕ್ಕಾಗಿ ನವಜೋತ್ ಸಿಂಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Written by - Zee Kannada News Desk | Last Updated : Nov 21, 2021, 01:15 AM IST
  • ಕ್ರಿಕೆಟಿಗ-ರಾಜಕಾರಣಿ ಗೌತಮ್ ಗಂಭೀರ್ ಶನಿವಾರ (ನವೆಂಬರ್ 20, 2021) ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 'ಬಡಾ ಭಾಯ್' ಎಂದು ಕರೆದಿದ್ದಕ್ಕಾಗಿ ನವಜೋತ್ ಸಿಂಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ
ಇಮ್ರಾನ್ ಖಾನ್ ರನ್ನು 'ಬಡಾ ಭಾಯ್' ಎಂದು ಕರೆದಿದ್ದಕ್ಕಾಗಿ ಸಿಧು ವಿರುದ್ಧ ಗಂಭೀರ ಕಿಡಿ title=

ನವದೆಹಲಿ: ಕ್ರಿಕೆಟಿಗ-ರಾಜಕಾರಣಿ ಗೌತಮ್ ಗಂಭೀರ್ ಶನಿವಾರ (ನವೆಂಬರ್ 20, 2021) ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 'ಬಡಾ ಭಾಯ್' ಎಂದು ಕರೆದಿದ್ದಕ್ಕಾಗಿ ನವಜೋತ್ ಸಿಂಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಪೂರ್ವ ದೆಹಲಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಲೋಕಸಭಾ ಸದಸ್ಯ ಗೌತಮ್ ಗಂಭೀರ 'ನಿಮ್ಮ ಮಗ ಅಥವಾ ಮಗಳನ್ನು ಗಡಿಗೆ ಕಳುಹಿಸಿ ಮತ್ತು ನಂತರ ಭಯೋತ್ಪಾದಕ ರಾಷ್ಟ್ರದ ಮುಖ್ಯಸ್ಥನನ್ನು ನಿಮ್ಮ ದೊಡ್ಡಣ್ಣ ಎಂದು ಕರೆಯಿರಿ!" ಎಂದು ಅವರು ಟ್ವೀಟ್ ಮಾಡಿದ್ದಾರೆ.ಗಡಿಯಾಚೆಗಿನ ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ಪ್ರವಾಸದ ಸಂದರ್ಭದಲ್ಲಿ ಸಿಧು ಖಾನ್ ಅವರನ್ನು ತಮ್ಮ 'ಅಣ್ಣ' ಎಂದು ಕರೆದಿದ್ದರು.

ಇದನ್ನೂ ಓದಿ : SBI Alert : ತಪ್ಪಿ ನೀವೇನಾದರೂ ಮಾಡಿಬಿಟ್ಟರೆ ಈ ಕೆಲಸ, ಖಾಲಿಯಾಗಿ ಬಿಡುತ್ತದೆ ನಿಮ್ಮ ಅಕೌಂಟ್

ಇಮ್ರಾನ್ ಖಾನ್ ನನ್ನ ಹಿರಿಯ ಸಹೋದರ. ನನಗೆ ಬಹಳ ಗೌರವವಿದೆ. ಅವರು (ಖಾನ್) ನಮಗೆ ಸಾಕಷ್ಟು ಪ್ರೀತಿಯನ್ನು ನೀಡಿದರು" ಎಂದು ಕಾಂಗ್ರೆಸ್‌ನ ಪಂಜಾಬ್ ಘಟಕದ ಅಧ್ಯಕ್ಷರು ಹೇಳಿರುವ ವೀಡಿಯೊ ಈಗ ಸಾಕಷ್ಟು ವೈರಲ್ ಆಗಿದೆ.

ಪಾಕಿಸ್ತಾನದ ಕರ್ತಾರ್‌ಪುರ ಯೋಜನೆಯ ಸಿಇಒ ಅವರೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಸಿಧು ಈ ಹೇಳಿಕೆ ನೀಡಿದ್ದಾರೆ. ಅವರು ಶ್ರೀ ಕರ್ತಾರ್‌ಪುರ ಸಾಹಿಬ್ ಗುರುದ್ವಾರದಲ್ಲಿ ಪೂಜೆ ಸಲ್ಲಿಸಲು ಪಂಜಾಬ್ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಕರ್ತಾರ್‌ಪುರದಲ್ಲಿದ್ದರು. 

ಹಿಂದಿನ ದಿನ, ಸಿಧು ಅವರ ಹೇಳಿಕೆಯ ಕ್ಲಿಪ್ ಅನ್ನು ಹಂಚಿಕೊಂಡ ಬಿಜೆಪಿ ಐಟಿ ಸೆಲ್ ರಾಷ್ಟ್ರೀಯ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು 'ಅನುಭವಿ ಅಮರಿಂದರ್ ಸಿಂಗ್‌ಗಿಂತ ಪಾಕಿಸ್ತಾನವನ್ನು ಪ್ರೀತಿಸುವ ಸಿಧು'ಗೆ ಒಲವು ತೋರಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : SBI Alert : ತಪ್ಪಿ ನೀವೇನಾದರೂ ಮಾಡಿಬಿಟ್ಟರೆ ಈ ಕೆಲಸ, ಖಾಲಿಯಾಗಿ ಬಿಡುತ್ತದೆ ನಿಮ್ಮ ಅಕೌಂಟ್

2018 ರಲ್ಲಿ, ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಸಿಧು ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಅವರನ್ನು ತಬ್ಬಿಕೊಂಡು ವಿವಾದಕ್ಕೆ ಕಾರಣರಾಗಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News