Virat Kohli : ಚೊಚ್ಚಲ ಶತಕ ಸಿಡಿಸಿ ಭಾವುಕರಾಗಿ, ಮದುವೆ ಉಂಗುರಕ್ಕೆ ಕಿಸ್ ಮಾಡಿದ ಕೊಹ್ಲಿ

ಈ ಪಂದ್ಯದಲ್ಲಿ ಕೊಹ್ಲಿ 2019 ರ ನಂತರ ಮೊದಲ ಬಾರಿಗೆ 100 ರನ್ ಗಡಿ ದಾಟಿದ್ದಾರೆ. ರನ್ ಮಳೆ ಸುರುಸಿ ವಿರಾಟ್ ಕೊಹ್ಲಿ ಭಾವುಕರಾದರು.

Written by - Channabasava A Kashinakunti | Last Updated : Sep 8, 2022, 10:41 PM IST
  • ಫಾರ್ಮ್‌ನಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ
  • ಈ ಪಂದ್ಯದಲ್ಲಿ ಕೊಹ್ಲಿ 2019 ರ ನಂತರ ಮೊದಲ ಬಾರಿಗೆ 100 ರನ್ ಗಡಿ
  • ರನ್ ಮಳೆ ಸುರುಸಿ ವಿರಾಟ್ ಕೊಹ್ಲಿ ಭಾವುಕರಾದರು.
Virat Kohli : ಚೊಚ್ಚಲ ಶತಕ ಸಿಡಿಸಿ ಭಾವುಕರಾಗಿ, ಮದುವೆ ಉಂಗುರಕ್ಕೆ ಕಿಸ್ ಮಾಡಿದ ಕೊಹ್ಲಿ title=

Virat Kohli 100 vs Afghanistan : ಏಷ್ಯಾ ಕಪ್ 2022 ರ ಆರಂಭದಿಂದಲೂ ಫಾರ್ಮ್‌ನಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಅಫ್ಘಾನಿಸ್ತಾನ ವಿರುದ್ಧವೂ ಇದೇ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ 2019 ರ ನಂತರ ಮೊದಲ ಬಾರಿಗೆ 100 ರನ್ ಗಡಿ ದಾಟಿದ್ದಾರೆ. ರನ್ ಮಳೆ ಸುರುಸಿ ವಿರಾಟ್ ಕೊಹ್ಲಿ ಭಾವುಕರಾದರು.

ಮದುವೆ ಉಂಗುರಕ್ಕೆ ಕಿಸ್ ಮಾಡಿದ ಕೊಹ್ಲಿ

ಕಳೆದ ಎರಡೂವರೆ ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಬ್ಯಾಟ್‌ನಿಂದ ಒಂದೇ ಒಂದು ಶತಕವೂ ಸಿಡಿಸಿರಲಿಲ್ಲ, ಆದ್ದರಿಂದ ಕೊಹ್ಲಿಗೆ ಈ ಇನ್ನಿಂಗ್ಸ್ ತುಂಬಾ ವಿಶೇಷವಾಗಿತ್ತು. ಈ ಪಂದ್ಯದಲ್ಲಿ ವಿರಾಟ್ ಶತಕ ಹೊಡೆದ ಕೂಡಲೇ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಶತಕ ಪೂರೈಸಿದ ಬಳಿಕ ಕೊಹ್ಲಿ ಪ್ರೇಕ್ಷಕರತ್ತ ಬ್ಯಾಟ್ ತೋರಿಸಿ ತಮ್ಮ ಮದುವೆಯ ಉಂಗುರಕ್ಕೆ ಮುತ್ತಿಟ್ಟರು. ಶತಕ ಪೂರೈಸಿದ ಬಳಿಕ ವಿರಾಟ್ ಕೊಹ್ಲಿಯ ಈ ಭಾವನಾತ್ಮಕ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ : Ind vs AFG T20 : ಟಿ20ಐನಲ್ಲಿ ಪ್ರಪ್ರಥಮ ಶತಕ ಸಿಡಿಸಿದ ಕಿಂಗ್ ಕೊಹ್ಲಿ

ಬೌಲರ್‌ಗಳಿಗೆ ಫುಲ್ ಕ್ಲಾಸ್ 

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದ್ದರು. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಕೊಹ್ಲಿ 61 ಎಸೆತಗಳಲ್ಲಿ 122 ರನ್‌ಗಳ ಇನಿಂಗ್ಸ್‌ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಬ್ಯಾಟ್‌ನಿಂದ 12 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಸಿಡಿಸಿದರು, ಅವರು 200 ರ ಡೈರೆಕ್ಟ್ ರೇಟ್ ಗಳಿಸಿದರು. ವಿರಾಟ್ ಕೊಹ್ಲಿ ಔಟಾಗದೆ ಪೆವಿಲಿಯನ್ ಗೆ ಹಿಂತಿರುಗಿ ತಂಡವನ್ನು 212 ರನ್ ಗಳ ಸ್ಕೋರ್ ಗೆ ಕೊಂಡೊಯ್ದರು.

ಈ ಇನ್ನಿಂಗ್ಸ್‌ಗೂ ಮುನ್ನ ವಿರಾಟ್ ಕೊಹ್ಲಿ ತಮ್ಮ ಕೊನೆಯ ಶತಕವನ್ನು ಬಾಂಗ್ಲಾದೇಶ ವಿರುದ್ಧ 22 ನವೆಂಬರ್ 2019 ರಂದು ಗಳಿಸಿದ್ದರು. ಮತ್ತೊಂದೆಡೆ, ನಾವು ಏಷ್ಯಾ ಕಪ್ 2022 ರಲ್ಲಿ ಅವರ ಅಂಕಿಅಂಶಗಳ ಬಗ್ಗೆ ಮಾತನಾಡುವುದಾದರೆ, ವಿರಾಟ್ ಕೊಹ್ಲಿ ಏಷ್ಯಾ ಕಪ್ 2022 ರಲ್ಲಿ 5 ಇನ್ನಿಂಗ್ಸ್‌ಗಳಲ್ಲಿ 276 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ 92ರ ಸರಾಸರಿಯಲ್ಲಿ ರನ್ ಗಳಿಸಿರುವ ಅವರು 3 ಬಾರಿ 50 ರನ್ ಗಡಿ ದಾಟಿದ್ದಾರೆ. ವಿರಾಟ್ ಕೊಹ್ಲಿಯ ಈ ಫಾರ್ಮ್ ಮುಂದಿನ ದಿನಗಳಲ್ಲಿ ತಂಡಕ್ಕೆ ತುಂಬಾ ಉಪಯುಕ್ತವಾಗಬಹುದು.

ಇದನ್ನೂ ಓದಿ : IND vs NZ 2022 : ಭಾರತ - ನ್ಯೂಜಿಲೆಂಡ್‌ ಟೆಸ್ಟ್ ಪಂದ್ಯ ಮುಂದೂಡಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News