Virat Kohli 50 million Followers : ಟೀಂ ಇಂಡಿಯಾದ ಲೆಜೆಂಡರಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಪ್ರಾಬಲ್ಯ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಹಾಗೆ, ಪ್ರತಿದಿನ ತಮ್ಮ ಹೆಸರಿನಲ್ಲಿ ಕೆಲವು ದಾಖಲೆಗಳನ್ನು ಮಾಡುತ್ತಲೇ ಇರುತ್ತಾರೆ. ಪ್ರಸ್ತುತ ವಿರಾಟ್ ತಮ್ಮ ಹೆಸರಿನಲ್ಲಿ ವಿಶ್ವದಾಖಲೆ ಮಾಡಿದ್ದಾರೆ, ಆದರೆ ಈ ಬಾರಿ ಅವರು ಈ ಸಾಧನೆ ಮಾಡಿದ್ದು ಮೈದಾನದಲ್ಲಿ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ. ಹೌದು, ಹಾಗಿದ್ರೆ ಈ ಸಾಧನೆ ಯಾವುದು? ಇಲ್ಲಿಡಿ ನೋಡಿ..
ವಿಶ್ವದಾಖಲೆ ಮಾಡಿದ ವಿರಾಟ್
ವಿರಾಟ್ ಕೊಹ್ಲಿ ಟ್ವಿಟರ್ ಖಾತೆಯಲ್ಲಿ ಫಾಲೋವರ್ಸ್ ಸಂಖ್ಯೆ 50 ಮಿಲಿಯನ್ ದಾಟಿದೆ. ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ 50 ಮಿಲಿಯನ್ ಫಾಲೋವರ್ಸ್ ಗಡಿ ದಾಟಿರುವ ವಿಶ್ವದ ಮೊದಲ ಕ್ರಿಕೆಟ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ಟ್ವಿಟರ್ ಖಾತೆ ಈಗ ದೇಶ(ಭಾರತ)ದ 3ನೇ ಅತಿದೊಡ್ಡ ಖಾತೆಯಾಗಿದೆ. ಅವರಿಗಿಂತ ಹೆಚ್ಚಿನ ಫಾಲೋವರ್ಸ್ ಗಳನ್ನು ಪಿಎಂಒ ಅಧಿಕೃತ ಟ್ವಿಟರ್ ಖಾತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ ಹೊಂದಿದೆ.
Thank you for all the love and support throughout the Asia Cup campaign. We will get better and come back stronger. Untill next time ❤️🇮🇳 pic.twitter.com/yASQ5SbsHl
— Virat Kohli (@imVkohli) September 9, 2022
ಇದನ್ನೂ ಓದಿ : ಈ ಆಟಗಾರನಿಗೆ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಸಿಗದಿರುವುದಕ್ಕೆ ಶುರುವಾಗಿದೆ ಗಲಾಟೆ
Instagram ನಲ್ಲಿ ಕೂಡ ದಾಖಲೆಗಳು
ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 211 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 200 ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೊದಲ ಭಾರತೀಯ ವಿರಾಟ್ ಕೊಹ್ಲಿಯಾಗಿದ್ದಾರೆ. ಈ ವಿಚಾರದಲ್ಲಿ ವಿರಾಟ್‌ಗೆ ಹತ್ತಿರ ಕೂಡ ಯಾವುದೇ ಭಾರತೀಯನೂ ಇಲ್ಲ. ಇಷ್ಟೇ ಅಲ್ಲ ಕಳೆದ ವರ್ಷ 100 ಮಿಲಿಯನ್ ಫಾಲೋವರ್ಸ್ ಪೂರೈಸಿದ್ದ ಕೊಹ್ಲಿ ಅದಾಗಲೇ ಭಾರತೀಯರಾಗಿದ್ದರು. ವಿರಾಟ್ ಕೊಹ್ಲಿ ಮೈದಾನದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಒಂದರ ಹಿಂದೆ ಒಂದು ದಾಖಲೆಗಳನ್ನು ಮಾಡುತ್ತಿದ್ದಾರೆ.
ವಿರಾಟ್ ಮುಂದೆ ಇದ್ದಾರೆ 4 ಸೆಲೆಬ್ರಿಟಿಗಳು
ಇನ್‌ಸ್ಟಾಗ್ರಾಮ್ ಫಾಲೋವರ್‌ಗಳ ವಿಷಯದಲ್ಲಿ ವಿರಾಟ್ ಕೊಹ್ಲಿ ವಿಶ್ವದ ದೊಡ್ಡ ಸೆಲೆಬ್ರಿಟಿಗಳನ್ನು ಬಿಟ್ಟಿದ್ದಾರೆ. ಆದರೆ ಇನ್ನೂ ಈ ವಿಷಯದಲ್ಲಿ ವಿರಾಟ್‌ಗಿಂತ ಮುಂದಿರುವ ನಾಲ್ಕು ಜಾನ್ ಸೆಲೆಬ್ರೆಟಿಗಳು ವಿಶ್ವದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ (476 ಮಿಲಿಯನ್), ಕೈಲಿ ಜೆನ್ನರ್ (366 ಮಿಲಿಯನ್), ಸೆಲೆನಾ ಗೋಮ್ಸ್ (342 ಮಿಲಿಯನ್) ಮತ್ತು ಡ್ವೇನ್ ಜಾನ್ಸನ್ (334) ಮಾತ್ರ ವಿರಾಟ್ ಕೊಹ್ಲಿಗಿಂತ ಮುಂದಿದ್ದಾರೆ.
ಇದನ್ನೂ ಓದಿ : ಟೀಂ ಇಂಡಿಯಾದಿಂದ ಜಡೇಜಾ ಔಟ್ : ಈ ಆಟಗಾರನಿಗೆ ಸಿಕ್ತು ಚಾನ್ಸ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.