ವಿರಾಟ್ ಕೊಹ್ಲಿ, ಧೋನಿ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರೆಂದ ಆಸ್ಟ್ರೇಲಿಯಾದ ಆರನ್ ಫಿಂಚ್..!

ಆಸ್ಟ್ರೇಲಿಯಾದ ಆಟಗಾರ ಆರನ್ ಫಿಂಚ್ ಅವರು ಭಾರತದ ಧೋನಿ ಹಾಗೂ ವಿರಾಟ್ ಕೊಹ್ಲಿಯನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರರೆಂದು ಕರೆದಿದ್ದಾರೆ.ಭಾರತಕ್ಕೆ ಪ್ರವಾಸ ಬಂದಂತಹ ಸಂದರ್ಭದಲ್ಲಿ ಅವರಿಗೆ ಸರಣಿ ಮುಕ್ತಾಯವಾದ ನಂತರ ಧೋನಿ ಹಾಗೂ ವಿರಾಟ್ ಕೊಹ್ಲಿ ಜರ್ಸಿಗಳನ್ನು ನೀಡಲಾಗಿತ್ತು.ಈಗ ಈ ಜರ್ಸಿಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 

Last Updated : Apr 28, 2019, 05:22 PM IST
ವಿರಾಟ್ ಕೊಹ್ಲಿ, ಧೋನಿ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರೆಂದ ಆಸ್ಟ್ರೇಲಿಯಾದ ಆರನ್ ಫಿಂಚ್..!  title=
Photo courtesy: Instagram

ನವದೆಹಲಿ: ಆಸ್ಟ್ರೇಲಿಯಾದ ಆಟಗಾರ ಆರನ್ ಫಿಂಚ್ ಅವರು ಭಾರತದ ಧೋನಿ ಹಾಗೂ ವಿರಾಟ್ ಕೊಹ್ಲಿಯನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರರೆಂದು ಕರೆದಿದ್ದಾರೆ.ಭಾರತಕ್ಕೆ ಪ್ರವಾಸ ಬಂದಂತಹ ಸಂದರ್ಭದಲ್ಲಿ ಅವರಿಗೆ ಸರಣಿ ಮುಕ್ತಾಯವಾದ ನಂತರ ಧೋನಿ ಹಾಗೂ ವಿರಾಟ್ ಕೊಹ್ಲಿ ಜರ್ಸಿಗಳನ್ನು ನೀಡಲಾಗಿತ್ತು.ಈಗ ಈ ಜರ್ಸಿಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 

 
 
 
 

 
 
 
 
 
 
 
 
 

Thank you @virat.kohli & @mahi7781 Very lucky to have been given a shirt by both guys during the last series we played against India. Whilst we battle it out hard for our countries on the field, the respect I have for 2 of the games all time greats is huge! It’s important to take some time to be grateful and appreciate the opportunities we have been given!

A post shared by Aaron Finch (@aaronfinch5) on

ಈ ಹಿನ್ನಲೆಯಲ್ಲಿ ಭಾನುವಾರದಂದು ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿ ಅವರ ಜರ್ಸಿಗಳನೊಂದಿಗೆ  ಫೋಟೋಗೆ ಪೋಸ್ ನೀಡಿರುವ ಆರನ್ ಫಿಂಚ್ " ಧನ್ಯವಾದಗಳು ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ. ಭಾರತದ ವಿರುದ್ದ ಆಡಿದ ಕಳೆದ ಸರಣಿಯಲ್ಲಿ ನನಗೆ ಈ ಜರ್ಸಿ ಗಳನ್ನು  ನೀಡಿರುವುದು ನಿಜಕ್ಕೂ ಲಕ್ಕಿ ಎಂದು ಹೇಳಬಹುದು. ಮೈದಾನದಲ್ಲಿ ನಾವು ಹೊರಾಡುತ್ತಿವೆ ನಿಜ, ಆದರೆ ಈ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಮೇಲೆ ತುಂಬಾ ಗೌರವವಿದೆ. ಕೆಲವು ಸಂದರ್ಭದಲ್ಲಿ ನಮಗೆ ದೊರೆತಿರುವ ಅವಕಾಶಗಳಿಗೆ ಕೃತಜ್ಞತೆ ಸಲ್ಲಿಸಲು ಸಮಯ ತೆಗೆದುಕೊಳ್ಳುವುದು ಬಹಳ ಮುಖ್ಯ ಎಂದು ಬರೆದು ಕೊಂಡಿದ್ದಾರೆ 

ಭಾರತದ ಸರಣಿ ಮುಗಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ಆಸ್ಟ್ರೇಲಿಯಾ ತಂಡವು  ಪಾಕಿಸ್ತಾನದ ವಿರುದ್ಧ 5-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿತು.ಈ ಸರಣಿಯಲ್ಲಿ ಆರನ್ ಫಿಂಚ್ ಎರಡು ಭರ್ಜರಿ ಶತಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. 
 

Trending News