ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಟೆಸ್ಟ್ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬುಧವಾರ ಪ್ರಥಮ ಸ್ಥಾನ ಪಡೆದರು.
ಇತ್ತೀಚಿನ ಐಸಿಸಿ ಪುರುಷರ ಟೆಸ್ಟ್ ಶ್ರೇಯಾಂಕದ ಪ್ರಕಾರ, 928 ಅಂಕಗಳೊಂದಿಗೆ, ಕೊಹ್ಲಿ ಈಗ ನಂಬರ್ 1 ಟೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದರೆ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (923 ಅಂಕಗಳು) ನಂತರದ ಸ್ಥಾನದಲ್ಲಿದ್ದಾರೆ.
ಈಡನ್ ಗಾರ್ಡನ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಡೇ-ನೈಟ್ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊಹ್ಲಿ ಶತಕಗಳಿಸಿದ ಹಿನ್ನಲೆಯಲ್ಲಿ ಈಗ ಅವರ ರ್ಯಾಕಿಂಗ್ ನಲ್ಲಿ ಸುಧಾರಣೆ ಕಂಡುಬಂದಿದೆ. ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿ 4 ಟೆಸ್ಟ್ ಪಂದ್ಯಗಳಲ್ಲಿ 774 ರನ್ ಗಳಿಸುವ ಮೂಲಕ ಸ್ಟೀವ್ ಸ್ಮಿತ್ ವಿರಾಟ್ ಕೊಹ್ಲಿಯನ್ನು ಹಿಂದಕ್ಕಿದ್ದರು.
Virat Kohli back to No.1!
David Warner, Marnus Labuschagne and Joe Root make significant gains in the latest @MRFWorldwide ICC Test Rankings for batting.
Full rankings: https://t.co/AIR0KN4yY5 pic.twitter.com/AXBx6UIQkL
— ICC (@ICC) December 4, 2019
ನ್ಯೂಜಿಲ್ಯಾಂಡ್‌ನ ಕೆನ್ ವಿಲಿಯಮ್ಸನ್ 877 ಅಂಕಗಳೊಂದಿಗೆ ಶ್ರೇಯಾಂಕದಲ್ಲಿ ಸ್ಥಾನ ಪಡೆದಿದ್ದಾರೆ. 791 ಅಂಕಗಳನ್ನು ಹೊಂದಿರುವ ಭಾರತದ ಚೇತೆಶ್ವರ್ ಪೂಜಾರ ಅವರನ್ನು ಹಿಂಬಾಲಿಸಿದ್ದಾರೆ. ಐದನೇ ಮತ್ತು ಆರನೇ ಸ್ಥಾನಗಳಲ್ಲಿ - ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (764) ಮತ್ತು ಭಾರತದ ಅಜಿಂಕ್ಯ ರಹಾನೆ ಕ್ರಮವಾಗಿ (759) ಅಂಕಗಳನ್ನು ಪಡೆದಿದ್ದಾರೆ.
ಫಾರ್ಮ್ ಗಾಗಿ ಹೆಣಗಾಡುತ್ತಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್, ನ್ಯೂಜಿಲೆಂಡ್ ವಿರುದ್ಧದ ಹ್ಯಾಮಿಲ್ಟನ್ ಟೆಸ್ಟ್ ನಲ್ಲಿ ಐತಿಹಾಸಿಕ ಡಬಲ್ ಸೆಂಚುರಿ ನಂತರ ಅಗ್ರ 10 ಕ್ಕೆ ಮರಳಿದ್ದಾರೆ.