MS Dhoni ಅಲ್ಲ, ಈ ಆಟಗಾರ IPLನ ಅತ್ಯುತ್ತಮ ನಾಯಕ ಎಂದ ಸೆಹ್ವಾಗ್: ರೊಚ್ಚಿಗೆದ್ದ ಭಜ್ಜಿ ಹೇಳಿದ್ದು ಹೀಗೆ!

Virender Sehwag on Best Captain of IPL: ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು, ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ನ ಅತ್ಯುತ್ತಮ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್‌ನ ಎಂಎಸ್ ಧೋನಿಗಿಂತ ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ಅವರಿಗೆ ಆದ್ಯತೆ ನೀಡಿದ್ದಾರೆ.

Written by - Bhavishya Shetty | Last Updated : Feb 17, 2023, 10:17 PM IST
    • ಭಾರತದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಧೋನಿ ಬಗ್ಗೆ ಹೇಳಿಕೆ ನೀಡಿದ್ದಾರೆ
    • ಧೋನಿ ಐಪಿಎಲ್‌ನ ಅತ್ಯುತ್ತಮ ನಾಯಕನಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ
    • ಆದರೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಧೋನಿ ಐಪಿಎಲ್‌ನ ಅತ್ಯುತ್ತಮ ನಾಯಕ ಎಂದು ಬಣ್ಣಿಸಿದ್ದಾರೆ
MS Dhoni ಅಲ್ಲ, ಈ ಆಟಗಾರ IPLನ ಅತ್ಯುತ್ತಮ ನಾಯಕ ಎಂದ ಸೆಹ್ವಾಗ್: ರೊಚ್ಚಿಗೆದ್ದ ಭಜ್ಜಿ ಹೇಳಿದ್ದು ಹೀಗೆ!  title=
Virender Sehwag on Best Captain of IPL

Virender Sehwag on Best Captain of IPL: ಮಹೇಂದ್ರ ಸಿಂಗ್ ಧೋನಿ ವಿಶ್ವದ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿದ್ದಾರೆ. ಅವರ ನಾಯಕತ್ವದಲ್ಲಿ, ಅವರು ಭಾರತಕ್ಕೆ ಸಂಭ್ರಮಿಸಲು ಒಂದಲ್ಲ ಹಲವು ಅವಕಾಶಗಳನ್ನು ನೀಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಟೀಂ ಇಂಡಿಯಾ ಧೋನಿ ನಾಯಕತ್ವದಲ್ಲಿ 2007ರಲ್ಲಿ ಟಿ20 ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಈ ನಡುವೆ ಭಾರತದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಬಗ್ಗೆ ಹೇಳಿಕೆ ನೀಡಿದ್ದಾರೆ. ಧೋನಿ ಐಪಿಎಲ್‌ನ ಅತ್ಯುತ್ತಮ ನಾಯಕನಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ. 

ಇದನ್ನೂ ಓದಿ:Video: ಅಂದು ಆಟದಿಂದ ಕೈಬಿಡಿ ಅಂತಿದ್ದ ಆಟಗಾರನಿಂದಲೇ… ಇಂದು ಟೆಸ್ಟ್ ಪಂದ್ಯಕ್ಕೆ ಸಿಕ್ತು ಬಿಗ್ ಟ್ವಿಸ್ಟ್!

ಸೆಹ್ವಾಗ್‌ಗೆ ಧೋನಿ ಉತ್ತಮ ನಾಯಕನಲ್ಲ?

ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು, ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ನ ಅತ್ಯುತ್ತಮ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್‌ನ ಎಂಎಸ್ ಧೋನಿಗಿಂತ ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ಅವರಿಗೆ ಆದ್ಯತೆ ನೀಡಿದ್ದಾರೆ. ಕಳೆದ 15 ವರ್ಷಗಳಲ್ಲಿ ಮುಂಬೈ ಫ್ರಾಂಚೈಸಿ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ ಎಂದು ಸೆಹ್ವಾಗ್ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದುವರೆಗೆ ನಾಲ್ಕು ಐಪಿಎಲ್ ಟ್ರೋಫಿಗಳನ್ನು ಗೆದ್ದುಕೊಂಡಿದೆ. ಮುಂಬೈ ಲೀಗ್‌ನ ಅತ್ಯಂತ ಯಶಸ್ವಿ ತಂಡವೂ ಆಗಿದೆ. ಐಪಿಎಲ್‌ನ 15 ವರ್ಷಗಳ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸೆಹ್ವಾಗ್ ಈ ಬಗ್ಗೆ ಮಾತನಾಡಿದ್ದಾರೆ.  

ಕಾರ್ಯಕ್ರಮದ ವೇಳೆ ಸೆಹ್ವಾಗ್, 'ಸಂಖ್ಯೆಗಳು ಎಲ್ಲವನ್ನೂ ಹೇಳುತ್ತವೆ. ಎಂಎಸ್ ಧೋನಿ ಭಾರತ ತಂಡದ ನಾಯಕತ್ವದ ಅನುಭವವನ್ನು ಹೊಂದಿದ್ದರು. ನಂತರ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾದರು. ರೋಹಿತ್ ಶರ್ಮಾ ಅವರ ಮೊದಲ ನಾಯಕತ್ವದ ಅನುಭವ ಮುಂಬೈ ಇಂಡಿಯನ್ಸ್‌ನೊಂದಿಗೆ ಮತ್ತು ಅಲ್ಲಿಂದ ಅವರ ಯಶಸ್ಸಿನ ಪ್ರಯಾಣ ಪ್ರಾರಂಭವಾಯಿತು. ಆದ್ದರಿಂದ ಅವರು (ರೋಹಿತ್) ಹೆಚ್ಚಿನ ಗೌರವಕ್ಕೆ ಅರ್ಹರು. ಇದು ಸೌರವ್ ಗಂಗೂಲಿಯಂತೆ, ಅವರು ಭಾರತ ತಂಡದ ನಾಯಕರಾದರು. ಹೊಸ ಮತ್ತು ವಿಭಿನ್ನ ವಿಷಯಗಳನ್ನು ಪ್ರಯತ್ನಿಸಿದರು. ಅವರ ನಾಯಕತ್ವದಲ್ಲಿ ಭಾರತವು ನಂಬರ್-1 ODI ತಂಡವಾಯಿತು. ಹಾಗಾಗಿ ನನ್ನ ಆಯ್ಕೆ ರೋಹಿತ್ ಶರ್ಮಾ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Mohammad Shami: ಟೆಸ್ಟ್ ಪಂದ್ಯದಲ್ಲಿ ಶಮಿ ಎಸೆದ ‘ಮ್ಯಾಜಿಕ್ ಬೌಲ್’ಗೆ ಕ್ಲೀನ್ ಬೌಲ್ಡ್ ಆದ ಡೇವಿಡ್ ವಾರ್ನರ್! ವಿಡಿಯೋ ನೋಡಿ

ಹರ್ಭಜನ್ ವಿಭಿನ್ನ ಅಭಿಪ್ರಾಯ:

ಆದರೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಧೋನಿ ಐಪಿಎಲ್‌ನ ಅತ್ಯುತ್ತಮ ನಾಯಕ ಎಂದು ಬಣ್ಣಿಸಿದ್ದಾರೆ. ಹರ್ಭಜನ್ ಮಾತನಾಡಿ, 'ನಾನು ನನ್ನ ಮತವನ್ನು ಧೋನಿಗೆ ನೀಡುತ್ತೇನೆ. ಏಕೆಂದರೆ ಅವರು ಮೊದಲ ವರ್ಷದಿಂದ ಅದೇ ಫ್ರಾಂಚೈಸಿಗಾಗಿ ಆಡಿದವರು. ಫ್ರಾಂಚೈಸಿಯನ್ನು ಯಶಸ್ವಿಗೊಳಿಸುವಲ್ಲಿ ಅವರು ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಭಾರತ ತಂಡದ ನಾಯಕತ್ವದ ಜವಾಬ್ದಾರಿಯನ್ನು ಅವರು ವಹಿಸಿಕೊಂಡ ರೀತಿ ಅದ್ಭುತವಾಗಿದೆ. ಇತರ ನಾಯಕರು ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಪಂದ್ಯಾವಳಿಗಳನ್ನು ಗೆದ್ದಿದ್ದಾರೆ. ಆದರೆ ಒಟ್ಟಾರೆ ನನ್ನ ಮತ ಧೋನಿಗೆ ಹೋಗುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ಎರಡೂ ತಂಡಗಳಲ್ಲಿ ಆಡಿದ್ದೇನೆ. ನನ್ನ ಹೃದಯ ಇನ್ನೂ ಮುಂಬೈ ಇಂಡಿಯನ್ಸ್‌ಗಾಗಿ ಮಿಡಿಯುತ್ತಿದೆ. ಏಕೆಂದರೆ ನಾನು 10 ವರ್ಷಗಳ ಕಾಲ ಆಡಿದ್ದೇನೆ. ಆದರೆ ನಾನು ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಕಳೆದ ಎರಡು ವರ್ಷಗಳಿಂದ ನಾನು ಬಹಳಷ್ಟು ಕಲಿತಿದ್ದೇನೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News