Kieron Pollard:ವೆಸ್ಟ್ ಇಂಡೀಸ್ ದಿಗ್ಗಜ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ವೆಸ್ಟ್ ಇಂಡೀಸ್‌ನ ದಿಗ್ಗಜ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 34 ವರ್ಷದ ಪೊಲಾರ್ಡ್ ತಮ್ಮ ಸುದೀರ್ಘ ವಿಂಡೀಸ್ ಕ್ರಿಕೆಟ್​ ಜೀವನಕ್ಕೆ ಗುಡ್​ ಬೈ ಹೇಳಿದ್ದಾರೆ.  

Written by - Chetana Devarmani | Last Updated : Apr 21, 2022, 12:01 PM IST
  • ವೆಸ್ಟ್ ಇಂಡೀಸ್ ದಿಗ್ಗಜ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ
  • ಸುದೀರ್ಘ ವಿಂಡೀಸ್ ಕ್ರಿಕೆಟ್​ ಜೀವನಕ್ಕೆ ಗುಡ್​ ಬೈ ಹೇಳಿದ ಪೊಲಾರ್ಡ್‌
  • ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಟಗಾರ ಕೀರನ್ ಪೊಲಾರ್ಡ್
Kieron Pollard:ವೆಸ್ಟ್ ಇಂಡೀಸ್ ದಿಗ್ಗಜ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ  title=
ಕೀರಾನ್ ಪೊಲಾರ್ಡ್

ವೆಸ್ಟ್ ಇಂಡೀಸ್‌ನ ದಿಗ್ಗಜ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 34 ವರ್ಷದ ಪೊಲಾರ್ಡ್ ತಮ್ಮ ಸುದೀರ್ಘ ವಿಂಡೀಸ್ ಕ್ರಿಕೆಟ್​ ಜೀವನಕ್ಕೆ ಗುಡ್​ ಬೈ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಟಗಾರ ಕೀರನ್ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಪೊಲಾರ್ಡ್ ನಿನ್ನೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಆದರೆ ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡದ ನಾಯಕನೇ ವಿದಾಯ ಹೇಳಿದ್ದಾರೆ. ಇದಾಗ್ಯೂ ಫ್ರಾಂಚೈಸಿ ಲೀಗ್ ಕ್ರಿಕೆಟ್​ನಲ್ಲಿ ಪೊಲಾರ್ಡ್ ಮುಂದುವರೆಯಲಿದ್ದಾರೆ. 

ಇದನ್ನೂ ಓದಿ: DC vs PBKS, IPL 2022: ದೆಹಲಿ ಕ್ಯಾಪಿಟಲ್ಸ್ ಗೆ ಸುಲಭ ತುತ್ತಾದ ಪಂಜಾಬ್ ಕಿಂಗ್ಸ್

ಪೊಲಾರ್ಡ್ ಕಳೆದ 15 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡದ ಭಾಗವಾದ್ದಾರೆ.​ 2019 ರಿಂದ ವೆಸ್ಟ್ ಇಂಡೀಸ್ ODI ಮತ್ತು T20I ನಾಯಕರಾಗಿದ್ದರು. ಅಲ್ಲದೆ ಕಳೆದ ವರ್ಷ T20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದರು. 

ಪೊಲಾರ್ಡ್ ವೆಸ್ಟ್ ಇಂಡೀಸ್ ಪರ 123 ODI ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 2706 ರನ್ ಕಲೆ ಹಾಕಿದ್ದು, 55 ವಿಕೆಟ್​ಗಳನ್ನು ಪಡೆದಿದ್ದಾರೆ. 101 ಟಿ20 ಪಂದ್ಯಗಳಲ್ಲಿ ಆಡೊರುವ 135.14 ಸ್ಟ್ರೈಕ್ ರೇಟ್‌ನಲ್ಲಿ 1568 ರನ್ ಗಳಿಸಿದ್ದಾರೆ. 

2012 ರಲ್ಲಿ T20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದ ಕೀರನ್ ಪೊಲಾರ್ಡ್, 2016 ರಲ್ಲಿ ವಿಂಡೀಸ್ ತಂಡವು 2 ನೇ ಪ್ರಶಸ್ತಿಯನ್ನು ಗೆಲ್ಲುವ ಮೊದಲು ಗಾಯದ ಕಾರಣದಿಂದ ಹಿಂದೆ ಸರಿದಿದ್ದರು. ಕೊನೆಯ ಬಾರಿಗೆ ಪೊಲಾರ್ಡ್  ಫೆಬ್ರವರಿ 2022 ರಲ್ಲಿ ಭಾರತದ ವಿರುದ್ಧ ODI ಮತ್ತು T20I ಸರಣಿಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿದ್ದರು. ಆದರೆ ಈಗ ಮತ್ತೊಂದು ಟಿ20 ವಿಶ್ವಕಪ್ ಮುಂದಿರುವಾಗಲೇ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ: ವಿರಾಟ್‌ ದಾಖಲೆ ಮುರಿದ ಕನ್ನಡಿಗ ಕೆ.ಎಲ್‌ ರಾಹುಲ್‌

ಇದುವರೆಗೆ ಟಿ20 ಕ್ರಿಕೆಟ್​ನಲ್ಲಿ 587 ಪಂದ್ಯಗಳನ್ನು ಆಡಿರುವ ಪೊಲಾರ್ಡ್​ 11,509 ಪಂದ್ಯಗಳೊಂದಿಗೆ T20 ಕ್ರಿಕೆಟ್‌ನಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News