ನವದೆಹಲಿ: ವೆಸ್ಟ್ ಇಂಡೀಸ್‌ನ ಸೂಪರ್‌ಸ್ಟಾರ್ ಕ್ರಿಕೆಟಿಗ ಕೀರನ್ ಪೊಲಾರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
West Indies win a thriller at Antigua! 👌
A destructive 38 off 11 balls from captain @KieronPollard55 inspires @windiescricket to a four-wicket win.
The hosts go 1-0 up in the three-match T20I series.#WIvSL | https://t.co/9dDhj3c1JC pic.twitter.com/LiuiPkxSk7
— ICC (@ICC) March 4, 2021
ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ಗುರುವಾರ ನಡೆದ ಮೊದಲ ಟಿ 20 ಯಲ್ಲಿ 6 ನೇ ಓವರ್‌ನಲ್ಲಿ ಶ್ರೀಲಂಕಾದ ಅಕಿಲಾ ದಾನಂಜಯ ಅವರ ಎಸೆತದಲ್ಲಿ ಸತತ ಆರು ಸಿಕ್ಸರ್ ಗಳನ್ನು ಬಾರಿಸಿದರು.ಈಗ ಸಾಧನೆ ಮಾಡುವ ಮೂಲಕ ಭಾರತದ ಯುವರಾಜ್ ಸಿಂಗ್ ಸಾಲಿಗೆ ಸೇರ್ಪಡೆಯಾದರು.ಅಂತರರಾಷ್ಟ್ರೀಯ ಮಟ್ಟದಲ್ಲಿ, ದಕ್ಷಿಣ ಆಫ್ರಿಕಾದ ಮಾಜಿ ಓಪನರ್ ಹರ್ಷಲ್ ಗಿಬ್ಸ್ ಅವರು 2007 ರ ವಿಶ್ವಕಪ್ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆಯನ್ನು ಮಾಡಿದ್ದರು.
ಇದನ್ನೂ ಓದಿ: IPL 2020 KXIP vs MI: ತಮ್ಮ ಅತ್ಯಂತ ರೋಚಕ ಬ್ಯಾಟಿಂಗ್ ರಹಸ್ಯ ಬಿಚ್ಚಿಟ್ಟ ಕಿರೋನ್ ಪೊಲಾರ್ಡ್
Absolute scenes 🤯@KieronPollard55 becomes the first @windiescricket player to hit six straight sixes in a T20I!#WIvSL pic.twitter.com/nrtmJHGcip
— ICC (@ICC) March 4, 2021
2007 ರಲ್ಲಿ ನಡೆದ ಟಿ 20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ವಿರುದ್ಧ ಟಿ 20 ಐ ಕ್ರಿಕೆಟ್‌ನಲ್ಲಿ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಯುವರಾಜ್ ಸಿಂಗ್ ಪಾತ್ರರಾಗಿದ್ದರು.
ಶ್ರೀಲಂಕಾ ನೀಡಿದ 131 ರನ್ ಗಳ ಗೆಲುವಿನ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಆರು ವಿಕೆಟ್ ಗಳ ನಷ್ಟಕ್ಕೆ 134 ರನ್ ಗಳನ್ನು ಗಳಿಸುವ ಮೂಲಕ ಗೆಲುವನ್ನು ಸಾಧಿಸಿತು.ಕಿರನ್ ಪೋಲ್ಲಾರಡ್ (Kieron Pollard) ಕೇವಲ 11 ಎಸೆತಗಳಲ್ಲಿ ಆರು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ತಂಡವು ಬೇಗನೆ ಗೆಲುವಿನ ದಡ ಸೇರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.