ಇದುವರೆಗೆ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಸೋಲಲು ಕಾರಣವೇನು ಗೊತ್ತೇ?

2022ರ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಈಗಾಗಲೇ ಆರಂಭವಾಗಿದೆ. ಗ್ರೂಪ್ ಹಂತದಲ್ಲಿಯೇ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿರುವುದರಿಂದ ಪಂದ್ಯದ ಉತ್ಸಾಹ ಕ್ರಮೇಣ ಕಾವು ಪಡೆದುಕೊಳ್ಳುತ್ತಿದೆ.

Written by - Zee Kannada News Desk | Last Updated : Aug 28, 2022, 03:50 PM IST
  • ಈ ಎಲ್ಲಾ ಪಂದ್ಯಗಳಲ್ಲೂ ಪಾಕ್ ತಂಡವು ಭಾರತದ ವಿರುದ್ಧ ಸೋಲನ್ನು ಅನುಭವಿಸಿದೆ.
ಇದುವರೆಗೆ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಸೋಲಲು ಕಾರಣವೇನು ಗೊತ್ತೇ? title=

ನವದೆಹಲಿ: 2022ರ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಈಗಾಗಲೇ ಆರಂಭವಾಗಿದೆ. ಗ್ರೂಪ್ ಹಂತದಲ್ಲಿಯೇ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿರುವುದರಿಂದ ಪಂದ್ಯದ ಉತ್ಸಾಹ ಕ್ರಮೇಣ ಕಾವು ಪಡೆದುಕೊಳ್ಳುತ್ತಿದೆ.

2021 ರ ಟಿ 20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪಾಕ್ ತಂಡವು ಭಾರತದ ವಿರುದ್ಧ ಗೆಲುವನ್ನು ಸಾಧಿಸಿತು.ಇದಕ್ಕೂ ಮೊದಲು ಎರಡು ತಂಡಗಳು ವಿಶ್ವಕಪ್‌ಗಳಲ್ಲಿ (ODI ಮತ್ತು T20I ಎರಡೂ) ಒಟ್ಟು 12 ಬಾರಿ ಎದುರಾಗಿವೆ, ಈ ಎಲ್ಲಾ ಪಂದ್ಯಗಳಲ್ಲೂ ಪಾಕ್ ತಂಡವು ಭಾರತದ ವಿರುದ್ಧ ಸೋಲನ್ನು ಅನುಭವಿಸಿದೆ.

ಇದನ್ನೂ ಓದಿ: ಲಾರಿಗೆ ಅಡ್ಡ ಹಾಕಿ ಹಣಕ್ಕೆ ಬೇಡಿಕೆ: ನಾಲ್ವರು ಬ್ಲ್ಯಾಕ್ ಮೇಲ್ ಪತ್ರಕರ್ತರು ಅರೆಸ್ಟ್..!

ಈಗ ಈ ವಿಚಾರವಾಗಿ ಮಾತನಾಡಿದ ಪಾಕಿಸ್ತಾನಿ ಕ್ರಿಕೆಟಿಗ ಸೊಹೈಬ್ ಮಕ್ಸೂದ್ ಮೆನ್ ಇನ್ ಗ್ರೀನ್‌ನ ಇಂತಹ ಕಳಪೆ ದಾಖಲೆಗೆ ಕಾರಣ ಪಾಕ್ ತಂಡದಲ್ಲಿದ್ದಂತಹ ಅತಿಯಾದ ಉತ್ಸಾಹ ಎಂದು ಹೇಳಿದರು.

"ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಪಾಕ್ ನ ಸತತ ಸೋಲಿಗೆ ಕಾರಣ ತಂಡವು ಅತಿಯಾಗಿ ಉತ್ಸುಕರಾಗಿರುವುದು.ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ನಮ್ಮ ತಂಡವು ಇಂಡೋ-ಪಾಕ್ ಪಂದ್ಯಗಳನ್ನು ಸಾಮಾನ್ಯವಾಗಿ ಪರಿಗಣಿಸಲು ಪ್ರಾರಂಭಿಸಿದೆ ಮತ್ತು ಇದರಿಂದಾಗಿ ನಮ್ಮ ಪ್ರದರ್ಶನ ಸುಧಾರಿಸಿದೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News