ಅಂತಿಮ ಇನ್ನಿಂಗ್ಸ್’ಗೂ ಮುನ್ನ ಏನು ಯೋಚಿಸ್ತಾ ಇದ್ರಿ?- ಹೀಗೆಂದು ಪ್ರಶ್ನಿಸಿದ ಪ್ರಧಾನಿ ಮೋದಿಗೆ ವಿರಾಟ್ ಕೊಟ್ಟ ಉತ್ತರ ಇದು…

PM Modi And T20 World Cup Champion: ಸಂವಾದದ ವೇಳೆ ಪ್ರಧಾನಿ ಮೋದಿಯವರು ಆಟಗಾರರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಸಮಯದಲ್ಲಿ, ವಿರಾಟ್ ಕೊಹ್ಲಿ ಅವರ ಅಂತಿಮ ಇನ್ನಿಂಗ್ಸ್‌’ಗಾಗಿ ಪ್ರಧಾನಿ ಅಭಿನಂದಿಸಿದ್ದು, ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

Written by - Bhavishya Shetty | Last Updated : Jul 5, 2024, 06:09 PM IST
    • ದೆಹಲಿಗೆ ತಲುಪುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಟೀಂ ಇಂಡಿಯಾ
    • ಸಂವಾದದ ವೇಳೆ ಪ್ರಧಾನಿ ಮೋದಿಯವರು ಆಟಗಾರರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ
    • ಅಂತಿಮ ಇನ್ನಿಂಗ್ಸ್ ಕುರಿತು ವಿರಾಟ್ ಅವರೊಂದಿಗೆ ಮಾತನಾಡಿದ ಪ್ರಧಾನಿ
ಅಂತಿಮ ಇನ್ನಿಂಗ್ಸ್’ಗೂ ಮುನ್ನ ಏನು ಯೋಚಿಸ್ತಾ ಇದ್ರಿ?- ಹೀಗೆಂದು ಪ್ರಶ್ನಿಸಿದ ಪ್ರಧಾನಿ ಮೋದಿಗೆ ವಿರಾಟ್ ಕೊಟ್ಟ ಉತ್ತರ ಇದು… title=
Modi talk with Virat Kohli

PM Modi And T20 World Cup Champion: ವಿಶ್ವ ಚಾಂಪಿಯನ್ ಟೀಂ ಇಂಡಿಯಾ ದೆಹಲಿಗೆ ತಲುಪುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಐತಿಹಾಸಿಕ ವಿಜಯದ ಬಗ್ಗೆ ಸುದೀರ್ಘ ಚರ್ಚೆಯನ್ನು ನಡೆಸಿದರು. ಇದೀಗ ಅದರ ವಿಡಿಯೋ ಮತ್ತು ಆಡಿಯೋ ಕೂಡ ಹೊರಬಿದ್ದಿದೆ.

ಇದನ್ನೂ ಓದಿ: 3000 ಕೋಟಿ ಆಸ್ತಿ, ಒಂದು ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆಯುವ ಸ್ಟಾರ್! ಆದ್ರೆ ಈಗ್ಲೂ ತಂದೆಗೆ ಮುಖ ಕೊಟ್ಟು ಮಾತಾಡಲ್ವಂತೆ ಈ ನಟ

ಸಂವಾದದ ವೇಳೆ ಪ್ರಧಾನಿ ಮೋದಿಯವರು ಆಟಗಾರರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಸಮಯದಲ್ಲಿ, ವಿರಾಟ್ ಕೊಹ್ಲಿ ಅವರ ಅಂತಿಮ ಇನ್ನಿಂಗ್ಸ್‌’ಗಾಗಿ ಪ್ರಧಾನಿ ಅಭಿನಂದಿಸಿದ್ದು, ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಈ ಸಮಯದಲ್ಲಿ, ಅಂತಿಮ ಇನ್ನಿಂಗ್ಸ್ ಕುರಿತು ವಿರಾಟ್ ಅವರೊಂದಿಗೆ ಮಾತನಾಡಿದ ಅವರು, ಇಡೀ ವಿಶ್ವಕಪ್‌’ನಲ್ಲಿ ನನ್ನ ಫಾರ್ಮ್ ಉತ್ತಮವಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. “ಹೀಗಾಗಿ ಕೋಚ್‌ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಜೊತೆ ಮಾತುಕತೆ ನಡೆಸಿದೆ. ಇಬ್ಬರೂ ವಿಶ್ವಾಸ ತುಂಬಿದರು. ನಂತರ ಕುಟುಂಬದವರೊಂದಿಗೆ ಮಾತನಾಡಿದೆ. ಇದಾದ ಬಳಿಕ ಫೈನಲ್ ಆಡಲು ಬಂದಾಗ ಅದ್ಭುತವೇ ಸೃಷ್ಟಿಯಾಯಿತು” ಎಂದರು.

ಇದನ್ನೂ ಓದಿ: ಇದು ಮನೆಯೋ… ಅರಮನೆಯೋ! ರೋಹಿತ್ ಶರ್ಮಾ ವಾಸಿಸುವ 30 ಕೋಟಿ ಮೌಲ್ಯದ ಭವ್ಯ ಬಂಗಲೆ ಹೇಗಿದೆ ಗೊತ್ತಾ?

2024ರ ಟಿ20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡ ಗುರುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದೆ. ಈ ವೇಳೆ ಆಟಗಾರರಲ್ಲದೆ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜೈ ಶಾ ಮತ್ತು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಉಪಸ್ಥಿತರಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News