ಅಹಮದಾಬಾದ್: ಗುಜರಾತ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ವಿಶ್ವಕಪ್-2023 ರ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಅಜೇಯ ಭಾರತ ಮತ್ತು ಆಸ್ಟ್ರೇಲಿಯ ತಂಡಗಳು ಮುಖಾಮುಖಿಯಗಲಿವೆ. ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ಫೈನಲ್ ಗೆ ಲಗ್ಗೆ ಇಟ್ಟಿದೆ, ಇನ್ನೊಂದೆಡೆ ಆಸ್ಟ್ರೇಲಿಯಾ ಸೆಮಿಸ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸದೆಬಡೆದು ಫೈನಲ್ ತಲುಪಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 20 ವರ್ಷಗಳ ಬಳಿಕ ವಿಶ್ವಕಪ್ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ. 2003ರಲ್ಲಿ ಎರಡೂ ತಂಡಗಳು ಮುಖಾಮುಖಿಯಾದಾಗ ಆಸ್ಟ್ರೇಲಿಯಾ ಪ್ರಶಸ್ತಿ ಗೆದ್ದುಕೊಂಡಿತ್ತು. 20 ವರ್ಷಗಳ ಹಿಂದೆ ಅನುಭವಿಸಿದ್ದ ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಹುಲಿಗಳು ಹವಣಿಸುತ್ತಿದ್ದಾರೆ. (World Cup Final 2023 News In Kannada)
ಈ ಪಂದ್ಯವನ್ನು ಗೆದ್ದರೆ ಟೀಂ ಇಂಡಿಯಾ ಮೂರನೇ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದಂತಾಗಲಿದೆ. ಇದಕ್ಕೂ ತಂಡ 1983 ಮತ್ತು 2011 ರಲ್ಲಿ ಚಾಂಪಿಯನ್ ಆಗಿತ್ತು. ಟೀಂ ಇಂಡಿಯಾ ಕಿವೀಸ್ ತಂಡವನ್ನು ಸೋಲಿಸಿ ವಿಶ್ವಕಪ್ನಿಂದ ಹೊರಕ್ಕೆ ತಳ್ಳಿದೆ, ಆದರೆ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ತಂಡದ ಮಾಜಿ ದಿಗ್ಗಜ ಆಟಗಾರನನ್ನು ಸೋಲಿಸಬೇಕಿದೆ. ಪ್ರಸ್ತುತ ಆತ ಆಸ್ಟ್ರೇಲಿಯ ತಂಡದ ಪ್ರಮುಖ ಭಾಗವಾಗಿದ್ದಾರೆ ಮತ್ತು ಅವರೇ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದಾರೆ.
ನಾವು ಮಾತನಾಡುತ್ತಿರುವುದು ನ್ಯೂಜಿಲೆಂಡ್ದ ಮಾಜಿ ಆಲ್ರೌಂಡರ್ ಡೇನಿಯಲ್ ವೆಟ್ಟೋರಿ ಬಗ್ಗೆ . ಹೌದು ವೆಟ್ಟೋರಿ ಅವರು ಮೇ 2022 ರಲ್ಲಿ ಕೋಚ್ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ವೆಟ್ಟೋರಿ ತನ್ನ ಕಾಲದ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದಾರೆ. ಅವರು 17 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಅವರು ನ್ಯೂಜಿಲೆಂಡ್ ಪರ ಟೆಸ್ಟ್ನಲ್ಲಿ 362, ಏಕದಿನ ಪಂದ್ಯಗಳಲ್ಲಿ 305 ಮತ್ತು T20I ಗಳಲ್ಲಿ 38 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದೇ ವೇಳೆ ಅವರು ಟೆಸ್ಟ್ನಲ್ಲಿ 4531 ರನ್, ಏಕದಿನದಲ್ಲಿ 2253 ರನ್ ಮತ್ತು ಟಿ20ಯಲ್ಲಿ 205 ರನ್ ಗಳಿಸಿದ್ದಾರೆ.
ವೆಟ್ಟೋರಿ 18ನೇ ವಯಸ್ಸಿನಲ್ಲಿ ಕಿವೀ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 2007 ರಲ್ಲಿ ಅವರು ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ ಕಿವೀಸ್ ತಂಡ 2009 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿತ್ತು. ಇದಲ್ಲದೆ, ಅವರು 2007 ರ T20 ವಿಶ್ವ ಸೆಮಿ-ಫೈನಲ್ ಮತ್ತು 2011 ರ ವಿಶ್ವಕಪ್ ಸೆಮಿ-ಫೈನಲ್ ಅನ್ನು ಸಹ ಆಡಿದ್ದರು.
ಇದನ್ನೂ ಓದಿ-World Cup 2023 Final: ಭಾರತದ ಈ ಕ್ರಿಕೆಟ್ ದಿಗ್ಗಜನ ಮಾತು ರೋಹಿತ್ ಪಡೆ ಕೇಳಿದರೆ ಗೆಲುವು ಪಕ್ಕಾ ನಮ್ದೆ!
2015 ರ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು. ಆಸ್ಟ್ರೇಲಿಯಾಕ್ಕೂ ಮುನ್ನ ಬಾಂಗ್ಲಾದೇಶ ತಂಡದ ಕೋಚ್ ಆಗಿದ್ದರು. ವೆಟ್ಟೋರಿಯ ದೇಶ ನ್ಯೂಜಿಲೆಂಡ್ ಈ ವಿಶ್ವಕಪ್ನಲ್ಲಿ ಯಾವುದೇ ಅದ್ಭುತ ಸಾಧನೆ ಮಾಡಿಲ್ಲ ಮತ್ತು ಸೆಮಿಫೈನಲ್ನಲ್ಲಿ ಸೋತು ಹೊರಬಿದ್ದಿದೆ. ಕಿವೀಸ್ ತಂಡ ಲೀಗ್ ಹಂತದಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. ಅದು ಅಂಕಪಟ್ಟಿಯಲ್ಲಿ ನಂಬರ್ ಒನ್ ಆಗಿದ್ದ ಭಾರತೀಯ ತಂಡವನ್ನು ಎದುರಿಸಿತ್ತು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.