Wrestlers Protest: ಕೆಲವು ದಿನಗಳ ಹಿಂದೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳಲ್ಲಿ ಒಬ್ಬರಾದ ವಿನೇಶ್ ಫೋಗಟ್ ಅವರು ಇಂದು ಸುದ್ದಿ ಸಂಸ್ಥೆಯೊಂದರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಮೇಲೆ ಆರೋಪ ಮಾಡಿರುವ ವಿನೇಶ್, ಆನ್-ರೆಕಾರ್ಡ್ ಸಂದರ್ಶನದಲ್ಲಿ ತಮ್ಮನ್ನು ಬಹಳ ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ವಿನೇಶ್ ಫೋಗಟ್ ಟ್ವೀಟ್ ಮಾಡಿದ್ದು, ತಮ್ಮ ವಿಚಾರವನ್ನು ಇಟ್ಟುಕೊಂಡು ಆರೋಪ ಮಾಡಿದ್ದಾರೆ. ಇದಕ್ಕೂ ಮುನ್ನ ಅವರು ಮತ್ತೊಂದು ಟ್ವೀಟ್ ಮಾಡಿದ್ದು, ಇದರಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ರಾಜಕೀಯ ಅಧಿಕಾರ ಮತ್ತು ಸುಳ್ಳು ನಿರೂಪಣೆಗಳ ಮೂಲಕ ಮಹಿಳಾ ಕುಸ್ತಿಪಟುಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಅವರ ಬಂಧನ ಅನಿವಾರ್ಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ-Wrestlers Protest: 'ಎಲ್ಲಾ ಪ್ರಕರಣಗಳು ಇತ್ಯರ್ಥವಾದ ಬಳಿಕವೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುವೆವು'
ವಿನೇಶ್ ಫೋಗಟ್ ಟ್ವೀಟ್‌ನಲ್ಲಿ ಹೇಳಿದ್ದೇನು?
ಈ ಕುರಿತು ರಾಯಿಟರ್ಸ್ ಮತ್ತು ಪತ್ರಕರ್ತರನ್ನು ಟ್ಯಾಗ್ ಮಾಡಿ ಬರೆದುಕೊಂಡಿರುವ ಕುಸ್ತಿಪಟು "ರಾಯಿಟರ್ಸ್ ಪತ್ರಕರ್ತ, ರೂಪಮ್ ಜೈನ್ ನನ್ನನ್ನು ಸಂದರ್ಶಿಸಿದ್ದಾರೆ ಮತ್ತು ತುಂಬಾ ತಪ್ಪು ಕಥೆಯನ್ನು ಪ್ರಕಟಿಸಿದ್ದಾರೆ. ಕಥೆಯ ಅನೇಕ ಸ್ಥಳಗಳಲ್ಲಿ ಅವಳು ನನ್ನನ್ನು ತಪ್ಪಾಗಿ ಉಲ್ಲೇಖಿಸಿದ್ದಾಳೆ ಎಂದು ನಾನು ವಾದಿಸಲು ಯತ್ನಿಸಿದಾಗ, ಇದು ಹಿಂದಿ ಪತ್ರಿಕೆಯಲ್ಲ, ನಾನು ಏನು ಬೇಕಾದರೂ ಬದಲಾಯಿಸುತ್ತೇನೆ ಎಂದು ಅವಳು ನನಗೆ ಬೆದರಿಕೆ ಹಾಕಿದ್ದಾಳೆ" ಎಂದು ಶನಿವಾರ ರಾತ್ರಿ 11.25ರ ಸುಮಾರಿಗೆ ವಿನೇಶ್ ಫೋಗಟ್ ತಮ್ಮ ಈ ಟ್ವೀಟ್ ಮಾಡಿದ್ದಾರೆ.
@Reuters journalist @rupamjn interviews me and publishes heavily misquoted story. When I try to argue that she has misquoted me on various occasions in the story, she threatens that “it’s not a Hindi newspaper that I will change whatever you want.”
Is this the standard of your…
— Vinesh Phogat (@Phogat_Vinesh) June 10, 2023
ಆದಾಗ್ಯೂ, ಅವರು ಹೆಚ್ಚು ಗಮನಹರಿಸಿದ, 'ತಪ್ಪಾಗಿ ಉಲ್ಲೇಖ' ಪದವನ್ನು ಎಲ್ಲಿಯೂ ನಮೂಡಿಸಲಾಗಿಲ್ಲ. ಇನ್ನೊಂದೆಡೆ ರಾಯಿಟರ್ಸ್ ಮತ್ತು ಅದರ ಪತ್ರಕರ್ತರಿಂದ ಸುದ್ದಿ ಬರೆಯುವವರೆಗೂ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.