WTC Final 2021: ಮೊದಲ ದಿನದ ಪಂದ್ಯ ಮಳೆಗೆ ಆಹುತಿ

ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿತು, ಸತತ ಮಳೆಯಿಂದಾಗಿ ಸೌತಾಂಪ್ಟನ್‌ನಲ್ಲಿ ಶುಕ್ರವಾರದ ಆರಂಭಿಕ ದಿನದಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಯಾವುದೇ ಆಟ ನಡೆಯದೆ ಮೊದಲ ದಿನದ ಆಟವು ರದ್ದುಗೊಂಡಿದೆ.

Last Updated : Jun 18, 2021, 09:08 PM IST
  • ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿತು,
  • ಸತತ ಮಳೆಯಿಂದಾಗಿ ಸೌತಾಂಪ್ಟನ್‌ನಲ್ಲಿ ಶುಕ್ರವಾರದ ಆರಂಭಿಕ ದಿನದಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಯಾವುದೇ ಆಟ ನಡೆಯದೆ ಮೊದಲ ದಿನದ ಆಟವು ರದ್ದುಗೊಂಡಿದೆ.
WTC Final 2021: ಮೊದಲ ದಿನದ ಪಂದ್ಯ ಮಳೆಗೆ ಆಹುತಿ title=
Photo Courtesy: Twitter

ನವದೆಹಲಿ: ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿತು, ಸತತ ಮಳೆಯಿಂದಾಗಿ ಸೌತಾಂಪ್ಟನ್‌ನಲ್ಲಿ ಶುಕ್ರವಾರದ ಆರಂಭಿಕ ದಿನದಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಯಾವುದೇ ಆಟ ನಡೆಯದೆ ಮೊದಲ ದಿನದ ಆಟವು ರದ್ದುಗೊಂಡಿದೆ.

ಟಾಸ್ ಸ್ಥಳೀಯ ಸಮಯದ ಬೆಳಿಗ್ಗೆ 10:00 ಗಂಟೆಗೆ ( ಭಾರತೀಯ ಕಾಲಮಾನ ಮಧ್ಯಾಹ್ನ 02:30) ನಡೆಯಬೇಕಿತ್ತು, ಪಂದ್ಯವು 30 ನಿಮಿಷಗಳ ನಂತರ ನಡೆಯುತ್ತಿದೆ, ಆದರೆ ರಾತ್ರಿಯಿಡೀ ಮತ್ತು ಮುಂಜಾನೆ ಭಾರೀ ಮಳೆಯಿಂದಾಗಿ ಹ್ಯಾಂಪ್‌ಶೈರ್ ಬೌಲ್‌ನಲ್ಲಿ ಪಿಚ್ ಮತ್ತು ಚೌಕವು ಸಂಪೂರ್ಣವಾಗಿ ಆವರಿಸಿತು .ಇದರಿಂದ ಅಂಪೈರ್‌ಗಳು ಮಧ್ಯಾಹ್ನ 2:48 ಕ್ಕೆ ( ಭಾರತೀಯ ಕಾಲಮಾನ 07:18 PM ) ಮೊದಲ ದಿನದ ಆಟವನ್ನು ರದ್ದುಗೊಳಿಸಿದರು.

ಇದನ್ನೂ ಓದಿ : Vaccination Fear In Village: ವ್ಯಾಕ್ಸಿನ್ ಭಯದಿಂದ ನದಿಗೆ ಹಾರಿದ ಗ್ರಾಮೀಣ ಜನ, ಲಸಿಕೆ ಹಾಕಿಸಿಕೊಂಡಿದ್ದು ಕೇವಲ 14 ಜನ ಮಾತ್ರ

ಸ್ಟ್ಯಾಂಡರ್ಡ್ ಟೆಸ್ಟ್ ಗರಿಷ್ಠ ಐದು ದಿನಗಳವರೆಗೆ ಇದ್ದರೂ, ಈ ಪಂದ್ಯವನ್ನು ಆರನೇ ದಿನಕ್ಕೆ ವಿಸ್ತರಿಸಬಹುದಾಗಿದೆ. ಈಗ ಈ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಗೆಲ್ಲುವ ತಂಡವು 1.6 ಮಿಲಿಯನ್ ಡಾಲರ್ ಮೊತ್ತದ ಪ್ರಶಸ್ತಿಯನ್ನು ಪಡೆಯಲಿದೆ, ಅದೇ ರೀತಿಯಾಗಿ ರನ್ನರ್ಸ್ ಅಪ್‌ಗೆ 800,000 ಡಾಲರ್ ಮೊತ್ತವನ್ನು ನೀಡಲಾಗುತ್ತದೆ.

ಆದಾಗ್ಯೂ ಒಂದು ಟೆಸ್ಟ್ ಪಂದ್ಯದಿಂದ ವಿಶ್ವದ ಅತ್ಯುತಮ ತಂಡವನ್ನು ನಿರ್ಧರಿಸಬಹುದೇ ಎಂದು ಕೊಹ್ಲಿ ಅವರನ್ನು ಕೇಳಿದಾಗ, ಇದನ್ನು ಅವರು ನಿರಾಕರಿಸುತ್ತಾ ತಮ್ಮ ಮಟ್ಟಿಗೆ ಇದು ಮತ್ತೊಂದು ಟೆಸ್ಟ್ ಪಂದ್ಯ ಎಂದು ಹೇಳಿದರು.

ಇದನ್ನೂ ಓದಿ: ಬೆಳ್ಳಿತೆರೆಗೆ ಬರಲಿದೆ ಭಾರತದ ಕ್ರಿಕೆಟ್ ಮಹಾಗೋಡೆ ದ್ರಾವಿಡ್ ಬಯೋಪಿಕ್..!

ಭಾರತವು ಗುರುವಾರ ತಮ್ಮ ತಂಡವನ್ನು ಹೆಸರಿಸಿದ್ದು, ವೇಗದ ಮೂವರು ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಮೊದಲ ಬಾರಿಗೆ ಒಂದೇ ಟೆಸ್ಟ್ ಇಲೆವೆನ್‌ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ-Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News