U19 T20 World Cup: 12 ಓವರ್, 25 ರನ್… ಟೀಂ ಆಲೌಟ್: ಟಿ20 ಕ್ರಿಕೆಟ್ ನಲ್ಲಿ ಹಿಂದೆಂದೂ ಸಂಭವಿಸಿಲ್ಲ ಇಂತಹ ಕಳಪೆ ಪ್ರದರ್ಶನ

England Women vs Zimbabwe Women U19: ಇಂಗ್ಲೆಂಡ್ ವಿರುದ್ಧ 200 ರನ್ ಚೇಸ್ ಮಾಡಿದ ಜಿಂಬಾಬ್ವೆ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ತಂಡದ ನಾಲ್ವರು ಆಟಗಾರರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು. ಅಡೆಲ್ ಜಿಮುನು ತಂಡದ ಪರ ಗರಿಷ್ಠ ಐದು ರನ್ ಗಳಿಸಿದರು. ಆರಂಭಿಕ ಆಟಗಾರ್ತಿ ನಟಾಲಿ 4 ರನ್ ಕೊಡುಗೆ ನೀಡಿದರು.

Written by - Bhavishya Shetty | Last Updated : Jan 16, 2023, 11:12 AM IST
    • ಇಂಗ್ಲೆಂಡ್ ವಿರುದ್ಧ 200 ರನ್ ಚೇಸ್ ಮಾಡಿದ ಜಿಂಬಾಬ್ವೆ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು
    • ತಂಡದ ನಾಲ್ವರು ಆಟಗಾರರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ
    • ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು
U19 T20 World Cup: 12 ಓವರ್, 25 ರನ್… ಟೀಂ ಆಲೌಟ್: ಟಿ20 ಕ್ರಿಕೆಟ್ ನಲ್ಲಿ ಹಿಂದೆಂದೂ ಸಂಭವಿಸಿಲ್ಲ ಇಂತಹ ಕಳಪೆ ಪ್ರದರ್ಶನ  title=
Women's Cricket U-19 World Cup

England Women vs Zimbabwe Women U19: ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ಮಹಿಳಾ ಕ್ರಿಕೆಟ್ ತಂಡದ ಅಂಡರ್-19 ವಿಶ್ವಕಪ್ ನಡೆಯುತ್ತಿದೆ. ಭಾನುವಾರ ಇಂಗ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಮಹಿಳಾ ಬೌಲರ್‌ಗಳು ಅದ್ಭುತ ಆಟ ಪ್ರದರ್ಶಿಸಿ ಜಿಂಬಾಬ್ವೆ ತಂಡವನ್ನು 12 ಓವರ್‌ಗಳಲ್ಲಿ ಕೇವಲ 25 ರನ್‌ಗಳಿಗೆ ಆಲೌಟ್ ಮಾಡಿದರು. ಜಿಂಬಾಬ್ವೆಯ ನಾಲ್ವರು ಮಹಿಳಾ ಆಟಗಾರ್ತಿಯರು ಶೂನ್ಯಕ್ಕೆ ಔಟಾಗಿದ್ದರು. ಒಬ್ಬ ಬ್ಯಾಟ್ಸ್‌ಮನ್ ಕೂಡ ಎರಡಂಕಿ ತಲುಪಲಿಲ್ಲ.

ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಸಿಕ್ಕೇ ಬಿಟ್ರು ಮತ್ತೊಬ್ಬ ಸೆಹ್ವಾಗ್: ಸಂತಸದಲ್ಲಿ ರೋಹಿತ್ ಪಡೆ

ಇಂಗ್ಲೆಂಡ್ ವಿರುದ್ಧ 200 ರನ್ ಚೇಸ್ ಮಾಡಿದ ಜಿಂಬಾಬ್ವೆ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ತಂಡದ ನಾಲ್ವರು ಆಟಗಾರರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು. ಅಡೆಲ್ ಜಿಮುನು ತಂಡದ ಪರ ಗರಿಷ್ಠ ಐದು ರನ್ ಗಳಿಸಿದರು. ಆರಂಭಿಕ ಆಟಗಾರ್ತಿ ನಟಾಲಿ 4 ರನ್ ಕೊಡುಗೆ ನೀಡಿದರು.

ಇಂಗ್ಲೆಂಡ್ ಪರ ಗ್ರೇಸ್ ಸರ್ವೆನ್ಸ್ 4 ಓವರ್ ಗಳಲ್ಲಿ 2 ರನ್ ನೀಡಿ 4 ವಿಕೆಟ್ ಕಬಳಿಸಿದರು. ಸೋಫಿಯಾ ಸ್ಮಾಲಿ ಮತ್ತು ಜೋಸಿ ಗ್ರೋವ್ಸ್ ತಲಾ ಎರಡು ವಿಕೆಟ್ ಪಡೆದರೆ, ಆಲಿ ಆಂಡರ್ಸನ್ ಒಂದು ವಿಕೆಟ್ ಉರುಳಿಸಿದ್ದಾರೆ.

ಇದನ್ನೂ ಓದಿ: IND vs SL: ಕೊಹ್ಲಿ ಭೇಟಿಯಾಗಲು ಮೈದಾನಕ್ಕೇ ಓಡೋಡಿ ಬಂದ ಅಭಿಮಾನಿ ಮಾಡಿದ್ದೇನು ಗೊತ್ತಾ?

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಜಿಂಬಾಬ್ವೆ ವನಿತೆಯರಿಗೆ ಗೆಲ್ಲಲು 200 ರನ್ ಗಳ ಗುರಿ ನೀಡಿತ್ತು. ನಾಯಕಿ ಗ್ರೇಸ್ ಮತ್ತು ಲಿಬರ್ಟಿ ಹೀಪ್ ತಂಡಕ್ಕೆ ಬಲಿಷ್ಠ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 60 ರನ್ ಜೊತೆಯಾಟವಾಡಿದ್ದಾರೆ. 25 ರನ್ ಗಳಿಸಿದ ನಂತರ ಹೀಪ್ ಔಟಾದರು. ಗ್ರೇಸ್ 45 ರನ್ ಗಳಿಸಿದರು. ನಿಮಾ ಹಾಲೆಂಡ್ 37 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು. ಈ ಆಟಗಾರರಿಂದಲೇ ಇಂಗ್ಲೆಂಡ್ ತಂಡ 199 ರನ್ ಗಳಿಸಲು ಸಾಧ್ಯವಾಯಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News