ಏಮ್ಸ್ ಆಸ್ಪತ್ರೆಯಲ್ಲಿ ಶನಿವಾರದಂದು ಆನಾರೋಗ್ಯದಿಂದ ಕೊನೆಯುಸಿರೆಳದ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅರುಣ್ ಜೈಟ್ಲಿ ಅಂತ್ಯಕ್ರಿಯೆ ಭಾನುವಾರದಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಮಾಜಿ ಹಣಕಾಸು ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಅರುಣ್ ಜೈಟ್ಲಿ ಶನಿವಾರದಂದು ಮೃತಪಟ್ಟಿರುವುದರಿಂದ ಸದ್ಯ ವಿದೇಶದಲ್ಲಿರುವ ಪ್ರಧಾನಿ ಮೋದಿಗೆ ಪ್ರವಾಸವನ್ನು ರದ್ದುಗೊಳಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅರುಣ್ ಜೈಟ್ಲಿಯವರ ನಿಧನದಿಂದಾಗಿ ಕೇವಲ ಬಿಜೆಪಿಗೆ ಅಷ್ಟೇ ಅಲ್ಲದೆ ಇಡೀ ದೇಶಕ್ಕೆ ಒಬ್ಬ ಮುತ್ಸದ್ದಿ ರಾಜಕಾರಣಿಯನ್ನು ಕಳೆದುಕೊಂಡ ಹಾಗಾಗಿದೆ. ಮೋದಿ ನೇತೃತ್ವದ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅರುಣ್ ಜೈಟ್ಲಿ ಹಲವಾರು ಕ್ರಾಂತ್ರಿಕಾರಕ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದರು.
2019 ರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಪ್ರಧಾನಿ ಮೋದಿ ಸರ್ಕಾರದ ನೂತನ ಕ್ಯಾಬಿನೆಟ್ ನಲ್ಲಿ ಅರುಣ್ ಜೈಟ್ಲಿ ಗೆ ಮತ್ತೆ ಹಣಕಾಸು ಹುದ್ದೆ ಸಿಗುವುದು ಅನುಮಾನ ಎಂದು ಮೂಲಗಳು ತಿಳಿಸಿವೆ
ಲೋಕಸಭಾ ಚುನಾವಣೆಗೂ ಮುನ್ನ ಮೆಲ್ವರ್ಗಗಳನ್ನು ಓಲೈಸುವ ನಿಟ್ಟಿನಲ್ಲಿ ನೀಡಿರುವ ಶೇ 10 ರಷ್ಟು ಮೀಸಲಾತಿಯ ಬಗ್ಗೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವ ಅರುಣ್ ಜೈಟ್ಲಿ ಮೇಲ್ಜಾತಿ ಬಡವರಿಗೆ ನೀಡಿರುವ ಶೇ 10 ರಷ್ಟು ಮೀಸಲಾತಿ ಸಂವಿಧಾನದ ಮೂಲ ರಚನೆಯಲ್ಲಿನ ಅಂಶಗಳನ್ನು ಉಲ್ಲಂಘಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಸರ್ಕಾರದ ಮೇಲೆ ಟೀಕಾ ಪ್ರಹಾರ ಮುಂದುವರೆಸಿದ್ದು ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಲು ಸಿಬಿಐನಲ್ಲಿರುವ ಮೋದಿಯ ನೀಲಿಗಣ್ಣಿನ ಹುಡುಗ ಕಾರಣ ಎಂದು ತಿಳಿಸಿದ್ದಾರೆ.
9000 ಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಉದ್ಯಮಿ ವಿಜಯ್ ಮಲ್ಯ ಭಾರತದಿಂದ ಇಂಗ್ಲೆಂಡ್ ಗೆ ಹೊರಡುವ ಮೊದಲು ಹಣಕಾಸು ಸಚಿವ ಅರುಣ್ ಜೈಟ್ಲಿ ಜೊತೆ ತಮ್ಮ ಕೇಸಿಗೆ ಮುಕ್ತಿ ಹಾಡಲು ಹಲವು ಬಾರಿ ತಾವು ಆಫರ್ ಕುರಿತಾಗಿ ಮಾತುಕತೆ ನಡೆಸಿದ್ದಾಗಿ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.