ಸಕಲ ಸರ್ಕಾರಿ ಗೌರವಗಳೊಂದಿಗೆ ಅರುಣ್ ಜೈಟ್ಲಿ ಅಂತ್ಯಕ್ರಿಯೆ

ಏಮ್ಸ್ ಆಸ್ಪತ್ರೆಯಲ್ಲಿ ಶನಿವಾರದಂದು ಆನಾರೋಗ್ಯದಿಂದ ಕೊನೆಯುಸಿರೆಳದ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅರುಣ್ ಜೈಟ್ಲಿ ಅಂತ್ಯಕ್ರಿಯೆ ಭಾನುವಾರದಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

Last Updated : Aug 25, 2019, 04:01 PM IST
ಸಕಲ ಸರ್ಕಾರಿ ಗೌರವಗಳೊಂದಿಗೆ ಅರುಣ್ ಜೈಟ್ಲಿ ಅಂತ್ಯಕ್ರಿಯೆ title=

ನವದೆಹಲಿ: ಏಮ್ಸ್ ಆಸ್ಪತ್ರೆಯಲ್ಲಿ ಶನಿವಾರದಂದು ಆನಾರೋಗ್ಯದಿಂದ ಕೊನೆಯುಸಿರೆಳದ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅರುಣ್ ಜೈಟ್ಲಿ ಅಂತ್ಯಕ್ರಿಯೆ ಭಾನುವಾರದಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಯಮುನಾ ನದಿಯ ದಡದಲ್ಲಿರುವ ನಿಗಂಬೋಧ್ ಘಾಟ್ ಶವಾಗಾರದಲ್ಲಿ ಅರುಣ್ ಜೈಟ್ಲಿ ಪುತ್ರ ರೋಹನ್ ಜೈಟ್ಲಿ ಅವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಗೌರವ ಸಲ್ಲಿಸಲು ಮಧ್ಯಾಹ್ನ 1ರವರೆಗೆ ಬಿಜೆಪಿ ಕೇಂದ್ರ ಕಚೇರಿಯಲ್ಲಿರಿಸಿ ನಂತರ ಅವರ ಶವವನ್ನು ಅಂತ್ಯಕ್ರಿಯೆ ಅಂತಿಮ ವಿಧಿಗಳಿಗಾಗಿ ನಿಗಂಬೋಧ್ ಘಾಟ್ ಗೆ ತೆಗೆದುಕೊಂಡು ಬರಲಾಯಿತು. 

ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿಯವರ ಸರ್ಕಾರದ ಮೊದಲ ಅವಧಿಯಲ್ಲಿ ಜೇಟ್ಲಿ ಜೊತೆ ಸೇವೆ ಸಲ್ಲಿಸಿದ ಹೆಚ್ಚಿನ ಕೇಂದ್ರ ಸಚಿವರು ಪಾಲ್ಗೊಂಡರು. ಅಲ್ಲದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಕಾಂಗ್ರೆಸ್ಸಿನ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಪಿಲ್ ಸಿಬಲ್ ಉಪಸ್ಥಿತರಿದ್ದರು. ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ನಿನ್ನೆ ಜೈಟ್ಲಿ ಕುಟುಂಬ ಪ್ರಧಾನಿ ಮೋದಿಯವರಿಗೆ ತಮ್ಮ ಪ್ರವಾಸವನ್ನು ಮೊಟಕುಗೋಳಿಸದಂತೆ ಮನವಿ ಮಾಡಿತ್ತು. 

ಇಂದು ಬೆಳಿಗ್ಗೆ ಜೇಟ್ಲಿಯವರ ದಕ್ಷಿಣ ದೆಹಲಿಯ ನಿವಾಸದಲ್ಲಿ ಮತ್ತು ನಂತರ ಪಕ್ಷದ ಕಚೇರಿಯಲ್ಲಿ ಶೋಕತಪ್ತರು ನೆರೆದರು, ಅಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೂವಿನ ಗೌರವ ಸಲ್ಲಿಸಿದರು. ಹಿರಿಯ ಕಾಂಗ್ರೆಸ್ ಮುಖಂಡ ಮೋತಿಲಾಲ್ ವೊಹ್ರಾ, ಎನ್‌ಸಿಪಿ ಮುಖಂಡರಾದ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್, ಆರ್‌ಎಲ್‌ಡಿ ನಾಯಕ ಅಜಿತ್ ಸಿಂಗ್ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಕೂಡ  ಜೇಟ್ಲಿಗೆ ಗೌರವ ಸಲ್ಲಿಸಿದರು.

ಪ್ರಧಾನಿ ಮೋದಿಯವರ ಅತ್ಯಂತ ವಿಶ್ವಾಸಾರ್ಹ ಮಂತ್ರಿಗಳಲ್ಲಿ ಒಬ್ಬರಾದ ಜೇಟ್ಲಿ ಅವರನ್ನು ರಾಜಕೀಯ ವಲಯಗಳಲ್ಲಿ ಟ್ರಬಲ್ ಶೂಟರ್ ಎಂದೇ ಗುರುತಿಸಲಾಗಿತ್ತು. ಅವರು ಹಣಕಾಸು ಮಂತ್ರಿಯಾಗಿ, ಸರಕು ಮತ್ತು ಸೇವಾ ತೆರಿಗೆ ಸೇರಿದಂತೆ ಪ್ರಮುಖ ಆರ್ಥಿಕ ಶಾಸನಗಳನ್ನು ಜಾರಿಗೆ ತಂದಿದ್ದಲ್ಲದೆ ಅವುಗಳನ್ನು ಸಮರ್ಥಿಸಿಕೊಂಡರು,
 

Trending News