ಮತದಾರರು ರಾಜಕಾರಣಿಗಳು ಹಾಗೂ ಪತ್ರಕರ್ತರಿಗಿಂತ ಸಮರ್ಥರು ಅವರಿಗೆ ಸತ್ಯ ಗೊತ್ತಿದೆ - ಅರುಣ್ ಜೈಟ್ಲಿ

ಮತದಾರರು ರಾಜಕಾರಣಿಗಳು ಹಾಗೂ ಪತ್ರಕರ್ತರಿಗಿಂತ ಸಮರ್ಥರಾಗಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೈಟ್ಲಿ ಹೇಳಿದ್ದಾರೆ.

Last Updated : Mar 26, 2019, 08:05 PM IST
ಮತದಾರರು ರಾಜಕಾರಣಿಗಳು ಹಾಗೂ ಪತ್ರಕರ್ತರಿಗಿಂತ ಸಮರ್ಥರು ಅವರಿಗೆ ಸತ್ಯ ಗೊತ್ತಿದೆ - ಅರುಣ್ ಜೈಟ್ಲಿ  title=

ನವದೆಹಲಿ: ಮತದಾರರು ರಾಜಕಾರಣಿಗಳು ಹಾಗೂ ಪತ್ರಕರ್ತರಿಗಿಂತ ಸಮರ್ಥರಾಗಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೈಟ್ಲಿ ಹೇಳಿದ್ದಾರೆ.

ಜೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ನಡೆಸಿದ ಸಂದರ್ಶನದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹಲವು ವಿಚಾರಗಳ ಕುರಿತಾಗಿ ಅರುಣ್ ಜೈಟ್ಲಿ ಮುಕ್ತವಾಗಿ ಮಾತನಾಡಿದರು.ದೇಶದ ಮತದಾರರು ರಾಜಕಾರಣಿಗಳು ಹಾಗೂ ಪತ್ರಕರ್ತರಿಗಿಂತ ಸಮರ್ಥರಾಗಿದ್ದಾರೆ ಅವರಿಗೆ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದು ತಿಳಿದಿದೆ ಎಂದರು.

ಆರ್ಥಿಕ ಬೆಳವಣಿಗೆ ವಿಚಾರವಾಗಿ ಮಾತನಾಡಿದ ಜೈಟ್ಲಿ " 2014 ರಿಂದ ಭಾರತ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.1947 ರಿಂದ 2013ರವರೆಗೆ ಯಾವಾಗ ಭಾರತ ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿತ್ತು ಎನ್ನುವುದನ್ನು ತೋರಿಸಿ. ಆದರೂ ಕೂಡ ಪ್ರತಿಪಕ್ಷಗಳು ಯಾವುದೇ ಅಭಿವೃದ್ದಿಯಾಗಿಲ್ಲವೆಂದು ದೂರುತ್ತಿವೆ" ಎಂದರು.

ಪಾಕಿಸ್ತಾನದ ವಿಚಾರವಾಗಿ ಮಾತನಾಡುತ್ತಾ "ಪಾಕಿಸ್ತಾನದ ಬಗ್ಗೆ ನಮ್ಮ ನೀತಿ ಸ್ಥಿರವಾಗಿದ್ದು.ಪಾಕ್ ಜೊತೆಗೆ ನಾವು ಶಾಂತಿಯನ್ನು ಬಯಸುತ್ತೇವೆ.ಆದರೆ ಅದು ತನ್ನ ಭೂಪ್ರದೇಶವನ್ನು ಉಗ್ರರ ಕಾರ್ಯಚಟುವಟಿಕೆಗಳಿಗೆ ಆಶ್ರಯ ನೀಡಬಾರದು.ನಾವು ಕೇವಲ ಪಾಕ್ ಗಡಿ ರೇಖೆಯನ್ನು ಮಾತ್ರ ದಾಟಿಲ್ಲ,ಅದರೊಳಗೆ ನುಸುಳಿ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದ್ದೇವೆ.ಈ ವಿಚಾರವಾಗಿ ಇಡೀ ವಿಶ್ವವೇ ನಮ್ಮ ನಿಲುವನ್ನು ಒಪ್ಪಿದೆ ಎಂದು ಜೈಟ್ಲಿ ತಿಳಿಸಿದರು.ಇದೇ ವೇಳೆ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು 

Trending News