ನಿರ್ಭಯ ಗ್ಯಾಂಗ್ ರೇಪ್ ಅಪರಾಧಿಗಳು ಏಳು ದಿನಗಳೊಳಗೆ ರಾಷ್ಟ್ರಪತಿಗಳ ಮುಂದೆ ಅನುಕಂಪದ ಅರ್ಜಿ ಸಲ್ಲಿಸದಿದ್ದರೆ ಶೀಘ್ರದಲ್ಲೇ ಮರಣದಂಡನೆ ವಿಧಿಸಲಾಗುತ್ತದೆ ಎಂದು ತಿಹಾರ್ ಜೈಲು ಅಧಿಕಾರಿಗಳು ಗುರುವಾರ ಅಧಿಕೃತ ನೋಟಿಸ್ನಲ್ಲಿ ತಿಳಿಸಿದ್ದಾರೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ದಾಖಲಾಗಿದ್ದ ದೆಹಲಿಯ ತಿಹಾರ್ ಜೈಲಿನಲ್ಲಿ ಮನೆಯಲ್ಲಿ ಬೇಯಿಸಿದ ಆಹಾರಬೇಕೆಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆರೋಗ್ಯದ ಕಾರಣದಿಂದಾಗಿ ಅವರು ಈ ಮನವಿಯನ್ನು ಕೋರ್ಟ್ ಗೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ತಮ್ಮ ತಿಹಾರ್ ಜೈಲುವಾಸವನ್ನು ಕೊನೆಗೊಳಿಸಲು ಕಾನೂನು ಹೋರಾಟ ಮಾಡಿದರೂ ಜಾಮೀನು ಪಡೆಯಲು ವಿಫಲರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಈಗ ಸೋಮವಾರದಂದು ತಿಹಾರ ಜೈಲಿನಲ್ಲೇ 74 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸುಮಾರು 600 ರಿಂದ 700 ಕೈದಿಗಳನ್ನು ಹೊಂದಿರುವ ತಿಹಾರ್ನ ಜೈಲಿನ ಸಂಖ್ಯೆ 7ರ 2ನೇ ವಾರ್ಡಿನ 15ನೇ ಸೆಲ್ನಲ್ಲಿ ಚಿದಂಬರಂ ಅವರನ್ನು ಇರಿಸಲಾಗಿದೆ. ಈ ಹಿಂದೆ ಚಿದು ಪುತ್ರ ಕಾರ್ತಿ ಚಿದಂಬರಂ ಅವರನ್ನೂ ಸಹ ಇದೇ ಜೈಲಿನಲ್ಲಿರಿಸಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.