ಡಿಸೆಂಬರ್ 2022 ರ ಹೊತ್ತಿಗೆ ವಕ್ಫ್ ಮಂಡಳಿಯು 8.72 ಲಕ್ಷ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಹೊಂದಿರುವ ಭಾರತದ ಮೂರನೇ ಅತಿದೊಡ್ಡ ಭೂಮಾಲೀಕ ಎಂದು ಪರಿಗಣಿಸಲಾಗಿದೆ. ಅನೇಕ ವರದಿಗಳ ಪ್ರಕಾರ, ವಕ್ಫ್ ಮಂಡಳಿಯು ಪ್ರಸ್ತುತ ಒಟ್ಟು 9.4 ಲಕ್ಷ ಎಕರೆಗಳಿಗಿಂತ ಹೆಚ್ಚು ಭೂಮಿಯನ್ನು ಹೊಂದಿದೆ. ವಕ್ಫ್ ಆಸ್ತಿಗಳಲ್ಲಿ ಮದರಸಾಗಳು, ಮಸೀದಿಗಳು ಮತ್ತು ಸ್ಮಶಾನಗಳು ಸೇರಿದಂತೆ ವಿವಿಧ ಧಾರ್ಮಿಕ-ಸಮುದಾಯ ಬಳಕೆಗಾಗಿ ಭೂಮಿಗಳು ಸೇರಿವೆ.
Waqf Amendment Bill 2025: ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಈ ಹಿಂದೆ ವಕ್ಫ್ ಆಸ್ತಿಗಳನ್ನು ಗುರುತಿಸುವ ಮತ್ತು ನಿರ್ಧರಿಸುವ ಸಂಪೂರ್ಣ ಅಧಿಕಾರ ವಕ್ಫ್ ಮಂಡಳಿಗೆ ಇತ್ತು. ಆದರೆ ಈಗ ಆ ಅಧಿಕಾರವನ್ನು ತೆಗೆದುಹಾಕಿ, ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಸ್ತಿ ಸಮೀಕ್ಷೆ ನಡೆಸುವ ಜವಾಬ್ದಾರಿಯನ್ನು ವರ್ಗಾಯಿಸಲಾಗಿದೆ.
What is the meaning of Waqf?: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ವಕ್ಫ್ ಪದದ ಅರ್ಥವೇನು ಮತ್ತು ವಕ್ಫ್ ಪದ ಎಲ್ಲಿಂದ ಹುಟ್ಟಿಕೊಂಡಿತು ಎಂದು ನಿಮಗೆ ತಿಳಿದಿದೆಯೇ?
ವಕ್ಫ್ ಮಂಡಳಿಯಿಂದಾಗುತ್ತಿರುವ ಭೂ ಕಬಳಿಕೆಯ ಗೊಂದಲವನ್ನು ಕಾಂಗ್ರೆಸ್ ಸರ್ಕಾರ ಬಗೆಹರಿಸಬೇಕು. ರೈತರಿಗೆ ಹಾಗೂ ಹಿಂದೂಗಳಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಇಂದು ಚಿತ್ರದುರ್ಗದಲ್ಲಿ ವಕ್ಫ್ ವಿರುದ್ಧ ಬಿಜೆಪಿ ಪ್ರೊಟೆಸ್ಟ್
ಯತ್ನಾಳ್ ಅಭಿಯಾನದ ಬಳಿಕ ವಿಜಯೇಂದ್ರ ಶಕ್ತಿ ಪ್ರದರ್ಶನ
ನಮ್ಮ ಭೂಮಿ ನಮ್ಮ ಹಕ್ಕು ಅಭಿಯಾನದಡಿ ಹೋರಾಟ
ಹೊಳಲ್ಕೆರೆ ತಾ. ನಂದನಹೊಸೂರು ಗ್ರಾಮಕ್ಕೆ ಭೇಟಿ
ʻನಮ್ಮ ಭೂಮಿ ನಮ್ಮ ಹಕ್ಕುʼ ಅಡಿ ಬಿಜೆಪಿ ತಂಡ ಪ್ರೊಟೆಸ್ಟ್
BJPಯಿಂದ ವಕ್ಫ್ ಬೋರ್ಡಿನ ಜನ ವಿರೋಧಿ ನೀತಿ ಖಂಡನೆ
ಬಿಜೆಪಿಯಲ್ಲಿ 3 ತಂಡಗಳಾಗಿ ಪ್ರವಾಸ ಮಾಡುತ್ತಿರುವ ನಾಯಕರು
ವಕ್ಫ್ ಆಸ್ತಿಗಳನ್ನು ತೆರವುಗೊಳಿಸಿ ಕೊಡುವ ಭರವಸೆಯನ್ನು ನೀಡಿ, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ, ಅತಿಕ್ರಮಣ ಮಾಡಿಕೊಂಡಿರುವವರಿಗೆ ನೋಟೀಸುಗಳನ್ನೂ ನೀಡಿದ್ದರು. ಬಿಜೆಪಿಯವರು ರಾಜಕೀಯ ಇಬ್ಬಂದಿತನವನ್ನು ಇಬ್ಬದಿನೀತಿಯನ್ನು ಪಾಲಿಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತೊಡೆತಟ್ಟಿರುವ ಯತ್ನಾಳ್ ಟೀಂ ನಡೆಸುತ್ತಿದ್ದ ವಕ್ಫ್ ಹೋರಾಟ ಬೆಳಗಾವಿಯಲ್ಲಿ ಅಂತ್ಯ ಗೊಂಡಿದೆ. ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಜೊತೆಗೆ ಸಭೆ ನಡೆಸಿದ ಯತ್ನಾಳ್, ಇದು ಕೇವಲ ಟ್ರೇಲರ್... ಪಿಕ್ಚರ್ ಅಬಿ ಬಾಕಿ ಹೈ ಎಂದು ಹೇಳಿದ್ರು. ಅಲ್ಲದೆ ವಕ್ಫ್ ಹೋರಾಟದ ವರದಿ ಜೆಪಿಸಿಗೆ ನೀಡಲು ದೆಹಲಿಗೆ ಹಾರಿದ್ದಾರೆ. ಹೈಕಮಾಂಡ್ ಭೇಟಿಯಾಗಿ ವಿಜಯೇಂದ್ರ ವಿರುದ್ಧ ದೂರು ನೀಡಲಿದ್ದಾರೆ.
ನನಗೆ ವಕ್ಫ್ ಬೋರ್ಡ್ ಜಾಗ ತಗೊಂಡಿದ್ದಾರೆ ಅಂತಿದ್ದಾರೆ
ನಿಮಗೆ ಗಂಡಸ್ತನ ಇದ್ರೆ ನನ್ ಮೇಲೆ ತನಿಖೆ ಮಾಡಿಸಿ
ಬಿಜೆಪಿ ವಿರುದ್ಧ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕಿಡಿ
ವಕ್ಫ್ ಬೋರ್ಡ್ ಮಾಡಿದ್ದು ಬ್ರಿಟಿಷರು, ಕಾಂಗ್ರೆಸ್ಸಿಗರಲ್ಲ
400 ವರ್ಷಗಳಿಂದ ವಕ್ಪ್ ಬೋರ್ಡ್ ಇದೆ, ಯಾರೂ ಮಾಡಿಲ್ಲ
Opposition Leader R Ashok: ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವವಿಖ್ಯಾತ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆಯ ಆವರಣವನ್ನು ವಕ್ಫ್ ಮಂಡಳಿ ಕಬಳಿಸಿದೆ. ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಕ್ಫ್ ಮಂಡಳಿಗೆ ನ್ಯಾಯಾಂಗದ ಅಧಿಕಾರ ನೀಡಿದೆ
ವಕ್ಫ್ ಭೂಮಿ ವಿವಾದ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತರಿಗೆ ನೀಡಲಾಗಿರುವ ನೋಟಿಸ್ ಗಳನ್ನು ತಕ್ಷಣ ವಾಪಸ್ ಪಡೆಯಲು ನಮ್ಮ ಸರ್ಕಾರ ಸೂಚನೆ ನೀಡಿದ ನಂತರವೂ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿರುವುದಕ್ಕೆ ರಾಜಕೀಯ ಲಾಭದ ದುರುದ್ದೇಶ ಇದೆಯೇ ಹೊರತು ಇದರಲ್ಲಿ ರೈತರ ಹಿತಾಸಕ್ತಿ ರಕ್ಷಣೆಯ ಯಾವ ಸದುದ್ದೇಶ ಇಲ್ಲ.
ಕರ್ನಾಟಕದಾದ್ಯಂತ ವಕ್ಫ್ ಬೋರ್ಡ್ ನೋಟಿಸ್ ಸದ್ದು! ಜಿಲ್ಲೆ ಜಿಲ್ಲೆಗೂ ಹಬ್ಬಿದ ವಕ್ಫ್ ಆಸ್ತಿ ಒತ್ತುವರಿ ಆರೋಪ. ಸರ್ಕಾರದ ವಿರುದ್ಧ ಸಿಡಿದ ರೈತರು, ಉಗ್ರ ಪ್ರತಿಭಟನೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್.
ಈ ಜಿಲ್ಲೆಯಲ್ಲಿ ಈಗ ವಕ್ಫ್ ವಾದ, ವಿವಾದ ಈಗ ಮತ್ತಷ್ಟು ಉಲ್ಭಣವಾಗುತ್ತಿದೆ. ಜಿಲ್ಲೆಯ ಕೆಲ ರೈತರಿಗೆ ನೋಟಿಸ್ ನೋಡಿದ್ದರೆ, ಕೆಲವರಿಗೆ ನೋಟಿಸ್ ನೀಡಿದೇ ಆರ್ ಟಿ ಸಿ ಯಲ್ಲಿ ವಕ್ಫ್ ಎಂದು ಸೇರ್ಪಡೆಯಾಗಿದೆ. ಇನ್ನೂ ಐತಿಹಾಸಿಕ ಹಿನ್ನೆಲೆಯುಳ್ಳ ಮಠದ ಆಸ್ತಿಯಲ್ಲಿ ಕೂಡಾ ವಕ್ಫ್ ಎಂದು ಸೇರ್ಪಡೆಯಾಗಿದೆ. ಇನ್ನೂ ಹಿಂದೆ ಬಿಜೆಪಿ ಸರ್ಕಾರದ ಅವದಿಯಲ್ಲಿಯೇ ಜಿಲ್ಲೆಯ ಕೆಲ ರೈತರಿಗೆ ನೋಟಿಸ್ ನೀಡಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರ ಮಾತು. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ...
ವಕ್ಫ್ ಬೋರ್ಡ್ ಲ್ಯಾಂಡ್ ಜಿಹಾದ್ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ರೈತರನ್ನು, ಮಠ ಮಾನ್ಯಗಳನ್ನು ಮತ್ತು ಬಡ ಜನಸಾಮಾನ್ಯರನ್ನು ಹಿಂಸಿಸುತ್ತಿದೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು
ವಿಜಯಪುರದಲ್ಲಿ ರೈತರಿಗೆ ವಕ್ಫ್ ನೋಟಿಸ್ ಪ್ರಕರಣ
ಇಂದು ವಿಜಯಪುರಕ್ಕೆ ಬಿಜೆಪಿ ನಿಯೋಗ ಭೇಟಿ
ಸಂಸದ ಕಾರಜೋಳ ನೇತೃತ್ವದಲ್ಲಿ ನಿಯೋಗ ಭೇಟಿ
ರೈತರಿಂದ ಅಹವಾಲು ಸ್ವೀಕರಿಸಲಿರುವ ಬಿಜೆಪಿ ತಂಡ
ರೈತರ ಸಮಸ್ಯೆ ಆಲಿಸಲಿರುವ ಬಿಜೆಪಿ ನಿಯೋಗ
ವಕ್ಫ್ ಬೋರ್ಡ್‌ನಿಂದ ವಿಜಯಪುರ ರೈತರಿಗೆ ನೋಟಿಸ್ ವಿಚಾರ
ಮಾಹಿತಿ ಸಂಗ್ರಹಿಸಲು ಬಿಜೆಪಿಯಿಂದ ಸಮಿತಿ ರಚನೆ
ಐದು ಸದಸ್ಯರ ಸಮಿತಿ ರಚಿಸಿದ ಬಿಜೆಪಿ ಪಕ್ಷ
ಸಂಸದ ಗೋವಿಂದ ಕಾರಜೋಳ, ಹರೀಶ್ ಪೂಂಜಾ
ಮಹೇಶ್ ಟೆಂಗಿನಕಾಯಿ, ಅರುಣ್ ಶಹಾಪುರ
ಕಲ್ಮರುಡಪ್ಪ ಸೇರಿ 5 ಸದಸ್ಯರ ಸಮಿತಿ ರಚನೆ
ರೈತರ ಸಮಸ್ಯೆ ಆಲಿಸೋದಕ್ಕೆ ಬಿಜೆಪಿ ನಾಯಕರ ತಂಡ
ನಾಳೆ ವಿಜಯಪುರ ಜಿಲ್ಲೆಗೆ ಭೇಟಿ, ಮಾಹಿತಿ ಸಂಗ್ರಹ
ಯಾದಗಿರಿ ವಕ್ಫ್ ಬೋರ್ಡ್‌ನಲ್ಲಿ ನಿಲ್ಲದ ಆಸ್ತಿ ಕಬಳಿಕೆ ವಿವಾದ. ಪದೇ ಪದೆ ಕೇಳಿ ಬರ್ತಿದೆ ವಕ್ಫ್ ಬೋರ್ಡ್ ಆಸ್ತಿ ಗುಳುಂ ಆರೋಪ. ವಕ್ಫ್ ಬೋರ್ಡ್‌ನಲ್ಲಿ ಕೊನೆಯೇ ಇಲ್ಲವಾ ಆಸ್ತಿ ಗುಳುಂದಾರರ ಸಂಖ್ಯೆ..!? ಸಾಲು ಸಾಲು ಆರೋಪ ಬರ್ತಿದ್ರೂ ವಕ್ಫ್ ಬೋರ್ಡ್ ಅಧ್ಯಕ್ಷ ಮೌನ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.