ಫ್ರಾನ್ಸ್ಗೆ ವಿಶೇಷ ವಿಮಾನದಲ್ಲಿ ಹಾರಾಟ ನಡೆಸುವ ಮೊದಲು, "ನನ್ನ ಫ್ರಾನ್ಸ್ ಪ್ರವಾಸವು ಬಲವಾದ ಕಾರ್ಯತಂತ್ರದ ಸಹಭಾಗಿತ್ವವನ್ನು ಪ್ರತಿಬಿಂಬಿಸುತ್ತದೆ, ಇದು ಎರಡೂ ದೇಶಗಳಿಗೆ ಬಹಳ ಮುಖ್ಯವಾಗಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಫೆಬ್ರವರಿಯಲ್ಲಿ ನಡೆದ ಬಾಲಕೋಟ್ ವೈಮಾನಿಕ ದಾಳಿಯ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ವಾಯುಪ್ರದೇಶದ ಮೂಲಕ ದ್ವಿಪಕ್ಷೀಯ ಸಭೆಗಾಗಿ ಫ್ರಾನ್ಸ್ಗೆ ಪ್ರಯಾಣ ಬೆಳೆಸಿದರು.
ಫ್ರಾನ್ಸ್ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ಯಾರಿಸ್ನಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ನಿಡ್ ಡಿ ಏಗಲ್ನಲ್ಲಿ ಏರ್ ಇಂಡಿಯಾ ಅಪಘಾತಕ್ಕೆ ಒಳಗಾದ ಭಾರತೀಯ ಸಂತ್ರಸ್ತರಿಗಾಗಿ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.