ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ ಮಧ್ಯಾಹ್ನ ಹರಿಯಾಣದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜನ್ನಾಯಕ್ ಜನತಾ ಪಕ್ಷದ (ಜೆಜೆಪಿ) ದುಶ್ಯಂತ್ ಚೌತಲಾ ಅವರು ಉಪ ಮುಖ್ಯಮಂತ್ರಿಯಾಗಲಿದ್ದಾರೆ.
ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಚುನಾವಣಾ ಫಲಿತಾಂಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪಕ್ಷವನ್ನು ಅಭಿನಂದಿಸಿದ್ದಾರೆ, ಈ ದಿನಗಳಲ್ಲಿ ಒಂದು ಪಕ್ಷವು ಒಂದು ರಾಜ್ಯದಲ್ಲಿ ಸತತ ಅಧಿಕಾರವನ್ನು ಪಡೆಯುವುದು ಸಾಧಾರಣ ಸಾಧನೆಯಲ್ಲ ಎಂದು ಹೇಳಿದ್ದಾರೆ.
ಟಿಕೆಟ್ ವಿತರಣೆಯಲ್ಲಿನ ಅಕ್ರಮಗಳ ಆರೋಪದ ಮೇಲೆ ಸೋನಿಯಾ ಗಾಂಧಿಯವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದ ಕೆಲ ದಿನಗಳ ನಂತರ, ಹರಿಯಾಣ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಅಶೋಕ್ ತನ್ವರ್ ಶನಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚಿಗೆ ಯೋಗೇಂದ್ರ ಯಾದವ್ ನೇತ್ರುತ್ವದ ಸ್ವರಾಜ್ ಇಂಡಿಯಾ ಪಕ್ಷ ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಮಧು ಆನಂದ್ ಪ್ರಕಾಶ್ ಅವರನ್ನು ಪಂಚಕುಲದ ಸ್ವರಾಜ್ ಇಂಡಿಯಾದ ವಿಧಾನಸಭಾ ಅಭ್ಯರ್ಥಿಯಾಗಿ ಘೋಷಿಸಿದೆ.
ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳ ವಿಧಾನಸಭಾ ಅವಧಿ ನವಂಬರ್ 9 ಹಾಗೂ 2 ರಂದು ಕೊನೆಗೊಳ್ಳುವ ಹಿನ್ನಲೆಯಲ್ಲಿ ಈಗ ವಿಧಾನಸಭಾ ಚುನಾವಣಾ ಘೋಷಣೆಗಾಗಿ ಮುಖ್ಯ ಚುನಾವಣಾ ಆಯುಕ್ತರಾದ ಸುನಿಲ್ ಆರೋರಾ ಪತ್ರಿಕಾಗೋಷ್ಠಿ ಕರೆದಿದ್ದಾರೆ.
ಹರಿಯಾಣದಲ್ಲಿಯೂ ಕೂಡ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (ಎನ್ಆರ್ಸಿ) ಪರಿಚಯಿಸುವ ಬಗ್ಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭಾನುವಾರ ಸುಳಿವು ನೀಡಿದ್ದಾರೆ, ಅದು ಹೇಗೆ ಮತ್ತು ಯಾವಾಗ ಮಾಡಬೇಕೆಂಬುದರ ಬಗ್ಗೆ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಮಾತ್ರ ಅವರು ತಿಳಿಸಿಲ್ಲ ಎನ್ನಲಾಗಿದೆ.
ಹರ್ಯಾಣ ದಲ್ಲಿ ವಿಧಾನಸಭೆ ಚುನಾವಣೆ ಇರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಬಿಎಸ್ಪಿ ಮೈತ್ರಿಗೆ ಮುಂದಾಗಿವೆ. ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ಇರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಈಗ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಈಗ ಊಹಾಪೋಹಗಳು ಕೇಳಿ ಬಂದಿವೆ.
ಹರಿಯಾಣದ ರೋಹ್ಟಕ್ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಡಿ ಕೋರ್ಸ್ ಓದುತ್ತಿದ್ದ ಕರ್ನಾಟಕದ 30 ವರ್ಷದ ವೈದ್ಯನೊಬ್ಬ ಆಸ್ಪತ್ರೆ ಕ್ಯಾಂಪಸ್ನ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.