Axar Patel Married To Meha Patel: ಅಕ್ಷರ್ ಪಟೇಲ್ ಅವರು ಮೇಹಾ ಪಟೇಲ್ ಅವರನ್ನು ವಿವಾಹವಾಗಿದ್ದಾರೆ. ಮೇಹಾ ವೃತ್ತಿಯಲ್ಲಿ ಪೌಷ್ಟಿಕತಜ್ಞೆ ಮತ್ತು ಆಹಾರ ತಜ್ಞೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಈಗ ಅಕ್ಷರ್ ಪಟೇಲ್ ಜೊತೆ ಮೇಹಾ ಸಪ್ತಪದಿ ತುಳಿಯುವ ವೀಡಿಯೊ ವೈರಲ್ ಆಗಿದೆ. ಮೇಹಾ ಪಟೇಲ್ ಬಿಳಿ ಬಣ್ಣದ ಲೆಹೆಂಗಾ ಧರಿಸಿದ್ದಾರೆ. ಮತ್ತೊಂದೆಡೆ, ಅಕ್ಷರ್ ಬಿಳಿ ಬಣ್ಣದ ಶೇರ್ವಾನಿಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ.
Axar Patel Wedding: ಟೀಂ ಇಂಡಿಯಾದ ಸ್ಟಾರ್ ಬೌಲರ್ ಅಕ್ಷರ್ ಪಟೇಲ್ ವಡೋದರಾದಲ್ಲಿ ಪ್ರೇಯಸಿ ಮೇಹಾ ಪಟೇಲ್ ಅವರನ್ನು ವಿವಾಹವಾಗಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ODI ಮತ್ತು T20 ಸರಣಿಯಿಂದ (IND vs NZ T20 ಸರಣಿ 2023) KL ರಾಹುಲ್ ಮತ್ತು ಅಕ್ಷರ್ ಪಟೇಲ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಅಂದಿನಿಂದ ಕೆಎಲ್ ರಾಹುಲ್ ಮಾತ್ರವಲ್ಲ, ಅಕ್ಷರ್ ಪಟೇಲ್ ಮದುವೆಯ ಸಿದ್ಧತೆ ಕೂಡ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಇದೀಗ ಆ ಸುದ್ದಿ ನಿಜವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.