ಕೆಎಲ್ ರಾಹುಲ್ ಬೆನ್ನಲ್ಲೇ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಟೀಂ ಇಂಡಿಯಾದ ಈ ಸ್ಟಾರ್ ಆಲ್ ರೌಂಡರ್!

Axar Patel Wedding: ಟೀಂ ಇಂಡಿಯಾದ ಸ್ಟಾರ್ ಬೌಲರ್ ಅಕ್ಷರ್ ಪಟೇಲ್ ವಡೋದರಾದಲ್ಲಿ ಪ್ರೇಯಸಿ ಮೇಹಾ ಪಟೇಲ್ ಅವರನ್ನು ವಿವಾಹವಾಗಲಿದ್ದಾರೆ.  ನ್ಯೂಜಿಲೆಂಡ್ ವಿರುದ್ಧದ ODI ಮತ್ತು T20 ಸರಣಿಯಿಂದ (IND vs NZ T20 ಸರಣಿ 2023) KL ರಾಹುಲ್ ಮತ್ತು ಅಕ್ಷರ್ ಪಟೇಲ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಅಂದಿನಿಂದ ಕೆಎಲ್ ರಾಹುಲ್ ಮಾತ್ರವಲ್ಲ, ಅಕ್ಷರ್ ಪಟೇಲ್ ಮದುವೆಯ ಸಿದ್ಧತೆ ಕೂಡ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಇದೀಗ ಆ ಸುದ್ದಿ ನಿಜವಾಗಿದೆ.

Written by - Bhavishya Shetty | Last Updated : Jan 26, 2023, 04:31 PM IST
    • ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ
    • ಅಕ್ಷರ್ ಪಟೇಲ್ ವಡೋದರಾದಲ್ಲಿ ಪ್ರೇಯಸಿ ಮೇಹಾ ಪಟೇಲ್ ಅವರನ್ನು ವಿವಾಹವಾಗಲಿದ್ದಾರೆ
    • ಈ ಮದುವೆಯಲ್ಲಿ ಟೀಂ ಇಂಡಿಯಾ ಮತ್ತು ಗುಜರಾತ್ ನ ಕೆಲವು ಆಟಗಾರರು ಭಾಗಿಯಾಗಲಿದ್ದಾರೆ
ಕೆಎಲ್ ರಾಹುಲ್ ಬೆನ್ನಲ್ಲೇ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಟೀಂ ಇಂಡಿಯಾದ ಈ ಸ್ಟಾರ್ ಆಲ್ ರೌಂಡರ್!  title=
axar patel

Axar Patel Wedding: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಜೊತೆ ಜನವರಿ 23 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಸದ್ದಿಲ್ಲದೆ ಅದ್ಧೂರಿ ವಿವಾಹ ನಡೆಯಲಿದೆ.

ಇದನ್ನೂ ಓದಿ: IND vs NZ: ಪಾಂಡ್ಯರಿಂದ ಸಿಗುತ್ತಾ ಈ ಆಟಗಾರನಿಗೆ ಅವಕಾಶ: ಒಂದೇ ಒಂದು ಚಾನ್ಸ್ ಗಾಗಿ ಹಾತೊರೆಯುತ್ತಿದ್ದಾರೆ ಈ ಕ್ರಿಕೆಟರ್!

ಟೀಂ ಇಂಡಿಯಾದ ಸ್ಟಾರ್ ಬೌಲರ್ ಅಕ್ಷರ್ ಪಟೇಲ್ ವಡೋದರಾದಲ್ಲಿ ಪ್ರೇಯಸಿ ಮೇಹಾ ಪಟೇಲ್ ಅವರನ್ನು ವಿವಾಹವಾಗಲಿದ್ದಾರೆ.  ನ್ಯೂಜಿಲೆಂಡ್ ವಿರುದ್ಧದ ODI ಮತ್ತು T20 ಸರಣಿಯಿಂದ (IND vs NZ T20 ಸರಣಿ 2023) KL ರಾಹುಲ್ ಮತ್ತು ಅಕ್ಷರ್ ಪಟೇಲ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಅಂದಿನಿಂದ ಕೆಎಲ್ ರಾಹುಲ್ ಮಾತ್ರವಲ್ಲ, ಅಕ್ಷರ್ ಪಟೇಲ್ ಮದುವೆಯ ಸಿದ್ಧತೆ ಕೂಡ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಇದೀಗ ಆ ಸುದ್ದಿ ನಿಜವಾಗಿದೆ.

ಈ ಮದುವೆಯಲ್ಲಿ ಟೀಂ ಇಂಡಿಯಾ ಮತ್ತು ಗುಜರಾತ್ ನ ಕೆಲವು ಆಟಗಾರರು ಭಾಗಿಯಾಗಲಿದ್ದಾರೆ. ಅಕ್ಷರ್ ಪಟೇಲ್ ಮತ್ತು ಮೇಹಾ ಪಟೇಲ್ ಇಬ್ಬರೂ ಬಹಳ ಹಿಂದಿನಿಂದಲೂ ಪರಿಚಿತರು. ಗುಜರಾತಿ ಪದ್ಧತಿಯಂತೆ ಇಬ್ಬರೂ ವಿವಾಹವಾಗಲಿದ್ದು, ಅಕ್ಷರ್-ಮೇಹಾ ಒಂದು ವರ್ಷದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಇದನ್ನೂ ಓದಿ: Virat Kohli : ನಾನು ನಂಬರ್-1, ನನ್ನ ನಂತರ ವಿರಾಟ್.. ಪಾಕ್ ಕ್ರಿಕೆಟಿಗನ ವಿವಾದಿತ ಹೇಳಿಕೆ!

2021ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಅಕ್ಷರ್ ಪಟೇಲ್ 2014ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಪಟೇಲ್ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದು, ಸರಣಿಯ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದರು. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತವರಿನಲ್ಲಿ ನಡೆದ ಸರಣಿಯಲ್ಲೂ ಅವರು ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಅಕ್ಷರ್ ಭಾರತ ಪರ 8 ಟೆಸ್ಟ್, 49 ODI ಮತ್ತು 40 T20 ಪಂದ್ಯಗಳನ್ನು ಆಡಿದ್ದಾರೆ. ಕೇವಲ 8 ಟೆಸ್ಟ್ ಪಂದ್ಯಗಳಲ್ಲಿ 47 ವಿಕೆಟ್ ಪಡೆದಿದ್ದಾರೆ. ಏಕದಿನದಲ್ಲಿ 56 ವಿಕೆಟ್ ಹಾಗೂ ಟಿ20ಯಲ್ಲಿ 37 ವಿಕೆಟ್ ಪಡೆದಿರುವ ಈ ಆಲ್ ರೌಂಡರ್ ಬ್ಯಾಟ್ ನಲ್ಲೂ ಅದ್ಭುತ ಸಾಧನೆ ಮಾಡಿದ್ದಾರೆ. ಅವರು ಇಲ್ಲಿಯವರೆಗೆ 4 ಅಂತಾರಾಷ್ಟ್ರೀಯ ಅರ್ಧಶತಕಗಳನ್ನು ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News