ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಗ್ನಿ ಪಿ ಎಂದೂ ಕರೆಯಲ್ಪಡುವ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದೆ. ಇದೊಂದು ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಅಗ್ನಿ-1 ಹಾಗೂ ಅಗ್ನಿ-2 ಕ್ಷಿಪಣಿಗಳ ಬದಲಿಗೆ ಬಳಕೆಯಾಗಲಿದೆ.
Agni-5 Test Fired Successfully - 5000 ಕಿಮೀ ವ್ಯಾಪ್ತಿಯ ಮಾರಕ ಸಾಮರ್ಥ್ಯ ಹೊಂದಿರುವ ಅಗ್ನಿ-5 ಕ್ಷಿಪಣಿಯನ್ನು ಬುಧವಾರ ಯಶಸ್ವಿ ಉಡಾವಣೆ ಕೈಗೊಳ್ಳಲಾಗಿದೆ. ಮೇಲ್ಮೈಯಿಂದ ಮೇಲ್ಮೈಗೆ ಮಾರಕ ಕ್ಷಮತೆ (Surface To Surface Ballistic Missile) ಹೊಂದಿರುವ ಈ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ (APJ Abdul Kalam Island Odisha) ಉಡಾವಣೆ ಮಾಡಲಾಗಿದೆ.
ಮುಂದಿನ ಒಂದೆರಡು ವರ್ಷಗಳಲ್ಲಿ ಕ್ಷಿಪಣಿಯ ಪ್ರಯೋಗಗಳನ್ನು ನಡೆಸಲಾಗುವುದು ಮತ್ತು ಏಕ-ಹಂತದ ಘನ-ಪ್ರೊಪೆಲ್ಲಂಟ್ ಕ್ಷಿಪಣಿಯನ್ನು ಸ್ನೇಹಪರ ವಿದೇಶಗಳಿಗೆ ರಫ್ತು ಮಾಡಲು ಸಹ ಸಿದ್ಧಪಡಿಸಲಾಗುತ್ತದೆ. ಏಕೆಂದರೆ ಅದರ ಸ್ಟ್ರೈಕ್ ವ್ಯಾಪ್ತಿಯು ಕ್ಷಿಪಣಿ ಮಾರಾಟದ ಅಂತರರಾಷ್ಟ್ರೀಯ ಪ್ರಭುತ್ವಗಳ ಅನುಮತಿಸುವ ಮಿತಿಯಲ್ಲಿರುತ್ತದೆ.
ಜಲಾಂತರ್ಗಾಮಿ ನೌಕೆಗಳಿಂದ ಶತ್ರುಗಳ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವತ್ತ ಹೆಜ್ಜೆ ಇಟ್ಟಿರುವ ಭಾರತ, ಆಂಧ್ರಪ್ರದೇಶದ ಕರಾವಳಿಯಲ್ಲಿ 3,500 ಕಿ.ಮೀ ಸ್ಟ್ರೈಕ್ ರೇಂಜ್ ಪರಮಾಣು ಸಾಮರ್ಥ್ಯದ ಕೆ -4 ಜಲಾಂತರ್ಗಾಮಿ ಉಡಾವಣೆಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಿತು.
ಭಾರತ ತನ್ನ ಪರಮಾಣು ಸಾಮರ್ಥ್ಯದ ಅಭಿವೃದ್ಧಿ ಮತ್ತು ಬಲಪಡಿಸುವ ಪ್ರಕ್ರಿಯೆಯ ಭಾಗವಾಗಿ 3,500 ಕಿಲೋಮೀಟರ್ ವ್ಯಾಪ್ತಿಯ ಕೆ -4 ಶೌರ್ಯ ಜಲಾಂತರ್ಗಾಮಿ ಉಡಾವಣೆಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಶುಕ್ರವಾರ (ನವೆಂಬರ್ 8, 2019) ದಂದು ಪರೀಕ್ಷಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.