ನಗರದ ಅನೇಕ ಪ್ರದೇಶಗಳಲ್ಲಿ ನೀರಿನ ಕೊರತೆಯು ನೀಗಿಸಲಾಗದ ಸಮಸ್ಯೆಯಾಗಿ ತಲೆದೋರಿದೆ. ಪರಿಣಾಮವಾಗಿ ಅನೇಕ ವಸತಿ ಸಮುಚ್ಛಯಗಳು ಬಳಸಿದ ತ್ಯಾಜ್ಯ ನೀರನ್ನು ಶುದ್ಧ ನೀರಾಗಿ ಮರುಪಡೆಯುವ ಹಲವಾರು ಉಪಕ್ರಮಗಳನ್ನು ಅಳವಡಿಸಿಕೊಂಡಿವೆ. ಅವರೆಲ್ಲರೂ ಪ್ರತಿದಿನ ಲಕ್ಷಾಂತರ ಲೀಟರ್ ತ್ಯಾಜ್ಯ ನೀರನ್ನು ಶುದ್ಧ ಹಾಗೂ ಮರುಬಳಕೆ ಮಾಡಬಹುದಾದ ಜಲವಾಗಿ ಪರಿವರ್ತಿಸುತ್ತಿದ್ದಾರೆ.
ನೀರಿನ ಕೊರತೆ ಎಲ್ಲರಿಗೂ ಕಳವಳದ ಸಂಗತಿಯಾಗಿದೆ. ಇದರ ಜತೆಗೆ ಹೆಚ್ಚುತ್ತಿರುವ ಯುಟಿಲಿಟಿ ಬಿಲ್ಗಳು ಬೆಂಗಳೂರಿನ ಅಪಾರ್ಟ್ಮೆಂಟ್ಗಳ ನಿವಾಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ನೀರು ಪೋಲಾಗುವುದನ್ನು ತಡೆಯುವ ಮೂಲಕ ಯುಟಿಲಿಟಿ ಬಿಲ್ಗಳು ಕಡಿಮೆಯಾಗುವಂತೆ ನೋಡಿಕೊಳ್ಳುವುದು ವಸತಿ ಸಮುಚ್ಛಯಗಳಿಗೆ ಅನಿವಾರ್ಯವಾಗಿದೆ. ಈ ನಿರ್ಧಾರಕ್ಕೆ ಉತ್ತಮ ಪರಿಹಾರವೇ ಸ್ಮಾರ್ಟ್ ಮೀಟರ್ ಅಳವಡಿಕೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.