ಮಾಳಮಡ್ಡಿ ನಿವಾಸಿ ಅಶ್ವೀನ್ಕುಮಾರ ಘಾರ್ಗಿ ಎಂಬುವವರು ಅಕ್ಯೂರಾ ಇಂಜಿನಿಯರಿಂಗ್ ಎಂಟರ್ಪ್ರೈಜಸ್ನ ಮಾಲೀಕರಾಗಿದ್ದು ಅವರು ರಬ್ಬರ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕರಾಗಿರುತ್ತಾರೆ. ಅವರು ತಮ್ಮ ಉತ್ಪನ್ನಗಳ ತಯಾರಿಕೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ರಕ್ಷಣಾ ಪ್ಲಾಸ್ಟಿಕ್ ಕ್ಯಾಪ್ಗಳನ್ನು ಸ್ಲೀವ್ ಕಟಿಂಗ್ ಮಶೀನ್ ಸಹಾಯದಿಂದ ತಯಾರಿಸಲು ಯೋಜನೆಯನ್ನು ರೂಪಿಸಿದ್ದರು. ಸದರಿ ಸ್ಲೀವ್ ಕಟಿಂಗ್ ಮಶೀನ್ಗಾಗಿ ಇಂಟರ್ನೆಟ್ನಲ್ಲಿ ಹುಡುಕುತ್ತಿದ್ದಾಗ ಎದುರುದಾರ ಬೆಂಗಳೂರಿನ ರಾಶಿ ಅಶೋಸಿಯೆಟ್ಸ್ ಆ ಮಶೀನುಗಳನ್ನು ತಯಾರಿಸುತ್ತಿರುವುದು ತಿಳಿಯಿತು. ನಂತರ ಉಭಯತರು ಮಾತುಕತೆ ನಡೆಸಿ ರೂ.92,934/- ಕಿಮ್ಮತ್ತಿನ ಮಶೀನನ್ನು ದಿ:10/06/2022 ರಂದು ಕಳುಹಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.