ಚಂದ್ರಯಾನ-3 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಮಧ್ಯಾಹ್ನ 2.35 ಕ್ಕೆ ಲಾಂಚ್ ವೆಹಿಕಲ್ ಮಾರ್ಕ್ -3 (ಎಲ್ವಿಎಂ -3) ರಾಕೆಟ್ನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಚಂದ್ರಯಾನ-3ರ ಉಡಾವಣೆಯ ಕೌಂಟ್ ಡೌನ್ ಗುರುವಾರ, ಜುಲೈ 13ರಂದು ಭಾರತೀಯ ಕಾಲಮಾನ 14:35ಕ್ಕೆ ಆರಂಭಗೊಂಡಿದೆ. ಈ ಉಡಾವಣೆ, ಶುಕ್ರವಾರ, ಜುಲೈ 14ರಂದು ಮಧ್ಯಾಹ್ನ 2:35ಕ್ಕೆ ನೆರವೇರಲಿದೆ. ಚಂದ್ರಯಾನ-3ರಂತಹ ಪ್ರಮುಖ ಯೋಜನೆಗೆ ಹಲವು ಮಹತ್ವದ ಸಿದ್ಧತೆಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ ಕೆಲವನ್ನು ನಾವು ಇಲ್ಲಿ ಗಮನಿಸೋಣ.
Chandrayan-3: ಅಂದಾಜು 75 ಮಿಲಿಯನ್ ಡಾಲರ್ ಮೊತ್ತದಲ್ಲಿ (615 ಕೋಟಿ) ಅಭಿವೃದ್ಧಿ ಪಡಿಸಲಾಗಿರುವ ಭಾರತದ ಚಂದ್ರಯಾನ-3 ಯೋಜನೆ ಭಾರತದ ದಕ್ಷಿಣದಲ್ಲಿರುವ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಜುಲೈ 14ರ ಮಧ್ಯಾಹ್ನ 2:35ಕ್ಕೆ ಉಡಾವಣೆಗೊಳ್ಳಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.