ಪ್ರೇಕ್ಷಕರನ್ನು ರಂಜಿಸುವ ಜೊತೆ ಅವರಿಗೆ ಶಿಕ್ಷಣ ನೀಡುವ ಉದ್ದೇಶಿತ ಸಿನಿಮಾಗಳು ಇತ್ತೀಚಿಗೆ ಹಚ್ಚಾಗುತ್ತಿವೆ. ಇನ್ನು ಲೈಂಗಿಕ ಶಿಕ್ಷಣ ಮನುಷ್ಯನಿಗೆ ಬಹು ಮುಖ್ಯ ಎಂಬ ಅಂಶವನ್ನು ಹೇಳಲು ನಟಿ ರಾಕುಲ್ ಪ್ರೀತ್ ಸಿಂಗ್ ʼಛತ್ರಿವಾಲಿʼ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಛತ್ರಿವಾಲಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇದೀಗ WION ಜೊತೆ ಮಾತನಾಡಿರುವ ರಾಕುಲ್ ತಮ್ಮ ಸಿನಿಮಾದ ಬಗ್ಗೆ ತಿಳಿಸಿದ್ದಾರೆ.
ಇಂದಿನ ಕಾಲದಲ್ಲಿ ಲೈಂಗಿಕ ಶಿಕ್ಷಣವು ತುಂಬಾ ಅಗತ್ಯವಾಗಿದೆ. ಈ ವಿಷಯದ ಬಗ್ಗೆ ಜನರು ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ಎಂದಿನಂತೆ ಮುಂದೆ ಬಂದಿದೆ. ವಾಸ್ತವವಾಗಿ, ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅಕ್ಷಯ್ ಕುಮಾರ್ ಅವರು ʼಓ ಮೈ ಗಾಡ್ 2ʼ ಚಿತ್ರದಲ್ಲಿ ತೋರಿಸಿದ್ದರು. ಈಗ ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ರಕುಲ್ ಪ್ರೀತ್ ಸಿಂಗ್ ಕೂಡ ಲೈಂಗಿಕ ಶಿಕ್ಷಣದ ಪಾಠ ಹೇಳಲು ಬರುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.