Doomsday Fish facts : ಪ್ರಕೃತಿ ನಮಗೆ ಆಗಾಗ ಕೆಲವೊಂದು ಘಟನೆಗಳ ಮೂಲಕ ಎಚ್ಚರಿಕೆ ನೀಡುತ್ತದೆ. ಆಗ ನಾವು ಎಚ್ಚೆತ್ತುಕೊಳ್ಳಲಿಲ್ಲ ಅಂದ್ರೆ ವಿನಾಶ ಕಂಡಿತ. ಈ ಪೈಕಿ ದೇವರು ಮೀನು ಎಂದು ಕರೆಯಲ್ಪಡುವ ಅಪರೂಪದ ಮೀನು ಇದೀಗ ಕಡಲ ತೀರಕ್ಕೆ ಬಂದು ಸಾವನ್ನಪ್ಪಿದ್ದು, ಸಾರ್ವಜನಿಕರ ಭಯಕ್ಕೆ ಕಾರಣವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Doomsday Fish: ಮೀನೊಂದು ಜಗತ್ತಿನ ಅಳಿವಿನ ಮುನ್ಸೂಚನೆ ಕೊಟ್ಟಿದೆ.
doomsday fish: ಪ್ರಕೃತಿಯ ವಿಕೋಪದ ಮುನ್ಸೂಚನೆಯನ್ನು ಪ್ರಾಣಿಗಳು ಕೊಡುತ್ತವೆ ಎಂದು ಹೇಳಲಾಗುತ್ತಿದೆ. ಇದೀಗ ಮೀನೊಂದು ಪ್ರಳಯದ ಮನಸೂಚನೆ ಕೊಟ್ಟಿದೆ.
ಜಪಾನಿನಲ್ಲಿ ಈ ಮೀನನ್ನು "ಡೂಮ್ಸ್ಡೇ ಫಿಶ್" ಅಥವಾ "ಫಿಶ್ ಆಫ್ ದಿ ಲಾಸ್ಟ್ ಡೇ" ಎಂದು ಕರೆಯಲಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಇದನ್ನು "ಪ್ರಳಯದ ಮೀನು" ಎಂದು ಕರೆಯಲಾಗುತ್ತದೆ.
doomasday fish: ಸಮುದ್ರದಲ್ಲಿ ಸಾಮಾನ್ಯವಾಗಿ ಲಕ್ಷಗಟ್ಟಲೆ ಮೀನುಗಳ ರೀತಿಗಳನ್ನು ನೋಡಬಹುದು. ಆದರೆ ʻದೇವರ ಮೀನುʼ ಎಂದು ಕರೆಯಲ್ಪಡುವ ಈ ಮೀನು ಹೆಸರಿನಂತೆ ಆಕರದಲ್ಲಿಯೂ ವಿಚಿತ್ರವಾಗಿ ಕಾಣುತ್ತದೆ. ಈ ಮೀನು ಕಾಣಿಸಿಕೊಂಡರೆ ಸುನಾಮಿ, ಪ್ರಳಯದಂತಹ ಆಪತ್ತು ಎದುರಾಗುತ್ತದೆ ಎಂದು ನಂಬಲಾಗುತ್ತದೆ. ಇದೀಗ ಈ ಮೀನಿನ ಶವ ಸಮುದ್ರದ ದಡದಲ್ಲಿ ಕಾಣಿಸಿಕೊಂಡಿದ್ದು, ಇದೇನೋ ದೊಡ್ಡ ಸಂಭವದ ಮುನ್ಸೂಚನೆ ಎಂದು ಜನರು ಬಯಪಡಲು ಆರಂಭಿಸಿದ್ದಾರೆ.