ಒಂದು ವೇಳೆ ನೀವೂ ಕೂಡ ಫೇಸ್ ಬುಕ್ (Facebook) ಬಳಕೆದಾರರಾಗಿದ್ದರೆ, ಈ ಸುದ್ದಿ ನಿಮಗಾಗಿ. ಈ ಸಾಮಾಜಿಕ ಮಾಧ್ಯಮದ ಮೇಲೆ ಕಾಮೆಂಟ್ (Facebook Comment) ಮಾಡುವಾಗ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯವಾಗಿದೆ. ಏಕೆ ತಿಳಿದುಕೊಳ್ಳೋಣ ಬನ್ನಿ.
ಕೆಲವು ಅಪಾಯಕಾರಿ ಅಪ್ಲಿಕೇಶನ್ಗಳಿಂದಾಗಿ ನಿಮ್ಮ ಫೇಸ್ಬುಕ್ ಡೇಟಾ ಅಪಾಯದಲ್ಲಿದೆ. ಡಾಕ್ಟರ್ ವೆಬ್ ಮಾಲ್ವೇರ್ ವಿಶ್ಲೇಷಕರು ಅಂತಹ ಕೆಲವು ಅಪಾಯಕಾರಿ ಅಪ್ಲಿಕೇಶನ್ಗಳನ್ನು ಪಟ್ಟಿ ಮಾಡಿದ್ದು ಅವು ನಿಮ್ಮ ಡೇಟಾವನ್ನು ಹಾನಿಗೊಳಿಸಬಹುದು ಎಂದು ಹೇಳಲಾಗುತ್ತಿದೆ.
ಸುಮಾರು 500 ಮಿಲಿಯನ್ ಫೇಸ್ಬುಕ್ ಬಳಕೆದಾರರ ಮೊಬೈಲ್ ಫೋನ್ ಸಂಖ್ಯೆಗಳು ಟೆಲಿಗ್ರಾಮ್ ಬೋಟ್ ಮೂಲಕ ಮಾರಾಟಕ್ಕೆ ಬಂದಿವೆ ಎಂದು ಮದರ್ಬೋರ್ಡ್ ವರದಿ ತಿಳಿಸಿದೆ.ದತ್ತಾಂಶವು ಸುಮಾರು 6 ಲಕ್ಷ ಭಾರತೀಯ ಬಳಕೆದಾರರ ಸಂಖ್ಯೆಯನ್ನು ಒಳಗೊಂಡಿದೆ ಎಂದು ಭದ್ರತಾ ಸಂಶೋಧಕ ಅಲೋನ್ ಗಾಲ್ ಹೇಳಿದ್ದಾರೆ, ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಸಮಸ್ಯೆಯನ್ನು ಮೊದಲು ಎತ್ತಿ ತೋರಿಸಿದ್ದಾರೆ.
ಸುಮಾರು 120 ಮಿಲಿಯನ್ ಫೇಸ್ಬುಕ್ ಖಾತೆಗಳ ಖಾಸಗಿ ಸಂದೇಶಗಳಿಗೆ ಹ್ಯಾಕರ್ಸ್ ಪ್ರವೇಶವನ್ನು ಪಡೆದಿದ್ದು ಅದರಲ್ಲಿ ಹಣದ ಮೂಲದ 81,000 ಖಾತೆಗಳಿಂದ ಇಂತಹ ಸಂದೇಶಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.