ಜಗತ್ತಿನೆಲ್ಲೆಡೆ ಕೊರೊನಾ ಪ್ರಕರಣಗಳು ಇನ್ನೇನು ಇಳಿಕೆಯಾಗುತ್ತಿರುವ ಸಂದರ್ಭದಲ್ಲಿಯೇ ಈ ಮಾಹಾಮಾರಿ ಇನ್ನೂ ಮುಗಿದಿಲ್ಲ ಅದು ರೂಪಾಂತರಗೊಳ್ಳುತ್ತಿದೆ ಸುಮಾರು 110 ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಈ ಹೆಚ್ಚಳಕ್ಕೆ ಮುಖ್ಯವಾಗಿ ಓಮಿಕ್ರಾನ್ ನ ಎರಡು ಉಪ-ರೂಪಾಂತರಗಳು ಕಾರಣ ಎಂದು ಅದು ಹೇಳಿದೆ.
ಇಸ್ರೇಲ್ನಲ್ಲಿ ನಡೆಸಿದ ಹೊಸ ಮಾಡೆಲಿಂಗ್ ಅಧ್ಯಯನದ ಪ್ರಕಾರ, ಓಮಿಕ್ರಾನ್ ಸಬ್ವೇರಿಯಂಟ್ಗಳು ಮುಂದಿನ ಒಂದೆರಡು ತಿಂಗಳುಗಳಲ್ಲಿ ಹರಡಲಿವೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್ಮೆಂಟ್ ಜರ್ನಲ್ನಲ್ಲಿ ಕಳೆದ ವಾರ ಪ್ರಕಟವಾದ ಸಂಶೋಧನೆಯು, ಡೆಲ್ಟಾ ಅದರ ಹಿಂದಿನ ರೂಪಾಂತರಗಳನ್ನು ನಿಯಂತ್ರಿಸಿದ್ದರೂ ಕೂಡ ಈಗ ಮತ್ತೆ ಹೊಸ ರೂಪಾಂತರದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಅಧ್ಯಯನ ಹೇಳಿದೆ.
ದೇಶದಲ್ಲಿ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ಮಧ್ಯೆ, ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಪರಿಸ್ಥಿತಿ ಗಂಭೀರವಾಗುತ್ತಾ ಹೋದರೆ ಹೋದರೆ ಜನಸಂದಣಿಯ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಮತ್ತೆ ರಾಜ್ಯಾದ್ಯಂತ ಕಡ್ಡಾಯಗೊಳಿಸಬಹುದು ಎಂದು ಹೇಳಿದ್ದಾರೆ.
Fourth Wave Of Coronavirus - ಭಾರತದಲ್ಲಿ ಕೋರೋನಾ ವೈರಸ್ ನ (Coronavirus) ನಾಲ್ಕನೆಯ ಅಲೆಯ ಅಪಾಯ ಎದುರಾಗಿರುವ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ನ್ಯೂಜಿಲ್ಯಾಂಡ್ ದೇಶದಲ್ಲಿ ಒಂದೇ ದಿನದಲ್ಲಿ 20 ಸಾವಿರ ಕೊರೊನಾವೈರಸ್(Covid-19) ಪ್ರಕರಣಗಳು ಪತ್ತೆಯಾಗಿರುವುದು ಇಡೀ ವಿಶ್ವದಲ್ಲಿಯೇ ಭೀತಿಯ ವಾತಾವರಣ ಮತ್ತೊಮ್ಮೆ ಸೃಷ್ಟಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.