IPL 2022 Final: ಐಪಿಎಲ್ 15ನೇ ಆವೃತ್ತಿಯ ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು. ಬಳಿಕ ಕಣಕ್ಕೆ ಇಳಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ 18.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ತಮ್ಮ ಮೊದಲ ಋತುವಿನಲ್ಲಿಯೇ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದ ಗುಜರಾತ್ ತಂಡದ ನೇತೃತ್ವವನ್ನು ವಹಿಸಿದ್ದ ಹಾರ್ದಿಕ್ ಪಾಂಡ್ಯ ಈಗ ಮುಂಬರುವ ಟಿ 20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ.
ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿರುವ ಗುಜರಾತ್ ಟೈಟಾನ್ಸ್ ತಂಡವು ತನ್ನ ಮೊದಲ ಆವೃತ್ತಿಯಲ್ಲಿ ಟೂರ್ನಿಯುದ್ಧಕ್ಕೂ ನೀಡಿದ ಅದ್ಬುತ ಪ್ರದರ್ಶನದಿಂದಾಗಿ ಈಗ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಹೌದು, ಇದು ಹಲವು ತಂಡಗಳಿಗೂ ಸಾಧ್ಯವಾದ ಸಾಧನೆಯನ್ನು ಈಗ ಗುಜರಾತ್ ತಂಡವು ತನ್ನ ಮೊದಲ ಯತ್ನದಲ್ಲಿಯೇ ಮಾಡಿದೆ.
ರಾಜಸ್ಥಾನದ ಟೀಂನಲ್ಲಿ ಅತ್ಯುತ್ತಮ ಸ್ಪಿನ್ನರ್ಗಳಿದ್ದಾರೆ. ಹಾಗೆ, ಗುಜರಾತ್ ಟೀಂ ಐಪಿಎಲ್ನ ಅತ್ಯುತ್ತಮ ಫಿನಿಶರ್ ಗಳನ್ನು ಹೊಂದಿದೆ. ಹೀಗಾಗಿ ದಿಗ್ಗಜ ಆಟಗಾರರ ನಡುವಿನ ಫೈನಲ್ ಮ್ಯಾಚ್ ರೋಚಕತೆವಾಗಿದೆ.
ಮಾಹಿತಿ ಪ್ರಕಾರ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸುವ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 6:30ಕ್ಕೆ ಆರಂಭವಾಗಲಿದ್ದು, 50 ನಿಮಿಷಗಳ ಕಾಲ ನಡೆಯಲಿದೆ. ಹೀಗಾಗಿ, 7:30ಕ್ಕೆ ಟಾಸ್ ನಡೆಯಲಿದ್ದು, 30 ನಿಮಿಷಗಳ ನಂತರ ಪಂದ್ಯ ಆರಂಭವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.