ಅಹ್ಮದಾಬಾದ್ : ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿರುವ ಗುಜರಾತ್ ಟೈಟಾನ್ಸ್ ತಂಡವು ತನ್ನ ಮೊದಲ ಆವೃತ್ತಿಯಲ್ಲಿ ಟೂರ್ನಿ ಯುದ್ಧಕ್ಕೂ ನೀಡಿದ ಅದ್ಬುತ ಪ್ರದರ್ಶನದಿಂದಾಗಿ ಈಗ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಹೌದು, ಇದು ಹಲವು ತಂಡಗಳಿಗೂ ಸಾಧ್ಯವಾದ ಸಾಧನೆಯನ್ನು ಈಗ ಗುಜರಾತ್ ತಂಡವು ತನ್ನ ಮೊದಲ ಯತ್ನದಲ್ಲಿಯೇ ಮಾಡಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2022 ಟೂರ್ನಿಯ ಫೈನಲ್ ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡವು ಜೈಸ್ವಾಲ್ (22) ಹಾಗೂ ಜೋಸ್ ಬಟ್ಲರ್(39) ಅವರ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭವನ್ನು ಕಂಡುಕೊಳ್ಳುತ್ತಿತ್ತು, ಆದರೆ ಈ ಸಂದರ್ಭದಲ್ಲಿ ಜೈಸ್ವಾಲ್, ಯಶ್ ದಯಾಳ್ ಅವರ ಎಸೆತದಲ್ಲಿ ಸಾಯಿ ಕಿಶೋರ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸುವ ಮೂಲಕ ರಾಜಸ್ತಾನ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು.ಈ ಹಂತದಲ್ಲಿ ಉತ್ತಮ ನೆಲೆಯನ್ನು ಕಂಡುಕೊಳ್ಳುತ್ತಿದ್ದ ಜೋಸ್ ಬಟ್ಲರ್ ಅವರ ವಿಕೆಟ್ ನ್ನು ಹಾರ್ದಿಕ್ ಪಾಂಡ್ಯ ಕಬಳಿಸಿದ್ದು ಪಂದ್ಯಕ್ಕೆ ಸಾಕಷ್ಟು ತಿರುವು ನೀಡಿತು ಎಂದು ಹೇಳಬಹುದು.
ಇದನ್ನೂ ಓದಿ: KL Rahul: 4 IPL ಸೀಸನ್‌ಗಳಲ್ಲಿ 600+ ರನ್ ಗಳಿಸಿದ ಮೊದಲ ಆಟಗಾರ ಕೆ.ಎಲ್.ರಾಹುಲ್!
AAPDE GT GAYA!
WE ARE THE #IPL Champions 2⃣0⃣2⃣2⃣!#SeasonOfFirsts | #AavaDe | #GTvRR | #IPLFinal pic.twitter.com/wy0ItSJ1Y3
— Gujarat Titans (@gujarat_titans) May 29, 2022
ಇದಾದ ನಂತರ ಸಂಜು ಸ್ಯಾಮ್ಸನ್ ಹಾಗೂ ಪಡಿಕ್ಕಲ್ ಅವರು ಕೂಡ ಬೇಗನೆ ವಿಕೆಟ್ ಒಪ್ಪಿಸಿದ್ದು, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ನಂತರ ಬಂದಂತಹ ಯಾವ ಆಟಗಾರನು ಕೂಡ 20 ರ ಗಡಿ ದಾಟಲಿಲ್ಲ. ಆರಂಭದಿಂದಲೂ ಮೇಲುಗೈ ಸಾಧಿಸುತ್ತಾ ಹೋದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ ಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 9 ವಿಕೆಟ್ ಕಬಳಿಸುವ ಮೂಲಕ 130 ರನ್ ಗಳಿಗೆ ಕಟ್ಟಿ ಹಾಕಿತು.ಗುಜರಾತ್ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಹಾರ್ದಿಕ್ ಪಾಂಡ್ಯ, ನಾಲ್ಕು ಓವರ್ ಗಳಲ್ಲಿ ಕೇವಲ 17 ರನ್ ಗಳನ್ನು ನೀಡುವುದರ ಮೂಲಕ ಮೂರು ಪ್ರಮುಖ ವಿಕೆಟ್ ಗಳನ್ನು ಕಬಳಿಸಿದರು, ಇನ್ನೂಂದೆಡೆಗೆ ಇವರಿಗೆ ಸಾಥ್ ನೀಡಿದ ಸಾಯಿ ಕಿಶೋರ್ ಕೂಡ ಎರಡು ವಿಕೆಟ್ ಗಳನ್ನು ಪಡೆಯುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.
.@gujarat_titans - The #TATAIPL 2022 Champions! 👏 👏 🏆 👍
The @hardikpandya7-led unit, in their maiden IPL season, clinch the title on their home ground - the Narendra Modi Stadium, Ahmedabad. 🙌🙌 @GCAMotera
A round of applause for the spirited @rajasthanroyals! 👏 👏 #GTvRR pic.twitter.com/LfIpmP4m2f
— IndianPremierLeague (@IPL) May 29, 2022
ರಾಜಸ್ಥಾನ್ ರಾಯಲ್ಸ್ ನೀಡಿದ 131 ರನ್ ಸಾಧಾರಣ ಗೆಲುವಿನ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ತಂಡದ ಮೊತ್ತ 23 ರನ್ ಗಳಾಗುವಷ್ಟರಲ್ಲಿ ವೃದ್ದಿಮಾನ್ ಸಹಾ ಹಾಗೂ ಮ್ಯಾಥೂ ವಾಡೆ ಅವರ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಸಿಲುಕಿತ್ತು.ಈ ಹಂತದಲ್ಲಿ ಜೊತೆಯಾದ ಶುಬ್ಮನ್ ಗಿಲ್ ಅಜೇಯ 45, ಹಾರ್ದಿಕ್ ಪಾಂಡ್ಯ,34 ಹಾಗೂ ಡೇವಿಡ್ ಮಿಲ್ಲರ್ 32 ರನ್ ಗಳಿಸುವುದರ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಗೆಲುವಿನ ನಗೆಯನ್ನು ಬೀರುವಂತೆ ಮಾಡಿದರು. ಕೊನೆಗೆ ಗುಜರಾತ್ ತಂಡವು 18.1 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ: IPL: ಮುಂದಿನ ವರ್ಷ ಆರ್‌ಸಿಬಿಗೆ ʼಎಬಿಡಿʼ ಬಲ!
ગરવી ગુજરાત! ✊🏽
ᴛʜɪs ᴛᴇᴀᴍ | ᴛʜɪs sᴛᴀᴅɪᴜᴍ | ᴛʜɪs sᴛᴀᴛᴇ 💙 pic.twitter.com/D2dDb5fYlB— Gujarat Titans (@gujarat_titans) May 29, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.