ಟಾಲಿವುಡ್ ಚಿತ್ರರಂಗದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ವಿಶ್ವನಾಥ್ ಅವರು ಫೆಬ್ರವರಿ 2 ರಂದು ನಿಧನರಾದರು ಎಂಬುದು ಎಲ್ಲರಿಗೂ ನೆನಪಿದೆ. ಈ ದುರಂತದ ಸುದ್ದಿ ಮರೆಯುವ ಮುನ್ನವೇ ಪತ್ನಿ ಕಾಶಿನಾಧುನಿ ಜಯಲಕ್ಷ್ಮಿ ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ. ಕೆ ವಿಶ್ವನಾಥ್ ನಿಧನದಿಂದ ತೀವ್ರ ಅಸ್ವಸ್ಥರಾಗಿದ್ದ ಅವರು ಕಳೆದ ಕೆಲವು ದಿನಗಳಿಂದ ಅಪೋಲೋ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ತೆಲುಗು ಚಿತ್ರರಂಗದ ದಿಗ್ಗಜ, ಹೆಸರಾಂತ ನಿರ್ದೇಶಕ ಕೆ ವಿಶ್ವನಾಥ್ (92) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಟಾಲಿವುಡ್ ಸಿನಿರಂಗದಲ್ಲಿ ‘ಕಲಾ ತಪಸ್ವಿ’ ಎಂದೇ ಬಿರುದಾಂಕಿತರಾಗಿದ್ದ ನಿರ್ದೇಶಕ ಕಾಶಿನಾಥುನಿ ವಿಶ್ವನಾಥ್ ಅವರು ಕಳೆದ ಕೆಲ ಸಮಯದಿಂದ ವಯೋಸಹಜ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.